ಋತುಚಕ್ರದ ಸಮಯದಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಅರಿವು ಮೂಡಿಸುವುದು ಸಮಾಜದ ಕರ್ತವ್ಯ

Written by Malnadtimes.in

Published on:

WhatsApp Group Join Now
Telegram Group Join Now

Hosanagara | ಹೆಣ್ಣು ಮಕ್ಕಳು ಋತು ಚಕ್ರದ ಸಮಯದಲ್ಲಿ ಪಾಲಿಸಬೇಕಾದ ನೈರ್ಮಲ್ಯದ ಅರಿವು ಮೂಡಿಸುವುದು ಸಮಾಜದ ಕರ್ತವ್ಯ. ಅದರಿಂದ ಹೆಣ್ಣು ಮಕ್ಕಳು ಆರೋಗ್ಯದಿಂದಿರಲು ಸಹಾಯವಾಗುತ್ತದೆ ಎಂದು ಶಿವಮೊಗ್ಗದ ಸಖೀ ಕೇಂದ್ರದ ವಕೀಲೆ ನೀಲಾಕ್ಷಿ ತಿಳಿಸಿದರು.

ಇತ್ತೀಚಿಗೆ ಪಟ್ಟಣದ ಕುವೆಂಪು ವಸತಿ ವಿದ್ಯಾಲಯದಲ್ಲಿ ಸಖೀಕೇಂದ್ರ, ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ಮತ್ತು ಸಾಂತ್ವನ ಮಹಿಳಾ ಸಹಾಯವಾಣಿ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ನಾಗೇಂದ್ರ ಎನ್ ರವರು “ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಕಿವಿಮಾತು ಹೇಳಿದರು.

ಹೊಸನಗರ ಸಾಂತ್ವನ ಮಹಿಳಾ ಸಹಾಯವಾಣಿಯ ಆಪ್ತಸಮಾಲೋಚಕರಾದ ಪ್ರೇಮಾ ಕಾಂತರಾಜ್, ಆರೋಗ್ಯ ಇಲಾಖೆಯ ಶೋಭಾ ಹೆಚ್.ಎನ್, ಮಹಿಳಾ-ಮಕ್ಕಳ ಅಭಿವೃದ್ದಿ ಇಲಾಖೆಯ ವೀರಮ್ಮ ಮುಂತಾದವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿದ್ಯಾಶಾಲೆಯ ಕುಮಾರಿ ಚಾಕ್ಷುಷಾ ಎಸ್ ಸೊನಲೆ ಮತ್ತು ಚಿಂತನಾ ಬಿ ಪ್ರಾರ್ಥಿಸಿ, ಶಿಕ್ಷಕಿ ನಯನಾ ಸ್ವಾಗತಿಸಿದರು. ಕು. ಸ್ವಾತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುII ಆಶಿತಾ ನಿರೂಪಿಸಿದರು.

Leave a Comment

error: Content is protected !!