LIVE UPDATES : ಶಿವಮೊಗ್ಗದಲ್ಲಿ 2 ಲಕ್ಷಕ್ಕೂ ಅಧಿಕ‌ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರಗೆ ಭರ್ಜರಿ ಜಯ !

Written by Malnadtimes.in

Updated on:

WhatsApp Group Join Now
Telegram Group Join Now

SHIVAMOGGA | ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡಿದಿದ್ದು 2 ಲಕ್ಷಗಳಿಗೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿದ್ದಾರೆ‌. ಆದರೆ ಅಧಿಕೃತ ಘೋಷಣೆ ಬಾಕಿಯಿದೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ರವರು ಸೋಲು ಕಂಡಿದ್ದಾರೆ‌. ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ. 2,43,715 ಮತಗಳಿಂದ ಬಿ.ವೈ. ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ‌.

ಈವರೆಗೆ 20ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಯಾರಿಗೆ ಎಷ್ಟು ಮತ ?

  • ಬಿಜೆಪಿ : ಬಿ.ವೈ.ರಾಘವೇಂದ್ರ – 7,78,721 ಮತಗಳು
  • ಕಾಂಗ್ರೆಸ್ : ಗೀತಾ ಶಿವರಾಜ್‌ಕುಮಾರ್ – 5,35,006 ಮತಗಳು
  • ಪಕ್ಷೇತರ : ಕೆ.ಎಸ್.ಈಶ್ವರಪ್ಪ – 30,050  ಮತಗಳು

Leave a Comment

error: Content is protected !!