Ripponpete | ಪಿಎಸ್‌ಐಗೆ ನಾಗರೀಕರಿಂದ ಬೀಳ್ಕೊಡುಗೆ

Written by Malnadtimes.in

Published on:

WhatsApp Group Join Now
Telegram Group Join Now

Ripponpete | ಲೋಕಸಭಾ ಚುನಾವಣೆ (Loksabha Election) ಆಂಗವಾಗಿ ಇಲ್ಲಿನ ಪೊಲೀಸ್ ಠಾಣೆಗೆ (Police Station) ವರ್ಗಾವಣೆಯಾಗಿ ಬಂದು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಜನಾನುರಾಗಿಯಾಗಿ ಕಾರ್ಯನಿರ್ವಹಿಸಿದ ಪಿಎಸ್‌ಐ ಕೆ.ವೈ.ನಿಂಗರಾಜ್ ಇವರನ್ನು ಪುನಃ ಸರ್ಕಾರ ಕರ್ತವ್ಯದ ಮೂಲ ಸ್ಥಳಕ್ಕೆ ವರ್ಗಾವಣೆ ಮಾಡಿದ್ದು ಇಂದು ಅವರನ್ನು ರಿಪ್ಪನ್‌ಪೇಟೆ ನಾಗರೀಕರು ಠಾಣೆಯಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು.

‘ಠಾಣೆಗೆ ಬರುವ ಮುನ್ನ ಇಲ್ಲಿನ ಜನತೆ ವಿಭಿನ್ನ, ಕರ್ತವ್ಯ ಮಾಡುವುದು ಹೇಗೆ ಎಂಬ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೆ, ನನಗೆ ಈಗ ಬಿಟ್ಟು ಹೋಗುವುದು ಹೇಗೆ ಎಂಬಂತಾಗಿದೆ ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಠಾಣೆಗೆ ವರ್ಗಾವಣೆಯಾಗಿ ಬಂದ ಕೆಲವೇ ದಿನಗಳಲ್ಲಿ ಹುಂಚ ಮುತ್ತಿನಕೆರೆಯಲ್ಲಿ ಕೊಲೆ ಮಾಡಿ ಹಾಕಲಾದ ಪ್ರಕರಣವನ್ನು ಪತ್ತೆ ಮಾಡುವುದರೊಂದಿಗೆ ಕೆಂಚನಾಲ ಮತ್ತು ಕೋಡೂರು ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಸಿಸಿ ಟಿವಿ ಅಳವಡಿಸಿದ್ದು ಅಲ್ಲದೆ ಕೆಂಚನಾಲಕ್ಕೆ ಮುಂಜಾನೆ ಸೈಕಲ್ ಮೂಲಕ ಮುಫ್ತಿಯಲ್ಲಿ ಹೋಗಿ ಅಲ್ಲಿನ ಜನರ ಬಳಿ ಸಾಕಷ್ಟು ಚರ್ಚಿಸಿ ಕೊನೆಗೆ ಅವರುಗಳೇ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿ ಮಾತನಾಡುತ್ತಿದ್ದು ಈ ರೀತಿಯಲ್ಲಿ ಜನಮೆಚ್ಚುಗೆ ಗಳಿಸಲು ಸಾಧ್ಯವಾಗಿದೆ ಎಂದು ತಮ್ಮ ನಾಲ್ಕು ತಿಂಗಳಲ್ಲಿ ಸಾಕಷ್ಟು ಅನುಭವವನ್ನು ತಮ್ಮೂರಿನಲ್ಲಿ ಕಲಿಯುವ ಅವಕಾಶ ಕಲ್ಪಿಸಿದ್ದೀರಿ’ ಎಂದು ನಿರ್ಗಮಿತ ಪಿಎಸ್‌ಐ ಕೆ.ವೈ.ನಿಂಗರಾಜ್ ಹೇಳಿಕೊಂಡರು.

ಗ್ರಾಮಾಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಆರ್.ಎ.ಚಾಬುಸಾಬ್, ಎಂ.ಬಿ.ಮಂಜುನಾಥ, ಎಂ. ಸುರೇಶ್‌ಸಿಂಗ್, ಆರ್.ರಾಘವೇಂದ್ರ, ಟಿ.ಆರ್.ಕೃಷ್ಣಪ್ಪ, ರವೀಂದ್ರ ಕೆರೆಹಳ್ಳಿ, ಶ್ರೀಧರ, ರಮೇಶ್, ಕೆ.ಎನ್.ರಾಜಶೇಖರ್ ಕಮದೂರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿವರ್ಗ ಸೇರಿದಂತೆ ಇನ್ನಿತರರು ಇದ್ದರು.

Leave a Comment

error: Content is protected !!