ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಹಿನ್ನೆಲೆ, ಶಿವಮೊಗ್ಗದ 110 ರೌಡಿಗಳಿಗೆ ಈ ನಾಲ್ಕು ಎಚ್ಚರಿಕೆ ನೀಡಿದ ಎಸ್‌ಪಿ

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ಮುಂಬರುವ ಗೌರಿ – ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದ ಆವರಣದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮತ್ತು ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗ ಬಿ. ವಿಭಾಗದ ಪೊಲೀಸ್ ಉಪಾಧೀಕ್ಷರಾದ ಸುರೇಶ್ ಎಂ ಮತ್ತು ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಉಪಾಧೀಕ್ಷರಾದ ಬಾಬು ಆಂಜನಪ್ಪ ರೌಡಿ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಿದರು.

ಶಿವಮೊಗ್ಗ ನಗರದ ಒಟ್ಟು 110 ಜನ ರೌಡಿ ಆಸಾಮಿಗಳು ಈ ಪರೇಡ್ ನಲ್ಲಿ ಹಾಜರಿದ್ದರು ಮತ್ತು ರೌಡಿ ಪರೇಡ್ ನಲ್ಲಿ ಹಾಜರಿದ್ದ ರೌಡಿ ಆಸಾಮಿಗಳ ಹಾಲಿ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ ಪರಿಶಿಲನೆ ನಡೆಸಿ ಈ ಕೆಳಕಂಡ ಎಚ್ಚರಿಕೆ ನೀಡಿದ್ದಾರೆ.

  • ವಾರದಲ್ಲಿ 02 ಬಾರಿ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ನೀಡುವುದು.
  • ನಿಮ್ಮ ಚಟುವಟಿಕೆ ಮತ್ತು ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಯಾವುದಾದರೂ ಕಾನೂನು ಬಾಹೀರ ಚಟುವಟಿಕೆ ಮತ್ತು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
  • ನಿಮ್ಮ ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುವುದು, ಒಂದು ವೇಳೆ ನೀವು ಸ್ನೇಹಿತರನ್ನು ಸೇರಿಸಿಕೊಂಡು ಗುಂಪು ಕಟ್ಟಿಕೊಂಡು ಅಡ್ಡಗಳನ್ನು ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.
  • ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು, ಶಿಸ್ತಾಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಮತ್ತು ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಿ ಇದು ನಿಮಗೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪೊಲೀಸ್ ಇಲಾಖೆಯು ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment

error: Content is protected !!