ಹೊಸನಗರದಲ್ಲಿ ದಸರಾ ಆಚರಣೆ  ; ಪ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಕೆಲವು ಸದಸ್ಯರು ಗೈರು !

By malnad tech

Published on:

Spread the love

ಹೊಸನಗರ ; ಪಟ್ಟಣದ ಎಲ್ಲ ದೇವಸ್ಥಾನಗಳಲ್ಲಿ 11 ದಿನಗಳ ಕಾಲ ದಸರಾ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಸಾರ್ವಜನಿಕರ ಅನ್ನಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು‌.

ದಸರಾ ಮೆರವಣಿಗೆಗೆ ಗೈರು !

ಗುರುವಾರ ದಸರಾದ ಅಂತಿಮ ದಿನ ಪಟ್ಟಣ ಪಂಚಾಯತಿ, ತಾಲ್ಲೂಕು ಆಡಳಿತ ಹಾಗೂ ನಾಡ ಹಬ್ಬಗಳ ಸಮಿತಿ, ವಿವಿಧ ಸಂಘ-ಸಂಸ್ಥೆಗಳಿಂದ ನಾಡ ಹಬ್ಬ ದಸರಾ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸಬೇಕಾಗಿದ್ದು ಆದರೆ ಈ ವರ್ಷ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ಸದಸ್ಯರಾದ ಅಶ್ವಿನಿಕುಮಾರ್, ಹೆಚ್.ಕೆ ಗುರುರಾಜ್ ಇನ್ನೂ ಮುಂತಾದವರು ಮೆರವಣಿಗೆಯ ವೇಳೆ ಕಣ್ಮರೆಯಾಗಿದ್ದು ಇದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿತ್ತು.

ದಸರಾ ಸಮಿತಿ ವಿರುದ್ಧ ಅಸಮಾದಾನ:

ಪ್ರತಿ ವರ್ಷ ದಸರಾ ಹಬ್ಬದ ಸಮಿತಿಯನ್ನು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪಟ್ಟಣ ಪಂಚಾಯತಿಯ ಅಧ್ಯಕ್ಷರನ್ನು ದಸರಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿತ್ತು. ಹಿಂದಿನ ವರ್ಷ ಪಟ್ಟಣ ಪಂಚಾಯತಿ ಅಧ್ಯಕ್ಷರು ಮಹಿಳೆಯಾಗಿರುವುದರಿಂದ ದಸರಾ ಸಮಿತಿಯ ಅಧ್ಯಕ್ಷ ಸ್ಥಾನ ಪಡೆದಿಲ್ಲ ಎಂದು ಹೇಳಲಾಗಿದೆ. ಈ ವರ್ಷ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪನವರು ನಾನು ದಸರಾ ಸಮಿತಿಯ ಅಧ್ಯಕ್ಷರಾಗಿ ಅದ್ದೂರಿಯಾಗಿ ದಸರಾ ಆಚರಣೆ ನಡೆಸುತ್ತೇವೆಂದು ಸಮಿತಿಯ ಮುಂದೆ ಹೇಳಿದರೂ ತಹಸಿಲ್ದಾರ್‌ ಅವರ ಮಾತಿಗೆ ಮಾನ್ಯತೆ ನೀಡದೆ ಇರುವುದು ಈ ಅಸಮದಾನಕ್ಕೆ ಕಾರಣವೆಂದು ಹೇಳಲಾಗಿದೆ. ಮುಂದಿನ ವರ್ಷ ಯಾರು ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿರುತ್ತಾರೊ ಅವರನ್ನೇ ದಸರಾ ಕಮಿಟಿಯ ಅಧ್ಯಕ್ಷರನ್ನಾಗಿ ಮುಂದುವರೆಸುವುದು ಸೂಕ್ತ, ಇಲ್ಲವಾದರೆ ಹೊಸನಗರದ ದಸರಾ ಹಬ್ಬ ರಾಜಕೀಯ ದಿಕ್ಕಿನತ್ತ ಹೋಗಲಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Leave a comment