ರಿಪ್ಪನ್‌ಪೇಟೆಯಲ್ಲಿ RSS ಶತಮಾನದ ಆದರ್ಶಪೂರ್ಣ ಜೀವನಯಾತ್ರೆ

By malnad tech

Updated on:

Spread the love

ರಿಪ್ಪನ್‌ಪೇಟೆ ; ಸಂಘವು ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ನಂಬಿಕೆಯಲ್ಲಿ ಸತತ ನೂರು ವರ್ಷ ಕೆಲಸ ಮಾಡಿ ಅನೇಕ ಜಟಿಲ ಸವಾಲು. ತಾತ್ಸರ ವಿರೋಧ ಈ ಎಲ್ಲ ಹಂತವನ್ನು ದಾಟಿ ಆರ್.ಎಸ್.ಎಸ್ ಈಗ ಸಮಾಜದಲ್ಲಿ ಸ್ವೀಕಾರದ ಹಂತವನ್ನು ತಲುಪಿ ದೇಶದ ಮೂಲೆ ಮೂಲೆಗಳಲ್ಲಿ ತಲುಪುವ ಮೂಲಕ ಶತಮಾನದ ಆದರ್ಶಪೂರ್ಣ ಜೀವನಯಾತ್ರೆಯೊಂದಿಗೆ ಸಂಘಟನಾ ಶಕ್ತಿಯಾಗಿದೆ ಎಂದು ಶಿವಮೊಗ್ಗ ವಿಭಾಗ ಪ್ರಚಾರಕ್ ಭರತರಾಜ್ ಹೇಳಿದರು.

ಇಲ್ಲಿನ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿನಾಯಕಪೇಟೆ ಮಂಡಲದ ವಿಜಯದಶಮಿ ಉತ್ಸವದಲ್ಲಿ ಶುಕ್ರವಾರ ಸಂಜೆ ಬೌದ್ದಿಕ್ ನೀಡಿದರು.

ವಿನಾಯಕ ಪೇಟೆಯಲ್ಲೂ 50 ವರ್ಷದ ಹಿಂದಿನಿಂದಲೂ ಆರ್.ಎಸ್.ಎಸ್. ಶಾಖೆಯ ಮೂಲಕ ದೇಶಭಕ್ತಿಯ ಪಾಠವನ್ನು ಕಲಿಸುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷ ಪೂರ್ಣವಾದರೂ ರಿಪ್ಪನ್ ಎಂಬ ಬ್ರಿಟಿಷ್ ಅಧಿಕಾರಿಯ ಹೆಸರನ್ನೇ ನಾವು ನಮ್ಮೂರಿಗೆ ಇಟ್ಟುಕೊಂಡಿದ್ದೇವೆ. ಅದರ ಬದಲು ಸ್ವದೇಶಿ ಹೆಸರಾಗಿ ವಿನಾಯಕ ಪೇಟೆ ಎಂದು ಆಗಲಿ ಸಮಾಜ ಸ್ವೀಕಾರ ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಹಕಾರ್ಯವಾಹ ಕಾರ್ತಿಕ್, ದೇವರಾಜ್, ನಿಖಿತ್, ಭರತ, ಅನೂಪ್, ಶ್ರೀಕಾಂತ ಮಂಜುನಾಥ, ಮಂಜು, ಗೋಪಾಲ, ಇನ್ನಿತರರು ಹಾಜರಿದ್ದರು.

