ಶಿವಮೊಗ್ಗ ಮಹಾನಗರ ಪಾಲಿಕೆ ಹಿರಿಯ ನೌಕರ ಜಿ. ಪರಮೇಶ್ ನಿಧನ !

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA ; ಶಿವಮೊಗ್ಗ ಮಹಾನಗರ ಪಾಲಿಕೆಯ ಹಿರಿಯ ನೌಕರರು, ಸಂಘದ ಪೌರ ಸೇವಾ ನೌಕರರ ಸಂಘದ ಪ್ರಮುಖರು, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಶಿವಮೊಗ್ಗ ಸಿಂಹ ದಿನಪತ್ರಿಕೆಯ ಸಂಪಾದಕ ಜಿ. ಚಂದ್ರಶೇಖರ್ ಅವರ ಸಹೋದರ ಜಿ. ಪರಮೇಶ್ (59) ಶುಕ್ರವಾರ ರಾತ್ರಿ ನಿಧನರಾದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಸಹೋದರರು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಪರಮೇಶ್ ಶಿವಮೊಗ್ಗ ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲಿ ಅಪಾರ ಜನ ಮೆಚ್ಚುಗೆಯ ನೌಕರರಾಗಿ ಸರಳ ಸಜ್ಜನಿಕೆ ಹಾಗೂ ಸೇವಾ ಮನೋಭಾವದ ಜೊತೆ ಸ್ನೇಹದ ವ್ಯಕ್ತಿಯಾಗಿ ಗುರುತಿಸಿಕೊಂಡು ಬೆಳೆದಿದ್ದರು.

ಪರಮೇಶ್ ಅವರ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 3ರವರೆಗೆ ಕರಿಯಣ್ಣ ಮನೆ ಹತ್ತಿರದ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನಂತರ ಅಂತ್ಯಕ್ರಿಯೆ ನಡೆಯಿತು.

Leave a Comment

error: Content is protected !!