SHIVAMOGGA | ಶಿಮುಲ್ ಚುನಾವಣೆ ಫಲಿತಾಂಶ ಪ್ರಕಟ, ಯಾರೆಲ್ಲ ಗೆದ್ದಿದ್ದಾರೆ ?

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್‌) ಆಡಳಿತ ಮಂಡಳಿ 14 ನಿರ್ದೇಶಕ ಸ್ಥಾನಗಳ ಚುಣಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ.

ಈ ಕುರಿತಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ರಿಟರ್ನಿಂಗ್ ಅಧಿಕಾರಿಗಳ ಕಾರ್ಯಾಲಯದಿಂದ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಚುನಾವಣೆಯ ಅಂತಿಮ ಫಲಿತಾಂಶದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಿಂದ ಯಾರೆಲ್ಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಹೀಗಿದೆ.

ಶಿವಮೊಗ್ಗ ವಿಭಾಗ :

  • ಆನಂದ ಡಿ.ಬಿಎನ್ 131 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
  • ಹೆಚ್.ಬಿ ದಿನೇಶ್ 115 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ಆರ್.ಎಂ ಮಂಜುನಾಥಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಗರ ವಿಭಾಗ :

  • ಟಿ ಶಿವಶಂಕರಪ್ಪ 162 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
  • ದಯಾನಂದ ಗೌಡ ಟಿ.ಎಸ್ 124 ಮತಗಳಿಂದ ಗೆಲುವು
  • ವಿದ್ಯಾಧರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಾವಣಗೆರೆ ವಿಭಾಗ :

  • ಚೇತನ್ ಸೋಮಣ್ಣ 211 ಮತಗಳಿಂದ ಗೆಲುವು ಸಾಧಿಸಿದ್ದಾರೆ.
  • ಜಗದೀಶಪ್ಪ ಬಣಕಾರ್ 182 ಮತಗಳೊಂದಿಗೆ ವಿಜಯ ಸಾಧಿಸಿದ್ದಾರೆ.
  • ಹೆಚ್.ಕೆ ಬಸಪ್ಪ 176 ಮತಗಳಿಂದ ಗೆಲುವು
  • ಬಿ.ಜಿ ಬಸವರಾಜಪ್ಪ 166 ಮತಗಳಿಂದ ಗೆಲುವು.

ಚಿತ್ರದುರ್ಗ ವಿಭಾಗ :

  • ಬಿ.ಆರ್ ರವಿಕುಮಾರ್ 163 ಮತಗಳಿಂದ ಗೆಲುವು
  • ಸಂಜೀವಮೂರ್ತಿ 134 ಮತಗಳಿಂದ ಗೆಲುವು
  • ರೇವಣಸಿದ್ದಪ್ಪ ಜಿಪಿ 109 ಮತಗಳನ್ನು ಪಡೆದು ಗೆಲುವು
  • ಜಿ.ಬಿ ಶೇಖರಪ್ಪ 106 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಮತದಾನ ಹೇಗೆ ?

ಮತದಾನದ ಹಕ್ಕು ಪಡೆದುಕೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯು ತಮ್ಮ ಸಂಘದ ಒಬ್ಬ ಪ್ರತಿನಿಧಿಯನ್ನು ಮತದಾರನನ್ನಾಗಿ ಆಯ್ಕೆ ಮಾಡಿತ್ತು. ಮತದಾರರು ತಮ್ಮ ವಿಭಾಗದಲ್ಲಿ ಸ್ಪರ್ಧಿಸಿದವರಲ್ಲಿ ಒಬ್ಬರಿಗೆ ಮತದಾನ ಮಾಡುವ ಮೂಲಕ ಆಯ್ಕೆ ಮಾಡಿದರು. ಪ್ರತಿ ತಾಲ್ಲೂಕಿನಿಂದ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಯಿತು.

