ರಿಪ್ಪನ್‌ಪೇಟೆಯಲ್ಲಿ ಡೆಂಗ್ಯೂ ಭೀತಿ

Written by Malnadtimes.in

Published on:

WhatsApp Group Join Now
Telegram Group Join Now

Ripponpete | ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಜನರಿಗೆ ಜ್ವರ ಕಾಣಿಸಿಕೊಂಡಿದ್ದು `ಡೆಂಗ್ಯೂ’ ಭೀತಿ ನಾಗರೀಕರ ನಿದ್ದೆಗೆಡಿಸಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಈಗಾಗಲೇ 6 ಜನರಲ್ಲಿ ಡೆಂಗ್ಯೂ ಜ್ವರ ದೃಢಪಟ್ಟಿದ್ದು ಉಳಿದಂತೆ ಹಲವರು ಖಾಸಗಿ ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರುಗಳು ಡೆಂಗ್ಯೂ ಬಗ್ಗೆ  ರಕ್ತ ತಪಾಸಣೆ ಸೇರಿದಂತೆ ಇನ್ನಿತರ ತಪಾಸಣೆಗಾಗಿ ಲ್ಯಾಬ್‌ಗಳಿಗೆ ಕಳುಹಿಸುತ್ತಿದ್ದು ಒಟ್ಟಾರೆಯಾಗಿ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಲವರು ಜ್ವರದಿಂದ ನರಳುತ್ತಿದ್ದು ಡೆಂಗ್ಯೂ ಜ್ವರದ ಭಯ ಕಾಡುವಂತಾಗಿದೆ.

ಈಗಾಗಲೇ 6 ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನಮ್ಮ ಸಿಬ್ಬಂದಿ ವರ್ಗ ಮನೆ-ಮನೆ ಸಮೀಕ್ಷೆಯಲ್ಲಿ ತೊಡಗಿಕೊಂಡು ಜನರಲ್ಲಿ ಡೆಂಗ್ಯೂ ಜ್ವರದ ಕುರಿತು ಜಾಗೃತಿ ಮೂಡಿಸುವ ಮೂಲಕ ನಿತ್ಯ ವರದಿ ನೀಡುತ್ತಿದ್ದಾರೆ. ಯಾರು ಭಯಪಡುವ ಅಗತ್ಯವಿಲ್ಲ.
ಡಾ. ಸುರೇಶ್ ಟಿಹೆಚ್ಒ, ಹೊಸನಗರ


ಸಂಸದ ಬಿ.ವೈ.ರಾಘವೇಂದ್ರರಿಗೆ ರಿಪ್ಪನ್‌ಪೇಟೆ ಬಸವೇಶ್ವರ ವೀರಶೈವ ಸಮಾಜದವರಿಂದ ಸನ್ಮಾನ

Ripponpete | ನಾಲ್ಕನೇ ಭಾರಿ ಪ್ರಚಂಡ ಬಹುಮತದಿಂದ ಆಯ್ಕೆಯಾದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರನ್ನು ರಿಪ್ಪನ್‌ಪೇಟೆಯ ಶ್ರೀಬಸವೇಶ್ವರ ವೀರಶೈವ ಸಮಾಜ ಭಾಂದವರು ಇಂದು ಶಿಕಾರಿಪುರದಲ್ಲಿ ಸಂಸದರ ಮನೆಯಲ್ಲಿ ಸಂಸದರನ್ನು ಭೇಟಿ ಮಾಡಿ ಅಭಿನಂದಿಸಿ ಸನ್ಮಾನಿಸಿದರು.

B.Y. Raghavendra

ಈ ಸಂದರ್ಭದಲ್ಲಿ ಶ್ರೀಬಸವೇಶ್ವರ ವೀರಶೈವ ಸಮಾಜ ಉಪಾಧ್ಯಕ್ಷ ಜಿ.ಎಂ.ದುಂಡರಾಜ್‌ಗೌಡ, ಎಂ.ಆರ್. ಶಾಂತವೀರಪ್ಪಗೌಡ, ಕಾರ್ಯದರ್ಶಿ ಡಿ.ಎಸ್.ರಾಜಾಶಂಕರ್, ಬಿ.ಟಿ.ಮೃತ್ಯುಂಜಯ (ಮುತ್ತಣ್ಣ), ಕೆ.ಆರ್.ರಾಜು ಖೈರಾ, ಬಿ.ವಿ.ನಾಗಭೂಷಣ (ಸ್ವಾಮಿಗೌಡ ಬೆಳಂದೂರು), ಲಿಂಗಪ್ಪ ಬೆನವಳ್ಳಿ, ಕಮದೂರು ಕೆ.ಎನ್, ರಾಜಶೇಖರ್, ಹೆಚ್.ಎಸ್.ರವಿ, ನೆವಟೂರು ಸ್ವಾಮಿಗೌಡ (ಈಶ್ವರಪ್ಪ), ಪರಮೇಶ ಕಮದೂರು, ಹೆಚ್.ಎಂ.ವರ್ತೇಶಗೌಡ ಹುಗುಡಿ, ಡಿ.ಎಸ್. ಕರ್ಣ, ಹಾಲಪ್ಪ ಅಡಿಕಟ್ಟು (ಸ್ವಾಮಿಗೌಡ) ಇನ್ನಿತರರು ಹಾಜರಿದ್ದರು.


ರಿಪ್ಪನ್‌ಪೇಟೆಯಲ್ಲಿ ಜೂ. 15 ರಂದು ಆರೋಗ್ಯ ತಪಾಸಣೆ ಶಿಬಿರ

Ripponpete | ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿನ ಲೈಫ್ ಕೇರ್ ಡಯೋಗ್ನಸ್ಟಿಕ್ ಹಾಗೂ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಯವರ ಸಹಯೋಗದಲ್ಲಿ ಜೂನ್ 15 ರಂದು ಶನಿವಾರ ಮೆಗಾ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು ಈ ಸೌಲಭ್ಯದ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ನಾಗರೀಕರು ಪಡೆದುಕೊಳ್ಳುವಂತೆ ಸಂಚಾಲಕ ವಿವೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆ 8660720524 ಮತ್ತು 9880889190 ಸಂಪರ್ಕಿಸಲು ಕೋರಿದ್ದಾರೆ.

Leave a Comment

error: Content is protected !!