ಪಶುಪಾಲನೆ, ಪಶುಗಳ ಆರೋಗ್ಯ ಕಾಪಾಡುವುದರಿಂದ ತೃಪ್ತಿಯಿದೆ ; ಮಲ್ಲಿಕಾರ್ಜುನ ಸ್ವಾಮಿ

Written by Malnadtimes.in

Published on:

WhatsApp Group Join Now
Telegram Group Join Now

Hosanagara | ಪಶುಪಾಲನೆ ಮತ್ತು ಪಶುಗಳ ಆರೋಗ್ಯ ಕಾಪಾಡುವುದರಿಂದ ನನಗೆ ತೃಪ್ತಿ ಸಿಕ್ಕಿದೆ ಎಂದು ಪಶು ಆಸ್ಪತ್ರೆಯ ಪಶು ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಆವರಣದಲ್ಲಿ ಪಶು ಆರೋಗ್ಯ ಇಲಾಖೆಯಿಂದ ನಿವೃತ್ತಿ ಪಡೆದ ಮಲ್ಲಿಕಾರ್ಜುನ ಸ್ವಾಮಿಯವರನ್ನು ಪಶು ವೈದ್ಯಾಧಿಕಾರಿಗಳ ಇಲಾಖೆ ಹಾಗೂ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸುಮಾರು 30 ವರ್ಷಗಳಿಂದ ಹೊಸನಗರದ ಸರ್ಕಾರಿ ಪಶು ವೈದ್ಯಾಧಿಕಾರಿಗಳ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದು ಮಲೆನಾಡಿನ ಭಾಗದ ಪಶುಗಳ ಆರೈಕೆ ಮಾಡಿರುವ ತೃಪ್ತಿ ನನಗಿದೆ. ಹೊಸನಗರದ ಸಾರ್ವಜನಿಕ ಪಶು ಅಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ಪಶುಗಳ ಆರೋಗ್ಯ ಕಾಪಾಡುವುದರಲ್ಲಿ ಹಗಲು-ರಾತ್ರಿ ಎನ್ನದೇ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ನನಗಿದ್ದು ಇದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇವೆ. ಪಶು ಇಲಾಖೆಯಿಂದ ನಿವೃತ್ತಿ ಪಡೆದಿದ್ದರೂ ಮುಂದಿನ ದಿನದಲ್ಲಿ ಪಶುಗಳ ಸೇವೆ ಮಾಡಲು ನಾವು ಇಚ್ಚಿಸುತ್ತೇವೆ ಎಂದರು.

ಶಿವಮೊಗ್ಗ ಜಿಲ್ಲಾ ಉಪನಿರ್ದೆಶಕರಾದ ಶಿವಯೋಗಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನಿರ್ದೆಶಕರಾದ ಡಾ. ರಾಮಚಂದ್ರ, ತೀರ್ಥಹಳ್ಳಿಯ ಸಿವಿಓ ಅಡ್ಮಿನ್ ಡಾ. ಕೆ.ಎಂ ನಾಗರಾಜ್, ಹೊಸನಗರದ ಸಿವಿಓ ಅಡ್ಮಿನ್ ನಟರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವಣ್ಣಪ್ಪ, ಪಶು ವೈದ್ಯಕೀಯ ಪರೀಕ್ಷಕರ ಸಂಘ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕ್ಯಾನಾಯ್ಕ, ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ತಿರುಪತಿ ನಾಯ್ಕ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿಯಾದ ಸುಬ್ರಹ್ಮಣ್ಯ, ಡಾ. ಪಣಿರಾಜ್, ಡಾ. ದಯಾನಂದ್, ಡಾ. ಅವಿನಾಶ್, ಕೆ.ಎನ್ ಕೃಷ್ಣಮೂರ್ತಿ, ಜಿಲ್ಲಾ ಪಶುವೈದ್ಯಾಧಿಕಾರಿಗಳ ಇಲಾಖೆಯ ಸಿಬ್ಬಂದಿಗಳು, ಹೊಸನಗರ ಪಶು ವೈದ್ಯಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷ, ಸದಸ್ಯರುಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ರಕ್ತದಾನದ ಎರಡು ದಶಕದ ಸಂಭ್ರಮಾಚರಣೆ

Hosanagara | ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಒಂದು ಮತ್ತು ಎರಡರ ಘಟಕ, ಯುವ ರೆಡ್ ಕ್ರಾಸ್ ಘಟಕ, ಮಹಿಳಾ ಸಬಲೀಕರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದೊಂದಿಗೆ ವಿಶ್ವ ರಕ್ತದಾನಿಗಳ ದಿನ ಎರಡು ದಶಕಗಳ ರಕ್ತದಾನದ ಸಂಭ್ರಮಾಚರಣೆಯನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎಂ. ಸದಾಶಿವ ಶ್ರೇಷ್ಠಿ ಅವರು 51 ಬಾರಿ ರಕ್ತದಾನ ಮಾಡಿ ಸದೃಢ ಆರೋಗ್ಯ ಕಾಪಾಡಿಕೊಂಡಿದ್ದಕ್ಕಾಗಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಸುಷ್ಮಾ ಎಸ್ ರಾವ್, ದೇಶದಲ್ಲಿ ಕಲಬೆರಿಕೆಯಾಗದ ಏಕೈಕ ವಸ್ತು, ರಕ್ತ. ಪುರುಷರು ವರ್ಷಕ್ಕೆ ನಾಲ್ಕು ಬಾರಿ ಹಾಗೂ ಮಹಿಳೆಯರು ಮೂರು ಬಾರಿ ರಕ್ತದಾನ ಮಾಡಬಹುದು. ಕನಿಷ್ಠ 45 ಕೆಜಿ ತೂಕವಿರುವ ವ್ಯಕ್ತಿ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5 ಗ್ರಾಂ ಡಿಎಲ್ ಇರುವ ವ್ಯಕ್ತಿ ರಕ್ತದಾನ ಮಾಡಬಹುದಾಗಿದೆ ಎಂದರು.

ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ದೇಶದಲ್ಲಿ 5 ಕೋಟಿ ಯೂನಿಟ್ ನಷ್ಟು ರಕ್ತದ ಅವಶ್ಯಕತೆ ಇದೆ. ಈಗ ಮೂರು ಕೋಟಿಯಷ್ಟು ರಕ್ತದ ಲಭ್ಯವಿದೆ. ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 48 ಗಂಟೆ ಒಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಇದರಿಂದ ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯ ಹಾಗೂ ಜ್ಞಾಪಕಶಕ್ತಿ ವೃದ್ಧಿಯಾಗಲಿದೆ. ಯಾವುದೇ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಲಾರದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಕೆ ಉಮೇಶ್ ವಹಿಸಿದ್ದು ವಿವಿಧ ಘಟಕ ಅಧಿಕಾರಿಗಳಾದ ಡಾ. ಬಸವರಾಜಪ್ಪ, ಡಾ. ಪ್ರಭಾಕರ್, ದೊಡ್ಡಯ್ಯ, ಪ್ರದೀಪ್ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ. ಗುರುಮೂರ್ತಿ, ಡಾ. ಹೇಮಂತ್, ಹಳೆ ವಿದ್ಯಾರ್ಥಿ ಬಿ.ಎಸ್ ಸುರೇಶ್ ಪಾಲ್ಗೊಂಡು ಮಾತನಾಡಿದರು.

ಸಿಂಚನ ಪ್ರಾರ್ಥಿಸಿದರು. ಸುಮಾ ಸ್ವಾಗತಿಸಿದರು. ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!