RIPPONPETE | ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ, ಕ್ರಮಕ್ಕೆ ಸರ್ಕಾರಕ್ಕೆ ವರದಿ ಕಳುಹಿಸುವ ಮೂಲಕ ಈಡೇರಿಸುವ ಭರವಸೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ರಿಪ್ಪನ್‌ಪೇಟೆ ಅರಸಾಳು  ವಲಯ ವ್ಯಾಪ್ತಿಯಲ್ಲಿ ಅರಣ್ಯ ಒತ್ತುವರಿ ಎಷ್ಟಾಗಿದೆ ? ಆರೋಗ್ಯ ಕೇಂದ್ರಕ್ಕೆ ಸಿಸಿಟಿವಿ ಅಳವಡಿಸಿದ್ದಾರೆಯೇ ? ವಾಷಿಂಗ್ ಮಷಿನ್ ಬಂತಾ ? ಡೆಂಗ್ಯೂ ಹತೋಟಿಗೆ ಬಂದಿದೆಯಾ ?ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಬಳಿ ಮಹಾದ್ವಾರ ಅಳವಡಿಸುವಂತೆ ಹಾಗೂ ಗ್ರಂಥಾಲಯ, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಇಲಾಖೆಯವರು ಸಮಸ್ಯೆಗಳ ಮಹಾಪೂರವೇ ಕೆಡಿಪಿ ಸಭೆಯಲ್ಲಿ ಸಾಕಷ್ಟು ಚರ್ಚೆಗೆ ವೇದಿಕೆಯಾಯಿತು.

ಈಗಾಗಲೇ ಆರಣ್ಯ ಸಚಿವರು ಕಲೆದ 2015 ರಿಂದ ಇಚೇಗೆ ಒತ್ತುವರಿ ಮಾಡಲಾಗಿರುವ ಅರಣ್ಯ ಜಮೀನು ತೆರವು ಕಾರ್ಯಾಚರಣೆ ಕಾರ್ಯ ಭರದಿಂದ ನಡೆಸಲಾಗುತ್ತಿದ್ದು ಅರಸಾಳು ರಿಪ್ಪನ್‌ಪೇಟೆ ವಲಯ ವ್ಯಾಪ್ತಿಯಲ್ಲಿ ಜಿಪಿಎಸ್ ಮೂಲಕ ಒತ್ತುವರಿ ಬಗ್ಗೆ ಸರ್ವೇ ಕಾರ್ಯ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಉಪ ಅರಣ್ಯಾಧಿಕಾರಿ ಮಹೇಶ್ ನಾಯ್ಕ್ ಮಾಹಿತಿ ನೀಡುತ್ತಿದ್ದಂತೆ ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ರಮೇಶ್ ಮತ್ತು ಜಿ.ಡಿ.ಮಲ್ಲಿಕಾರ್ಜುನ ಸುಂದರೇಶ್ ಸಾಕಷ್ಟು ಜನರು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಒತ್ತುವರಿ ಮಾಡಿಕೊಂಡು ಜೀವನೋಪಾಯಕ್ಕಾಗಿ ಬೆಳೆಯನ್ನು ಹಾಕಲು ಸಾಗುವಳಿ ಮಾಡಿಕೊಂಡಿದ್ದಾರೆ. ದಿಢೀರ್ ಈ ರೀತಿಯಲ್ಲಿ ತೆರವು ಕಾರ್ಯಾಚರಣೆಗೆ ಮುಂದಾದರೆ ಅವರ ಗತಿ ಏನು ? ಎಂಬ ಬಗ್ಗೆ ಪ್ರಶ್ನಿಸಿದಾಗ 2004 ರಿಂದಲೇ ಅರಣ್ಯ ಒತ್ತುವರಿಯಾಗಿರುವ ಬಗ್ಗೆ ಸರ್ಕಾರಕ್ಕೆ ಸ್ಯಾಟಲೈಟ್ ಸಮೀಕ್ಷೆ  ಮೂಲಕ ಮಾಹಿತಿ ಪಡೆಯಲಾಗಿದೆ. ನಾವು ಯಾವುದನ್ನು ಮರೆಮಾಚಲು ಸಾಧ್ಯವಿಲ್ಲ ಸಣ್ಣಪುಟ್ಟ ಸಾಗುವಳಿದಾರರಿಗೆ ತೊಂದರೆಯಾಗದಂತೆ ಮತ್ತು ಹೆಚ್ಚು ಒತ್ತುವರಿ ಮಾಡಿರುವವರಿಗೆ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಸವಿಸ್ತಾರವಾಗಿ ಮನವರಿಕೆ ಮಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯ ವೈದ್ಯಾಧಿಕಾರಿಗಳ ಹೆರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಮಾಡಿಸುವುದು ಕಷ್ಟಕರವಾಗಿದೆ ಬರುವ ರೋಗಿಗಳ ಕಡೆಯವರು ಮದ್ಯಪಾನ ಮಾಡಿಕೊಂಡು ಬಂದು ಡಾಕ್ಟರ್ ಸಿಬ್ಬಂದಿಗಳ ಮೇಲೆ ಅವಾಚ್ಯವಾಗಿ ಬೈದು ನಿಂದಿಸುತ್ತಾರೆ. ನಾವು ಚಿಕಿತ್ಸೆ ಕೊಡುವುದಾದರು ಹೇಗೆ ಎಂಬ ಚಿಂತೆ ಕಾಡುವಂತಾಗಿದೆ ನಮಗೆ ರಕ್ಷಣೆ ಇಲ್ಲ ಎಂದು ಸಭೆಯಲ್ಲಿ ವೈದ್ಯಧಿಕಾರಿ ಡಾ. ಆಂಜನೇಯ ಸಭೆಯ ಗಮನಸೆಳೆದು, ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶೇ. 90 ರಷ್ಟು ಡೆಂಗ್ಯೂ ಕಡಿಮೆಯಾಗಿದೆ. ಕೇವಲ 5 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ. ಉಳಿದಂತೆ ನಮ್ಮ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಸಿಸಿಟಿವಿ ಮತ್ತು ವಾಷಿಂಗ್ ಮಷಿನ್ ಅಗತ್ಯವಾಗಿ ಬೇಕಾಗಿದ್ದು ಈ ಕೂಡಲೇ ಅಳವಡಿಸುವಂತೆ ಮನವಿ ಮಾಡಿದರು. ಆಗ ಅಧ್ಯಕ್ಷರು ತುರ್ತು ಸಿಸಿಟಿವಿ ಮತ್ತು ವಾಷಿಂಗ್ ಮಷಿನ್ ಕೊಡಿಸುವ ಬಗ್ಗೆ ಭರವಸೆ ನೀಡಿದರು.

ರಾಷ್ಟ್ರೀಕೃತ ಕೆನರಾಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿರುವ ಬಗ್ಗೆ ದೂರುಗಳಿದ್ದು ನಂತರದಲ್ಲಿ ಚರ್ಚಿಸುವುದು ಹಾಗೂ ಉಳಿದಂತೆ ಕೃಷಿ ಪಶು ತೋಟಗಾರಿಕೆ ಶಿಕ್ಷಣ ಅಂಗನವಾಡಿ ಆಶಾ ಮತ್ತು ವಸತಿ ನಿಲಯಗಳಲ್ಲಿನ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಮಧುಸೂದನ್, ಕೆಡಿಪಿ ನಾಮನಿರ್ದೇಶಿತ ಸದಸ್ಯ ಆಸಿಫ್ ಭಾಷಾ, ಗ್ರಾಮ ಪಂಚಾಯಿತ್ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Comment

error: Content is protected !!