ಶಿವಮೊಗ್ಗ : 2023-24 ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿರುತ್ತದೆ.
ಈ ಕುರಿತು ಕರ್ನಾಟಕ ಸರ್ಕಾರವು 2ನೇ ಹಂತದ ಬರ ಪರಿಹಾರವನ್ನು NDRF ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು 59,605 ಫಲಾನುಭವಿಗಳಿಗೆ ಒಟ್ಟು 38,74,31,015 ರೂ.ಗಳನ್ನು ಫಲಾನುವಿಗಳ ಖಾತೆಗೆ ನೇರವಾಗಿ ಜಮಾ ಮಾಡಿರುತ್ತಾರೆ. ಆದ್ದರಿಂದ ಪರಿಹಾರ ವಿತರಣೆ ಕುರಿತು ಕುಂದು-ಕೊರತೆ ಹಾಗೂ ವಿಚಾರಣೆಗೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ತಿಳಿಸಿದೆ.
ಸಹಾಯವಾಣಿಯ ದೂರವಾಣಿ ಸಂಖ್ಯೆ
- ಶಿವಮೊಗ್ಗ ತಹಶೀಲ್ದಾರ್ : 08182 279311
- ಭದ್ರಾವತಿ ತಹಶೀಲ್ದಾರ್ : 08282 263466
- ತೀರ್ಥಹಳ್ಳಿ ತಹಶೀಲ್ದಾರ್ : 08181 228239
- ಸಾಗರ ತಹಶೀಲ್ದಾರ್ : 08183 226074
- ಶಿಕಾರಿಪುರ ತಹಶೀಲ್ದಾರ್ : 08187 222239
- ಸೊರಬ ತಹಶೀಲ್ದಾರ್ : 08184 272241
- ಹೊಸನಗರ ತಹಶೀಲ್ದಾರ್ : 08185 221235