ಹೊಸನಗರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ | ಅತಿವೃಷ್ಟಿ ಮತ್ತು ಅನಾವೃಷ್ಟಿ ಶೀಘ್ರ ಸ್ಪಂದನೆಗೆ ತಹಶೀಲ್ದಾರ್‌ ಸೂಚನೆ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಳೆಯಿಂದಾಗಿ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಅಧಿಕಾರಿಗಳ ಸಭೆಯನ್ನು ತಹಶೀಲ್ದಾರ್ ರಶ್ಮಿ ಹಾಲೇಶ್‌ರವರ ಅಧ್ಯಕ್ಷತೆ ಸಭೆಯನ್ನು ನಡೆಸಲಾಯಿತು.

ತಾಲ್ಲೂಕಿನ ಈಗಾಗಲೇ ಬರದಿಂದ ಬೆಳೆಗಳು ನಾಶವಾಗಿದ್ದು ಇದರ ಜೊತೆಗೆ ಒಂದೆರಡು ದಿನಗಳಿಂತ ಹೊಸನಗರ ತಾಲ್ಲೂಕಿನಲ್ಲಿ ಗುಡುಗು ಸಿಡಿಲು ಗಾಳಿ ಮಳೆಯಿಂದ ಅಲ್ಲಲ್ಲಿ ಮರಗಳು ರೈತರು ಬೆಳೆದ ಬೆಳೆಗಳ ಮೇಲೆ ಬಿದ್ದಿರುವ ಬಗ್ಗೆ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ವರದಿಗಳು ಬರುತ್ತಿದೆ. ಹೊಸನಗರ ತಾಲ್ಲೂಕಿನ ರೈತರನ್ನು ಸಾರ್ವಜನಿಕರನ್ನು ಜಾಗೃತಿ ವಹಿಸುವುದು ನಮ್ಮಗಳ ಕರ್ತವ್ಯವಾಗಿದ್ದು ಯಾವುದೇ ಸಂದರ್ಭದಲ್ಲಿ ಬರ ಹಾಗೂ ಪ್ರಾಕೃತಿಕ ವಿಕೋಪದಿಂದ ಅನಾಹುತ ಸಂಭವಿಸಿದರೇ ತಕ್ಷಣ ತಾಲ್ಲೂಕು ಕಛೇರಿಯ ತುರ್ತು ಘಟಕದ ಮೊಬೈಲ್ ನಂಬರ್ 9449492135ಕ್ಕೆ ಕರೆ ಮಾಡಬೇಕೆಂದು ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ತಿಳಿಸಿದರು.

ಕೇಂದ್ರ ಸ್ಥಾನದಲ್ಲಿರಲು ಸೂಚನೆ :
ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವುದರಿಂದ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಪ್ರಾಕೃತಿಕ ವಿಕೋಪವಾಗುವ ಸಂಭವ ಇರುವುದರಿಂದ ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ತಾಲ್ಲೂಕು ಕೇಂದ್ರಗಳಲ್ಲಿದ್ದು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯಹಸ್ತ ನೀಡಬೇಕಾಗಿರುವುದರಿಂದ ಎಲ್ಲಿ ಅನಾಹುತ ನಡೆದಿದೆಯೋ ಆ ಸ್ಥಳಕ್ಕೆ ಅಧಿಕಾರಿಗಳ ವರ್ಗ ತಕ್ಷಣ ಹೋಗಿ ಸ್ಪಂದಿಸಿ ಮಾಹಿತಿಯನ್ನು ತಾಲ್ಲೂಕು ಕಛೇರಿಗೆ ತಲುಪಿಸುವ ಹೊಣೆ ಅಧಿಕಾರಿಗಳದಾಗಿದ್ದು ಆದ್ದರಿಂದ ಯಾವುದೇ ಕಂದಾಯ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಬಿಟ್ಟು ಹೊರ ಹೋಗದಂತೆ ತಹಶೀಲ್ದಾರ್ ರಶ್ಮಿ ಎಚ್ಚರಿಸಿದರು.

ಈ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುನಾಥ್, ತಾಲ್ಲೂಕು ಕಛೇರಿಯ ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಪ್ರಥಮ ದರ್ಜೆ ಗುಮಾಸ್ತ ಚಿರಾಗ್, ಜಿಲ್ಲಾ ಪಂಚಾಯತಿ ಇಂಜಿನಿಯರ್‌ಗಳಾದ ಮಲ್ಲಿಕಾರ್ಜುನ್, ಶಿವಪ್ರಸಾದ್, ಕೃಷಿ ಸಹಾಯಕ ಅಧಿಕಾರಿ ಸಚಿನ್ ಹೆಗಡೆ, ತೋಟಗಾರಿಕ ಸಹಾಯಕ ಅಧಿಕಾರಿ ಪುಟ್ಟಾನಾಯ್ಕ್ ಅರಣ್ಯ ಅಧಿಕಾರಿಗಳು ಇನ್ನೂ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ReadMore :ಹೊಸನಗರ ಆರ್ಯವೈಶ್ಯ ಜನಾಂಗದವರಿಂದ ಕನ್ನಿಕಾ ಪರಮೇಶ್ವರಿ ಜಯಂತಿ ಆಚರಣೆ

Leave a Comment

error: Content is protected !!