Hosanagara | ಪ್ರೇಕ್ಷಕರ ಮನಸೂರೆಗೊಂಡ ಕೃಷ್ಣವೇಷ ಸ್ಪರ್ಧೆ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA ; ಜನರಲ್ಲಿ ಸಾಕಷ್ಟು ಹಣ ಅಧಿಕಾರ ವಿದ್ದರೂ ಅದನ್ನು ಬಡವರಿಗೆ ಶಾಲೆಗಳಿಗೆ ಹಂಚುವ ಗುಣವಿರುವುದು ಸ್ವಲ್ಪ ಜನರಲ್ಲಿ ಮಾತ್ರ ಅಲ್ಪ ಜನರು ದಾನ, ಧರ್ಮ ಮಾಡುವುದರಿಂದ ಬಡ ಮಕ್ಕಳಿಗೆ ಓದಿಗೆ ಅನುಕೂಲಕರವಾಗಲಿದೆ ಎಂದು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನರ‍್ಲೆ ರಮೇಶ್‌ ಹೇಳಿದರು.

ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಶನಿವಾರ ಕೃಷ್ಣವೇಶ ಸ್ವರ್ಧೆ ಹಾಗೂ ಶಾಲೆಗೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನದಲ್ಲಿ ದಾನಿಗಳ ಪ್ರಮಾಣ ಹೆಚ್ಚೆಚ್ಚು ಕಾಣ ಸಿಗುತ್ತಿದ್ದು ಇದರಿಂದ ಬಡ ಮಕ್ಕಳಿಗೆ ಓದಲು ಹಾಗೂ ಆಟೋಟಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತೋಷದಾಯಕವಾಗಿದೆ. ಇನ್ನು ಮುಂದಿನ ದಿನದಲ್ಲಿ ಕ್ರೀಡಾಕೂಟಗಳು ಆರಂಭವಾಗಲಿದ್ದು ಈ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಜರ್ಸಿ ಕೊರತೆಯಾಗಿದ್ದು ಅದನ್ನು ಹೊಸನಗರ ದಾನಿಯಾದ ಮಂಜುನಾಥ್ ಪ್ಲೇವುಡ್ ಅಂಗಡಿ ಮಾಲೀಕರಾದ ವಸವೆ ಕೃಷ್ಣಮೂರ್ತಿ, ರಾಜೇಶ್ ಕಿಳಂಬಿ, ಅಮೀರ್ ಹಂಜ, ಬಿ.ಜಿ. ಚಂದ್ರಮೌಳಿ, ಸುಧೀಂದ್ರ ಮತ್ತು ಧನಂಜಯರವರು ಕ್ರೀಡಾಕೂಟದಲ್ಲಿ ಭಾಗವಹಿಸಲು ಜರ್ಸಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದು ಇದು ಸಂತೋಷದಾಯಕ ವಿಷಯವಾಗಿದೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಾನ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿ ದಾನಿಗಳನ್ನು ಸನ್ಮಾನಿಸಿದರು.

ಕೃಷ್ಣವೇಶ ಸ್ಪರ್ಧೆ :

ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಎಲ್‌ಕೆಜಿ ಹಾಗೂ ಯುಕೆಜಿ ವಿಭಾಗದ ವಿದ್ಯಾಥಿಗಳಿಗಾಗಿ ಏರ್ಪಡಿಸಿದ ಕೃಷ್ಣವೇಶ ಸ್ಪರ್ಧೆಯಲ್ಲಿ ಹಲವಾರು ಪುಟಾಣಿಗಳು ಭಾಗವಹಿಸಿ ತಮ್ಮ ಚಿತ್ತಾಕರ್ಷಕ ವೇಶಭೂಷಣದಿಂದ ಪ್ರೇಕ್ಷಕರ ಮನಸೂರೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೋಹಿಣಿ ಸ್ವರೂಪ್, ಸದಸ್ಯೆ ಶೈಲಜಾ ಸತ್ಯನಾರಾಯಣ, ಲಕ್ಷ್ಮೀ ನಾಸೀರ್, ಗೌತಮ್ ಕುಮಾರ ಸ್ವಾಮಿ, ವಿಜಯ, ಹೆಚ್. ಆರ್.ರಾಘವೇಂದ್ರ, ಪ್ರವೀಣ್, ಪ್ರದೀಪ್, ರೆಹಮತ್, ಚಂದ್ರಶೇಖರ ನಾಗೇಶ್, ಶಿಕ್ಷಕಿಯಾದ ತಾರ, ಲತಾ ನಾಯಕ್, ಗಾಯಿತ್ರಿ, ಮಮತಾ, ಪ್ರಕಾಶ್, ರಾಜುಶೆಟ್ಟಿ, ಸುವರ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!