ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಯಶವಂತಪುರ – ಶಿವಮೊಗ್ಗ – ತಾಳಗುಪ್ಪ ಮಧ್ಯೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

By koushikgk

Published on:

Spread the love

Shivamogga:ರಾಷ್ಟ್ರದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಿದ್ಧತೆಗಳು ಜೋರಾಗಿದ್ದು, ಸಾರ್ವಜನಿಕ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪರಿಗಣಿಸಿ, ಯಶವಂತಪುರ–ತಾಳಗುಪ್ಪ ನಡುವೆ ಪ್ರತಿ ದಿಕ್ಕಿಗೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಯಶವಂತಪುರ–ತಾಳಗುಪ್ಪ ವಿಶೇಷ ರೈಲು ಸೇವೆಯ ಮಾಹಿತಿ

ನೈರುತ್ಯ ರೈಲ್ವೆ ಪ್ರಕಟಿಸಿದ ಪ್ರಕಾರ, ಈ ವಿಶೇಷ ರೈಲು ಆಗಸ್ಟ್ 14ರಂದು ಯಶವಂತಪುರದಿಂದ ತಾಳಗುಪ್ಪದವರೆಗೆ ಸಂಚರಿಸುತ್ತದೆ ಮತ್ತು ಹಿಂದಿರುಗುವ ರೈಲು ಆಗಸ್ಟ್ 15ರಂದು ತಾಳಗುಪ್ಪದಿಂದ ಯಶವಂತಪುರದತ್ತ ಹೊರಡುತ್ತದೆ. ಈ ಮೂಲಕ ಹಬ್ಬದ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಯಶವಂತಪುರ–ತಾಳಗುಪ್ಪ ವಿಶೇಷ ರೈಲು ಸೇವೆಯ ವೇಳಾಪಟ್ಟಿ ಮತ್ತು ಮಾಹಿತಿ

🔹 ರೈಲು ಸಂಖ್ಯೆ: 06543
🔹 ಮಾರ್ಗ: ಯಶವಂತಪುರ → ತಾಳಗುಪ್ಪ
🔹 ದಿನಾಂಕ: ಆಗಸ್ಟ್ 14, 2025 (ಗುರುವಾರ)
🔹 ಹೊರಡುವ ಸಮಯ: ರಾತ್ರಿ 10:30
🔹 ಸ್ಥಳ: ಯಶವಂತಪುರ ರೈಲು ನಿಲ್ದಾಣ
🔹 ತಲುಪುವ ಸ್ಥಳ: ತಾಳಗುಪ್ಪ

🔹 ರೈಲು ಸಂಖ್ಯೆ: 06544
🔹 ಮಾರ್ಗ: ತಾಳಗುಪ್ಪ → ಯಶವಂತಪುರ
🔹 ದಿನಾಂಕ: ಆಗಸ್ಟ್ 15, 2025 (ಶುಕ್ರವಾರ)
🔹 ಹೊರಡುವ ಸಮಯ: ಬೆಳಿಗ್ಗೆ 8:00
🔹 ಸ್ಥಳ: ತಾಳಗುಪ್ಪ ರೈಲು ನಿಲ್ದಾಣ
🔹 ತಲುಪುವ ಸ್ಥಳ: ಯಶವಂತಪುರ

ನಿಲ್ದಾಣಗಳು

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲಲಿದೆ:

  • ತುಮಕೂರು
  • ತುರುವೇಕೆರೆ
  • ತಿಪಟೂರು
  • ಅರಸಿಕೇರೆ
  • ಶಿವಮೊಗ್ಗ ಟೌನ್
  • ಸಾಗರ
  • ತಾಳಗುಪ್ಪ

ಈ ರೈಲು 1 ಎಸಿ ಫಸ್ಟ್ ಕ್ಲಾಸ್, 2 ಎಸಿ ಟು ಟೈರ್, 5 ಎಸಿ ತ್ರಿ ಟೈರ್, 7 ಸೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 2 ಲಗೇಜ್-ಕಮ್-ಗಾರ್ಡ್ ವ್ಯಾನ್ (ಜನರೇಟರ್ ಕಾರ್ ಸಹಿತ) ಮತ್ತು 1 ಪ್ಯಾಂಟ್ರಿ ಕಾರ್ (ಬಂದ್ ಸ್ಥಿತಿಯಲ್ಲಿರುತ್ತದೆ) ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಆಪ್ ಮುಖಾಂತರ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಫ್‌ಲೈನ್ ಬುಕಿಂಗ್ ಕೂಡ ನಿಲ್ದಾಣ ಕೌಂಟರ್‌ಗಳಲ್ಲಿ ಲಭ್ಯವಿದೆ.

ಹುಲಿಕಲ್ ಘಾಟ್ ನಲ್ಲಿ ಧರೆಕುಸಿತ – ಸಂಚಾರ ಸಂಪೂರ್ಣ ಸ್ಥಗಿತ!

Leave a comment