ಲಲಿತ ಸಹಸ್ರನಾಮವಳಿಯ ಪಠಣದಿಂದ ಸಂಕಷ್ಟ ಪರಿಹಾರ ; ಮೂಲೆಗದ್ದೆ ಶ್ರೀಗಳು

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಶ್ರಾವಣ ಮಾಸದಲ್ಲಿ ನಮ್ಮ ಪೂರ್ವಿಕರು ಪುರಾಣ ಪ್ರವಚನವನ್ನು ಶ್ರವಣ ಮಾಡುವ ಮೂಲಕ ಲಿಲತ ಸಹಸ್ರ ನಾಮವಳಿಯನ್ನು ಪಠಣಮಾಡುವುದರಿಂದ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುವವು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆಮಠದಲ್ಲಿ ಶ್ರಾವಣ ಮಾಸದ ಶ್ರಾವಣ ಲಲಿತ ಸಹಸ್ರನಾಮವಳಿ ಪಠಣವನ್ನು ಶಿವಮೊಗ್ಗದ ಸಮನ್ವಯ ಕಾಶಿ ನೇತೃತ್ವದ ತಂಡ ಭಜನಾ ಮಂಡಳಿಯ ಆಧ್ಯಕ್ಷ ಶಬರೀಶ್ ಇವರೊಂದಿಗೆ ಶಿವಮೊಗ್ಗ ಮಹಿಳಾ ಭಜನಾ ತಂಡದವರು ನಡೆಸಿಕೊಟ್ಟ ಭಜನಾ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಿ ಪಡಿಸಿದ ಶ್ರೀಗಳು, ಇಂತಹ ಧಾರ್ಮಿಕ ಆಚರಣೆಯಲ್ಲಿ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಮಠ ಮಂದಿರಗಳಲ್ಲಿ ಭಜನೆಯಲ್ಲಿ ಲಲಿತ ಸಹಸ್ರನಾಮವಳಿಯನ್ನು ಭಕ್ತ ಸಮೂಹದಲ್ಲಿ ಪಾಲ್ಗೊಳುವಂತೆ ಪ್ರೇರೇಪಿಸಿರುವುದು ಮತ್ತು ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂದಲೂ ಈ ಒಂದು ತಿಂಗಳು ದೇವರ ನಾಮಸ್ಮರಣೆ ಮಾಡುವುದರಿಂದ ಎಂತಹ ಕ್ಲಿಷ್ಟಕರ ಸಮಸ್ಯೆ ಎದುರಾದರೂ ತಕ್ಷಣ ಪರಿಹಾರಗೊಳ್ಳುವವು ಎಂದರು.

ಶ್ರಾವಣದ ಒಂದು ತಿಂಗಳ ಪರಿಯಂತ ನಾವು ಮಠದಲ್ಲಿದ್ದು ಬರುವ ಭಕ್ತರಿಗೆ ತಮ್ಮ ಸಂಕಲ್ಪದಂತೆ ವಿಶೇಷ ಪೂಜಾದಿಗಳನ್ನು ನೆರೆವೇರಿಸಿ ಗುರು ಕಾರುಣ್ಯಾದ ದರ್ಶನಾಶೀರ್ವಾದ ಪಡೆಯುವಂತೆ ಮಾಡಲಾಗಿದೆ ಎಂದರು.

Leave a Comment

error: Content is protected !!