ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾ.ಪಂ. ನೌಕರರ ಅನಿರ್ದಿಷ್ಟ ಧರಣಿ

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ಗ್ರಾಮ ಪಂಚಾಯಿತಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದಿನಿಂದ ಜಿ.ಪಂ. ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ ಬೆಂಗಳೂರು ಹಾಗೂ (ಸಿಐಟಿಯೂ) ಸಂಯೋಜಿತ ಜಿಲ್ಲಾ ಸಮಿತಿ ಶಿವಮೊಗ್ಗದ ವತಿಯಿಂದ ಅನಿರ್ಧಿಷ್ಟಾ ಧರಣಿ ಆರಂಭಿಸಲಾಯಿತು.

ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವರು ವರ್ಷಗಳಿಂದ ಗ್ರಾ.ಪಂ.ಗಳಲ್ಲಿ ಕರ ವಸೂಲಿಗಾರ, ವಾಟರ್ ಮ್ಯಾನ್, ಜವಾನ, ಕ್ಲರ್ಕ್, ಸ್ವಚ್ಚತ ಗಾರ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಸರ್ಕಾರ ನೌಕರರ ಹಿತ ದೃಷ್ಠಿಯಿಂದ ಅನೇಕ ಆದೇಶಗಳನ್ನು ಮಾಡಿದ್ದರೂ ಕೂಡ ನಿಗದಿತ ಸಮಯದೊಳಗೆ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಪಂ ನೌಕರರು ಸರ್ಕಾರದ ಸೌಲಭ್ಯಗಳಿಂದ
ವಂಚಿತರಾಗುತ್ತಿದ್ದಾರೆ. ನಮ್ಮ ನೌಕರರ ಸಂಘ ಸಿಐಟಿಯು ನೊಂದಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಮ್ಮ ಬೇಡಿಕೆಗಳಿ ಈಡೇರಿಲ್ಲ. ಹಾಗಾಗಿ ಈ ಧರಣಿ ಹಮ್ಮಿ ಕೊಳ್ಳಲಾಗಿದೆ ಎಂದರು.

2017ರ ಅಕ್ಟೋಬರ್ 32ರ ಒಳಗೆ ಗ್ರಾಮ ಪಂಚಾಯಿತಿಯಲ್ಲಿ ಸಭಾ ನಡುವಳಿ ಮೂಲಕ ಕರ್ತವ್ಯಕ್ಕೆ ನೇಮಕ ಆದಂತಹ ವಿವಿಧ ವೃಂದದ ನೌಕರರಿಗೆ ಏಕಕಾಲದಲ್ಲಿ ಅನುಮೋದನೆ ನೀಡಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸದ ವಿಷಯ ನಿರ್ವಾಹಕರನ್ನು ಬದಲಾವಣೆ ಮಾಡಬೇಕು. ಗ್ರಾ.ಪಂ.ನೌಕರರಿಗೆ ಸುರಕ್ಷತಾ ಕಿಟ್, ಸಮವಸ್ತ್ರ, ಐಡಿ ಕಾರ್ಡ್ ಅಂತ್ಯ ಸಂಸ್ಕಾರಕ್ಕೆ 10 ಸಾವಿರ ಸಹಾಯ ಧನ. ಕನಿಷ್ಠ ವೇತನ ತುಟ್ಟಿ ಭತ್ಯೆ ನೀಡಬೇಕು. ಜಾಬ್ ಚಾರ್ಟ್‌ನಲ್ಲಿ ನಮೂದಿಸಿರುವ ಕರ್ತವ್ಯಗಳನ್ನು ಬಿಟ್ಟು ಅನ್ಯ ಕೆಲಸಕ್ಕೆ ನೇಮಕ ಮಾಡಬಾರದು ಎಂದು ಅವರು ಆಗ್ರಹಿಸಿದರು.

ಕ್ಲರ್ಕ್, ಡಾಟಎಂಟ್ರಿ ಆಪರೇಟರ್, ನೌಕಕರಿಗೆ ಕಾರ್ಯದರ್ಶಿ ಗ್ರೇಡ್2, ಎಸ್‌ಡಿಎಎ ಹುದ್ದೆಗಳಿಗೆ ಮುಂಬಡ್ತಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಕೈ ಬಿಟ್ಟು ಸರ್ಕಾರದ ಅಧಿ ಸೂಚನೆಯಂತೆ 112 ಮತ್ತು 113ರಂತೆ ನೇಮಕ ಮಾಡಿಕೊಳ್ಳಬೇಕು. ಜಿ.ಪಂ. ಅಧಿಕಾರದಲ್ಲಿ ಸಾಧ್ಯವಾಗುವ ಎಲ್ಲಾ ಸೌಲತ್ತುಗಳನ್ನು ನೌಕರರಿಗೆ ಕೂಡಲೇ ಒದಗಿಸಬೇಕು ಎಂದು ಧರಣಿಯಲ್ಲಿ ನಾಯಕರು ಒತ್ತಾಯಿಸಿದರು.

ಸಂಘದ ಅಧ್ಯಕ್ಷರಾದ ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿ ಪರಮೇಶ್, ಪ್ರಮುಖರಾದ ಎಂ.ಬಿ.ನಾಡಗೌಡ, ನಾರಾಯಣ್, ಹನುಮಮ್ಮ, ದೇವರಾಜ್, ಸಂಘದ ಪದಾಧಿಕಾರಿಗಳಾದ ಎಂ.ಸಂತೋಷ್, ನಾಗೇಶ್ ಕೆ.ವಾಲೆ, ಚೆನ್ನಬಸಪ್ಪ, ಉಮೇಶ್, ರಂಗಸ್ವಾಮಿ ಇದ್ದರು.

Leave a Comment

error: Content is protected !!