ಶ್ರೀಕ್ಷೇತ್ರ ಹೊಂಬುಜದಲ್ಲಿ 3ನೇ ಶ್ರಾವಣ ಮಾಸದ ವಿಶೇಷ ಪೂಜೆ | ಭಕ್ತಿ ಸಮರ್ಪಣೆಯಿಂದ ಜಗನ್ಮಾತೆ ಸಂತುಷ್ಟಿ ಅಭೀಷ್ಟವರಪ್ರದಾಯಿನಿ ಸದಾ ಹರಸಲೆಂಬ ನಂಬಿಕೆ ; ಶ್ರೀಗಳು

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಶ್ರಾವಣ ಮಾಸದ ತೃತೀಯ ಶುಭ ಶುಕ್ರವಾರ ವಿಶೇಷ ಅಲಂಕಾರ, ವಾದ್ಯಗೋಷ್ಠಿಯೊಂದಿಗೆ ಶೋಡಷೋಪಚಾರ ಪೂಜೆ ಅತಿಶಯ ಶ್ರೀಕ್ಷೇತ್ರ ಹೊಂಬುಜ ಜಗನ್ಮಾತೆ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಪರಂಪರಾನುಗತ ಆಗಮೋಕ್ತ ವಿಧಾನಗಳು ಪೀಠಾಧೀಶರಾಗಿರುವ ಪರಮಪೂಜ್ಯ ಜಗನ್ಮಾತೆ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿದವು.

ಪೂಜ್ಯ ಆರ್ಯಿಕಾ 105 ಶಿವಮತಿ ಮಾತಾಜಿ, ವರೂರು ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮಿಗಳವರು ಉಪಸ್ಥಿತರಿದ್ದರು. 108 ವಿವಿಧ ಭಕ್ಷ್ಯಗಳನ್ನು ಶ್ರೀ ಪದ್ಮಾವತಿ ದೇವಿಗೆ ಅರ್ಪಿಸಿದರು.

ಭಕ್ತವೃಂದದವರು ತಮ್ಮ ಭಕ್ತಿ ಸಮರ್ಪಣೆಯಿಂದ ಜಗನ್ಮಾತೆ ಸಂತುಷ್ಟಿ ಹೊಂದಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸ್ವ-ಇಚ್ಚೆಯ ಸೇವೆಯು ಫಲಿಸಲಿ ಎಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಯವರು ಭಕ್ತ ಸಮುದಾಯದವರನ್ನು ಆಶೀರ್ವದಿಸಿದರು.

ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಭಕ್ತರು ಶ್ರೀಕ್ಷೇತ್ರದ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಹಾಗೂ ಶ್ರೀಕ್ಷೇತ್ರಪಾಲ ದೇವರಿಗೆ ಪೂಜೆ ಸಲ್ಲಿಸಿದರು.

ವಸತಿ, ಉಪಹಾರ, ಅನ್ನಪ್ರಸಾದದ ವ್ಯವಸ್ಥೆಯನ್ನು ಶ್ರೀಮಠದ ವತಿಯಿಂದ ಅಚ್ಚುಕ್ಕಟ್ಟಿನಿಂದ ನಿರ್ವಹಿಸಲಾಯಿತು.

Leave a Comment

error: Content is protected !!