ಶೇ. 99ರಷ್ಟು ಮತದಾನ :

ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಶಿಮುಲ್‌ ಕೇಂದ್ರ ಕಚೇರಿ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. 1,171 ಮತದಾರರ ಪೈಕಿ 1,169 ಮಂದಿ ಮತ ಚಲಾಯಿಸಿದರು. ಶೇ. 99ರಷ್ಟು ಮತದಾನ ನಡೆದದ್ದು ವಿಶೇಷ. ಶಿವಮೊಗ್ಗ ವಿಭಾಗದಲ್ಲಿ 264 ಮತಗಳ ಪೈಕಿ ಅಷ್ಟೂ ಚಲಾವಣೆಯಾದವು. ಸಾಗರದ 256 ಮತದಾರರಲ್ಲಿ 255 ಮಂದಿ ಮತ ಚಲಾಯಿಸಿದರು. ದಾವಣಗೆರೆಯ 362 ಮತದಾರರ ಪೈಕಿ 361 ಮತ್ತು ಚಿತ್ರದುರ್ಗದ 289 ಮತದಾರರ ಪೈಕಿ ಅಷ್ಟೂ ಮಂದಿ ಮತ ಚಲಾಯಿಸಿದರು. ಮತದಾನಕ್ಕೆ ಅರ್ಹರು ಮತ್ತು ಅನರ್ಹರಾದವರ ಪಟ್ಟಿ ಶಿಮುಲ್‌ ಆವರಣದಲ್ಲಿ ಪ್ರಕಟಿಸಲಾಗಿತ್ತು.

ಯಾರಿಗೆ ಯಾವ ಪಕ್ಷದ ಬೆಂಬಲ ?

ಸಾಗರ ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ವಿದ್ಯಾಧರ್ ಟಿ.ಶಿವಶಂಕರಪ್ಪ ಹಾಗೂ ಟಿ.ಎಸ್.ದಯಾನಂದ ಗೌಡ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ವಿಭಾಗದಲ್ಲಿ ಜೆಡಿಎಸ್ ಬೆಂಬಲಿತ ಭದ್ರಾವತಿಯ ಡಿ.ಆನಂದ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಎಚ್‌.ಬಿ.ದಿನೇಶ್‌ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥಗೌಡ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ಪಕ್ಷಾತೀತ ಗೆಲುವು :

ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಒಕ್ಕೂಟದ ಪ್ರತಿನಿಧಿಗಳು ಪಕ್ಷಾತೀತವಾಗಿ ಬಣಗಳ ರಚಿಸಿಕೊಂಡು ಸ್ಪರ್ಧೆ ಮಾಡಿದ್ದರು. ದಾವಣಗೆರೆಯಲ್ಲಿ ಜಗದೀಶಪ್ಪ ಬಣಕಾರ್ ಎಚ್.ಕೆ.ಬಸಪ್ಪ ಅನಿಲ್‌ಕುಮಾರ್ ಪಾಲಾಕ್ಷಪ್ಪ ಒಂದು ಬಣದಿಂದ ಸ್ಪರ್ಧಿಸಿದ್ದರು. ಅದರಲ್ಲಿ ಜಗದೀಶಪ್ಪ ಬಣಕಾರ್ ಹಾಗೂ ಎಚ್.ಕೆ.ಬಸಪ್ಪ ಗೆಲುವು ಸಾಧಿಸಿದ್ದಾರೆ. ಇನ್ನೊಂದು ತಂಡದಲ್ಲಿ ಬಿ.ಜಿ.ಬಸವರಾಜ‍ಪ್ಪ ಚೇತನ್‌ ನಾಡಿಗರ ಗೆಲುವು ಸಾಧಿಸಿದ್ದಾರೆ. ಚಿತ್ರದುರ್ಗದಲ್ಲಿ ಜಿ.ಪಿ.ರೇವಣಸಿದ್ದಪ್ಪ ಬಣದಿಂದ ಸ್ಪರ್ಧಿಸಿದವರಲ್ಲಿ ರೇವಣಸಿದ್ದಪ್ಪ ಸೇರಿದಂತೆ ಬಿ.ಸಿ.ಸಂಜೀವಮೂರ್ತಿ ಹಾಗೂ ಕಾಮಧೇನು ಬಸ್ ಮಾಲೀಕ ಜಿ.ಬಿ.ಶೇಖರ್‌ ಆಯ್ಕೆಯಾಗಿದ್ದಾರೆ. ಹೊಸದುರ್ಗದ ರವಿಕುಮಾರ್ ಬಿ.ಆರ್. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.

Leave a Comment

error: Content is protected !!