ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು ! ನಡೆದಿದ್ದೇನು ?

Written by Malnadtimes.in

Updated on:

WhatsApp Group Join Now
Telegram Group Join Now

ಶಿವಮೊಗ್ಗ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ (Death) ಘಟನೆ ಶಿವಮೊಗ್ಗ (Shivamogga) ತಾಲ್ಲೂಕಿನ ಆಯನೂರು (Ayanuru) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಹಳ್ಳಿ (Channahalli) ಗ್ರಾಮದಲ್ಲಿ ಇಂದು ನಡೆದಿದೆ.

ನಡೆದಿದ್ದೇನು ?
ಅಶೋಕ ಎಂಬುವರಿಗೆ ಸೇರಿದ ಸುಮಾರು 12 ಅಡಿ ಆಳವಿರುವ ಕೃಷಿ ಹೊಂಡದಲ್ಲಿ ಚನ್ನಹಳ್ಳಿ ಗ್ರಾಮದ ಮಹೇಶ್ ಎಂಬುವರ ಮಗ ಅಭಯ್ (14) ಕಾಲು ಜಾರಿ ಬಿದ್ದು ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಿದ್ದಿದ್ದಾನೆ. ಮೊದಲೇ ಸುಸ್ತಾಗಿದ್ದ ಅಭಯ್  ನೀರಿನಿಂದ ಮೇಲಕ್ಕೆ ಬರಲಾಗದೆ ಜೋರಾಗಿ ಕಿರುಚಿಕೊಂಡಿದ್ದರಿಂದ ಅಲ್ಲೇ ಪಕ್ಕದ ಜಮೀನಿನಲ್ಲಿದ್ದ ನೀಲಣ್ಣ ಎಂಬುವರ ಮಗನಾದ ಮಾಲ್ತೇಶ್ (29) ಅಭಯ್ ಅವರನ್ನು ರಕ್ಷಣೆ ಮಾಡಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ ಅಷ್ಟರಲ್ಲೇ ಇವರ ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ಅಕ್ಕ-ಪಕ್ಕದ ಜಮೀನಿನಲ್ಲಿದ್ದ ರೈತರು ಕೃಷಿ ಹೊಂಡದ ಬಳಿ ಧಾವಿಸಿದ್ದು ಅಭಯ್ ಹಾಗೂ ಮಾಲ್ತೇಶನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲೇ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಮಾಲ್ತೇಶನಿಗೆ ಮದುವೆಯಾಗಿ ಕೇವಲ ಎಂಟು ತಿಂಗಳಾಗಿದ್ದು ಆತನ ಪತ್ನಿ ಇದೀಗ ತುಂಬು ಗರ್ಭಿಣಿ. ಸ್ಥಳೀಯರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಯ್ ನೀರಿನಲ್ಲಿ ಮುಳುಗಿ ಸುಸ್ತಾಗಿ ಭಯಗೊಂಡಿರುವುದರಿಂದ ಮಾಲ್ತೇಶನನ್ನು ಬಿಗಿಯಾಗಿ ಅಪ್ಪಿಕೊಂಡಿರಬಹುದು. ರಕ್ಷಿಸಲು ಹೋದ ಮಾಲ್ತೇಶನಿಗೆ ಈಜು ಬರುತ್ತಿದ್ದು ಆದರೂ ಅವನು ಮುಳಗಿ ಮೃತಪಟ್ಟಿದ್ದಾರೆ‌.
– ಸ್ಥಳೀಯ ರೈತ

Leave a Comment

error: Content is protected !!