RIPPONPETE | ಗಣೇಶೋತ್ಸವಕ್ಕೆ ಭರದ ಸಿದ್ಧತೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿ 57ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು  ಸೆಪ್ಟೆಂಬರ್ 7 ರಿಂದ ಸೆ.17 ರವರೆಗೆ 11 ದಿನ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಾಗುವುದೆಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ. 7 ರಂದು ಶನಿವಾರ ಮಧ್ಯಾಹ್ನ 12-30ಕ್ಕೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯ ಸಭಾಭವನದ “ತಿಲಕ್‌ಮಂಟಪ’’ ದಲ್ಲಿ ಗಣಪತಿಯನ್ನು ಪ್ರತಿಷ್ಟಾಪನೆ ನೆರವೇರಿಸಿ ಪ್ರತಿಷ್ಟಾಪನಾ ಪೂಜೆ ಜರುಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮಗಳು :

  • ಸೆ. 8 ರಂದು ಗಣೇಶೋತ್ಸವದ ಅಂಗವಾಗಿ ಭಾನುವಾರ ರಾತ್ರಿ 8.30 ಕ್ಕೆ `ಸಂತೃಪಿ’ ಅಂಧಕಲಾವಿದರ ತಂಡದವರಿಂದ ರಸಮಂಜರಿ ಕಾರ್ಯಕ್ರಮ.
  • ಸೆ. 9 ಸೋಮವಾರದಂದು ಗಣೇಶೋತ್ಸವ ಮಂಟಪದಲ್ಲಿ ರಾತ್ರಿ 8.30 ಕ್ಕೆ ನೀಲಾವರ ಕೆಳಕುಂಜಾಲು ಯಕ್ಷಗಾನ ಕಲಾ ಪ್ರತಿಷ್ಟಾನ ಇವರಿಂದ `ಯಕ್ಷಸಮೂಹ’, ಯಕ್ಷಗಾನ ಕಾರ್ಯಕ್ರಮ.
  • ಸೆ. 10 ಮಂಗಳವಾರದಂದು ರಾತ್ರಿ 8.30 ಕ್ಕೆ ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ ಹಾಗೂ ಶ್ರೀಬಸವೇಶ್ವರ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ.
  • ಸೆ. 11 ಬುಧವಾರದಂದು ರಾತ್ರಿ 8.30 ಕ್ಕೆ ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ.
  • ಸೆ.12 ಗುರುವಾರದಂದು ರಾತ್ರಿ 8.30 ಕ್ಕೆ ಹೆಸರಾಂತ ಜಾನಪದ ಆಯ್ದ ಆಹ್ವಾನಿತ ತಂಡಗಳಿಂದ “ಬಳೆಕೋಲಾಟ’’ ಸ್ಪರ್ಧೆ ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯಲ್ಲಿ ಸೇವೆಯನ್ನು ಪರಿಗಣಿಸಿ ಅರ್ಚಕ ರಘುನಾಥ ಭಟ್(ರವಿಭಟ್ರು) ವಿನಾಯಕ ಸೌಂಡ್ಸ್ ಸಿಸ್ಟಂ ಎಸ್.ದಾನಪ್ಪ ಇವರಿಗೆ ಸನ್ಮಾನ.
  • ಸೆ.13 ಶುಕ್ರವಾರದಂದು ರಾತ್ರಿ 8.30ಕ್ಕೆ ಕಲಾಸ್ಫೂರ್ತಿ ಹವ್ಯಾಸಿ ನಾಟಕ ತಂಡ ಇವರಿಂದ “ಮನೆ ಒಕ್ಲು’’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ.
  • ಸೆ. 14 ಶನಿವಾರದಂದು ರಾತ್ರಿ 8.30 ಕ್ಕೆ ಹಂಸವೇಣಿ ಶಿಕ್ಷಕವೃಂದ ಬಟ್ಟೆಮಲ್ಲಪ್ಪ ಇವರಿಂದ ಕರೋಕೆಸಾಂಗ್ ಮತ್ತು ಮನರಂಜನಾ ಕಾರ್ಯಕ್ರಮ.
  • ಸೆ.15 ಭಾನುವಾರದಂದು ರಾತ್ರಿ 8.30 ಕ್ಕೆ ಅರೆಹೊಳೆ ಪ್ರತಿಷ್ಟಾನ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯವೈಭವ ಕಾರ್ಯಕ್ರಮ.
  • ಸೆ. 16  ಸೋಮವಾರದಂದು ರಾತ್ರಿ 8.30 ಕ್ಕೆ “ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್’’ ರಿಪ್ಪನ್‌ಪೇಟೆ-ಕೊಪ್ಪ-ಹೊಸನಗರ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ.
  • ಸೆ. 17 ಮಂಗಳವಾರದಂದು ಮಧ್ಯಾಹ್ನ 12.30 ಕ್ಕೆ ಶ್ರೀಸ್ವಾಮಿಯ ವಿಸರ್ಜನಾ ಪೂಜೆ ನಂತರ 3ಕ್ಕೆ ರಾಜಬೀದಿ ಉತ್ಸವ ಜರುಗಲಿದೆ.

Leave a Comment

error: Content is protected !!