ಕಡೆಗೂ ಮಲೆನಾಡಿನ ರೈಲು ಪ್ರಯಾಣಿಕರಿಗೆ ದೊರಕಿದ ಪ್ರಯಾಣ ಭಾಗ್ಯ

ರಿಪ್ಪನ್‌ಪೇಟೆ ; ಮಲೆನಾಡಿನ ರೈಲ್ವೆ ಪ್ರಯಾಣಿಕರ ಬಹುಕಾಲಗಳ ಬೇಡಿಕೆಯಾಗಿದ್ದ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಯ ಬಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರರವರ ಸತತ ಪರಿಶ್ರಮದಿಂದಾಗಿ ಇದೇ ಅಕ್ಟೋಬರ್ 6 ರಿಂದ ತಾಳುಗುಪ್ಪ – ಬೆಂಗಳೂರು – ಮೈಸೂರು ಮಾರ್ಗವಾಗಿ ಸಂಚರಿಸುವ ಇಂಟರ್‌ಸಿಟಿ ಮತ್ತು ಪ್ಯಾಸೆಂಜರ್ ರೈಲುಗಳನ್ನು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿರುವುದರ ಬಗ್ಗೆ ಮಲೆನಾಡಿನ ರೈಲ್ವೆ ಪ್ರಯಾಣಿಕರಿಗೆ ದೊರಕಿಸಿದ ಭಾಗ್ಯವೆಂದು ಮಲೆನಾಡಿನ ರೈಲ್ವೆ ಪ್ರಯಾಣಿಕರು ಸಂಸದ ಬಿ.ವೈ.ರಾಘವೇಂದ್ರರವರನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್, ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ದಿ.ಎಸ್.ಜಿ.ರಂಗನಾಥರವರ ಬಹುವರ್ಷದ ಕನಸು ನನಸು ಮಾಡುವ ಮೂಲಕ ಸಂಸದ ಬಿ.ವೈ.ರಾಘವೇಂದ್ರರವರು ಮತದಾರರ ಆಶೋತ್ತರವನ್ನು ಈಡೇರಿಸಿದಂತಾಗಿದೆ ಎಂದು ಮಲೆನಾಡಿನ ಬೈಂದೂರು, ಭಟ್ಕಳ, ಸಿಗಂದೂರು, ನಗರ, ನಾಗೋಡಿ, ಹೊಸನಗರ, ಕೋಣಂದೂರು, ಹೊಂಬುಜ, ರಿಪ್ಪನ್‌ಪೇಟೆ, ಬೆಳ್ಳೂರು, ಅಮೃತ, ಹೆದ್ದಾರಿಪುರ, ತಳಲೆ, ಹುಂಚದಕಟ್ಟೆ, ದೇಮ್ಲಾಪುರ, ಬಿದರಹಳ್ಳಿ, ನಿಟ್ಟೂರು, ಬುಕ್ಕಿವರೆ, ಕಳಸೆ ತಮ್ಮಡಿಕೊಪ್ಪ, ಕೆಂಚನಾಲ, ಆಲವಳ್ಳಿ, ಮಸರೂರು, ಬೆನವಳ್ಳಿ, ಹರತಾಳು, ಸೊನಲೆ ಹೀಗೆ ಇತರ ಮಜರೆ ಗ್ರಾಮಗಳ ವಿದ್ಯಾವಂತ ಯುವಕ ಯುವತಿಯರಿಗೆ, ಅನಾರೋಗ್ಯ ಪೀಡಿತರಿಗೆ, ವಯೋವೃದ್ದರಿಗೆ ಕಡಿಮೆ ಖರ್ಚಿನಲ್ಲಿ ರಾಜಧಾನಿ ಬೆಂಗಳೂರು – ಮೈಸೂರು – ತುಮಕೂರು ಇನ್ನಿತರ ಕಡೆಗಳಿಗೆ ಓಡಾಡಲು ಅನುಕೂಲ ಕಲ್ಪಸಿರುವ ಸಂಸದ ಬಿ.ವೈ.ರಾಘವೇಂದ್ರರಿಗೆ ಅಭಿನಂದಿಸಿದ್ದಾರೆ.

ಇನ್ನೂ ಇದು ಪ್ರಾಯೋಗಿಕ ನಿಲುಗಡೆ ಆಗಿರುವುದರಿಂದ ಪ್ರಯಾಣಿಕರು ಅರಸಾಳು ಎಂದೇ ಟಿಕೇಟ್ ಬುಕ್ ಮಾಡಿ. ಏಕೆಂದರೆ ಅರಸಾಳು ಮುಖ್ಯ ನಿಲ್ದಾಣವಾಗದ ಹೊರತು ಅರಸಾಳಿನಲ್ಲಿ ನಿಯಮದ ಪ್ರಕಾರ ರೈಲು ನಿಲುಗಡೆ ಕೊಡುವುದಿಲ್ಲ. ಇನ್ನೂ ಹಳಿಗಳ ಡಬ್ಲಿಂಗ್ ಆಗಿ ಕನಿಷ್ಟ ಎರಡು ಪ್ಲಾಟ್‌ಫಾರಂ ಇರಬೇಕು. ಈಗ ಅರಸಾಳು ಹಾಲ್ಟ್ ನಿಲ್ದಾಣವಾಗಿದೆ. ಈ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಸಿಬ್ಬಂದಿ ರೈಲ್ವೆ ಇಲಾಖೆಯ ಖಾಯಂ ನೌಕರನನ್ನು ನೇಮಕಗೊಳಿಸಬೇಕು ಹಾಗೂ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸವ ವ್ಯವಸ್ಥೆಯನ್ನು ಮಾಡಬೇಕೆಂದು ಪ್ರಯಾಣಿಕರ ಪರವಾಗಿ ಇಲ್ಲಿನ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಗ್ರಾಮ ಪಂಚಾಯಿತ್ ಸದಸ್ಯ ಡಿ.ಈ.ಮಧುಸೂದನ್, ಅರಸಾಳು ಗ್ರಾಮ ಪಂಚಾಯಿತ್ ಸದಸ್ಯ ಅರುಣ್, ಪಿಯೂಸ್‌ ರೋಡ್ರಿಗಸ್, ಮುಡುಬ ಧರ್ಮಪ್ಪ, ಶ್ರೀಪಾದಭಟ್, ಬಿ.ಟಿ.ತೀರ್ಥಪ್ಪ, ಪತ್ರಿಕಾ ಹೇಳಿಕೆ ಮೂಲಕ ಸಂಸದ ಬಿ.ವೈ.ರಾಘವೇಂದ್ರರನ್ನು ಒತ್ತಾಯಿಸುವ ಮೂಲಕ ಮಲೆನಾಡಿನ ಪ್ರಯಾಣಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸಂಸದರ ಕಾರ್ಯವನ್ನು ಪ್ರಶಂಸಿಸಿದ್ದಾರೆ.

Leave a comment