SSLC RESULT – 2024 | ಹೊಸನಗರ ಹೋಲಿ ರಿಡೀಮರ್ ಹೈಸ್ಕೂಲ್‌ಗೆ ಶೇ.100 ಫಲಿತಾಂಶ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: 2024ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಪಟ್ಟಣದ ಖಾಸಗಿ ಹೋಲಿ ರಿಡೀಮರ್ ಪ್ರೌಢಶಾಲೆ ಶೇ. 100 ಫಲಿತಾಂಶ ಬಂದಿದ್ದು ಅನನ್ಯ ಎಂ.ಎನ್‌‌. ಕನ್ನಡ ಹಾಗೂ ಹಿಂದಿ ವಿಷಯದಲ್ಲಿ 100% ಅಂಕ ಪಡೆದು ಒಟ್ಟಾರೆ 625ಕ್ಕೆ 610 (97.6%) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಒಟ್ಟು ಈ ಶಾಲೆಯಲ್ಲಿ ಕನ್ನಡ ಮೀಡಿಯಂನಲ್ಲಿ  17 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅದರಲ್ಲಿ 12 ವಿದ್ಯಾರ್ಥಿಗಳು ಹಾಗೂ 5 ವಿದ್ಯಾರ್ಥಿನಿಯರು ಒಟ್ಟು 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನನ್ಯ ಎಂ.ಎನ್ 625/610 ಅಂಕ (97.60%) ಕನ್ನಡದಲ್ಲಿ 125/125, ಹಿಂದಿ ವಿಷಯದಲ್ಲಿ 100/100 ಅಂಕ.

ಇಂಗ್ಲೀಷ್ ಮಾಧ್ಯಮದಲ್ಲಿ ಒಟ್ಟು 35 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅದರಲ್ಲಿ 17 ವಿದ್ಯಾರ್ಥಿಗಳು ಹಾಗೂ 18 ವಿದ್ಯಾರ್ಥಿನಿಯರು ಸೇರಿ ಒಟ್ಟು 35 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಜೊತೆಗೆ ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್ ವಿಷಯದಲ್ಲಿ ಒಟ್ಟು 53 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100% ಫಲಿತಾಂಶ ಬಂದಿದೆ.

ಪ್ರತೀಕ್ಷ ಆರ್. 625/609 (97.44%)  ಹಿಂದಿ ವಿಷಯದಲ್ಲಿ 100/100 ಅಂಕ.
ಪ್ರತೀಕ್ಷ ಆರ್. 625/609 (97.44%)  ಹಿಂದಿ ವಿಷಯದಲ್ಲಿ 100/100 ಅಂಕ.

ಪ್ರಥಮ ದರ್ಜೆಯಲ್ಲಿ 30 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 03 ಹಾಗೂ ತೃತೀಯ ದರ್ಜೆಯಲ್ಲಿ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌.

ಅನುರಾಗ್ ಕೆ.ಎಸ್ 625/594 ಅಂಕ (95.04%)
ಅನುರಾಗ್ ಕೆ.ಎಸ್ 625/594 ಅಂಕ (95.04%)

ಈ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಸ್ಥೆ ಹಾಗೂ ಸಂಚಾಲಕಿ ರುಫೀನ ಡಿಸೋಜ, ಕಾಲೇಜಿನ ಪ್ರಾಂಶುಪಾಲರಾದ ಐರೀನ್ ಡಿಸಿಲ್ವಾ ಹಾಗೂ ಶಾಲೆಯ ಎಲ್ಲ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.

Leave a Comment

error: Content is protected !!