ಅ.ಭಾ.ವೀ.ಲಿಂ.ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಉಮೇಶರಿಗೆ ಬೃಹನ್ಮಠದಲ್ಲಿ ಸಮ್ಮಾನ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಹೊಸನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಣಿಕರೆ ಎಂ.ಎಸ್.ಉಮೇಶರನ್ನು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಮಾಜದ ಪರವಾಗಿ ಸನ್ಮಾನಿಸಿ ಆಶೀರ್ವದಿಸಿದರು.

ನಂತರ ಬರುವ ನವೆಂಬರ್ 7 ರಿಂದ 8 ರವರೆಗೆ ಕೋಣಂದೂರು ಬೃಹನ್ಮಠದ ನೂತನ ಶಿಲಾ ಮಂಟಪ ಉದ್ಘಾಟನೆ ಕರ್ತೃಗದ್ದುಗೆ ಲಿಂಗ ಪ್ರತಿಷ್ಟಾಪನೆ, ಗುರು ನಿವಾಸ ಲೋಕಾರ್ಪಣೆ, ಚಂದ್ರಶಾಲೆ ಉದ್ಘಾಟನೆ ಹಾಗೂ ಶ್ರೀಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ  ಐತಿಹಾಸಿಕ ಗುರುವಿರಕ್ತರ ಸಮಾಗಮದ ಧರ್ಮಜಾಗೃತಿ ಸಮಾರಂಭದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಸಮಾಜದ ಕಟ್ಟ ಕಡೆಯ ಕುಟುಂಬಗಳನ್ನು ಗುರುತಿಸುವುದು ಮತ್ತು ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ಕಲ್ಪಿಸಿ ಅವರ ಅಭಿವೃದ್ದಿಗೆ ಸಮಾಜ ಮುಂದಾಗುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವಂತೆ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಿಗೆ ಪದಾಧಿಕಾರಿಗಳಿಗೆ ಹಿತೋಕ್ತಿ ನೀಡಿದರು.

ಗುರು ವಿರಕ್ತರೆಂಬ ಬಗ್ಗೆ ನಮ್ಮಲ್ಲಿ ಸಾಕಷ್ಟು ಗೊಂದಲಗಳಿದ್ದು ಅದನ್ನು ನಿವಾರಿಸುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ ಬೆಳಸಲು ಇಂದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಈ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ಮತ್ತು ಇನ್ನಿತರ ದಾಸೋಹ ಸೇರಿದಂತೆ ಅತಿಥಿಗಣ್ಯ ಮಹಾನೀಯರನ್ನು ಸತ್ಕರಿಸುವ ಬಗ್ಗೆ ಸಮಾಜದವರು ಸಲಹೆ ಸೂಚನೆಗಳನ್ನು ಪಡೆಯವ ಮೂಲಕ ಸಮಿತಿಗಳನ್ನು ರಚಿಸಿ ಸಂಗ್ರಹಣೆ ಕುರಿತು ಗ್ರಾಮಗಳಿಗೆ ಸ್ವಾಮೀಜಿಯವರನ್ನು ಆಹ್ವಾನಿಸುವುದರ ಬಗ್ಗೆ ಸಹ ಚರ್ಚಿಸಿ ನವೆಂಬರ್ 7 ರಂದು ಕೋಣಂದೂರು ಬೃಹನ್ಮಠದಲ್ಲಿ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ ಜಗದ್ಗುರು ಮಹಾಸನ್ನಿಧಿಯವರ ಇಷ್ಟಲಿಂಗ ಮಹಾಪೂಜೆ ಹಾಗೂ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ 8 ರಂದು ನೂತನ ಶಿಲಾ ಮಂಟಪ ಉದ್ಘಾಟನೆ ಕರ್ತೃಗದ್ದುಗೆ ಲಿಂಗು ಪ್ರತಿಷ್ಟಾಪನೆ ಗುರು ನಿವಾಸ ಲೋಕಾರ್ಪಣೆ, ಚಂದ್ರಶಾಲೆ ಉದ್ಘಾಟನೆ ಹಾಗೂ ಶ್ರೀಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ  ಹಾಗೂ ಐತಿಹಾಸಿಕ ಗುರುವಿರಕ್ತರ ಸಮಾಗಮದ ಧರ್ಮಜಾಗೃತಿ ಸಮಾರಂಭ ಸಹ ಏರ್ಪಡಿಸಲಾಗಿದ್ದು ಸಕಲ ಭಕ್ತ ಸಮೂಹ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳುವಂತೆ ಕರೆ ನೀಡಿದರು.

ಹೊಸನಗರ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಉಮೇಶ, ಸಾಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಹಾಲಸ್ವಾಮಿಗೌಡರ ಬೆಳಕೋಡು, ರಾಜೇಂದ್ರಗೌಡ, ಹೆಚ್.ಎಂ.ವರ್ತೇಶಗೌಡ ಹುಗುಡಿ, ಗಿರೀಶ ಕೆರೆಹಿತ್ತಲು, ದೇವೇಂದ್ರಪ್ಪಗೌಡ ನೆವಟೂರು, ತಟ್ಟೆಕೊಪ್ಪ ವೀರೇಶ್‌ಗೌಡ, ನಾಗರಾಜಗೌಡ, ಜಂಬಳ್ಳಿ ನಾಗಭೂಷಣಗೌಡ, ಜೆ.ಎಂ.ಶಾಂತಕುಮಾರ್ ಜಂಬಳ್ಳಿ, ಮುರುಗೇಶಪ್ಪಗೌಡ ಲಕ್ಕವಳ್ಳಿ, ಕುಕ್ಕಳಲೇ ನಾಗರಾಜಗೌಡ, ಹೆಚ್.ಎಸ್.ರವಿ ಹಾಲುಗುಡ್ಡೆ, ಮಂಜುನಾಥ ಆದುವಳ್ಳಿ, ಕೆಂಜಿಗಾಪು, ರಾಮಗೊಂಡನಹಳ್ಳಿ, ಕಲ್ಲಹಳ್ಳಿ, ಜಂಬಳ್ಳಿ, ಶಿವಪುರ, ನಿಂಬೆಗೊಂದಿ, ತೆರಲಗಟ್ಟ, ಆಲವಳ್ಳಿ, ಹಾಲುಗುಡ್ಡೆ ಬಾಳೂರು, ಹಿಲ್ಕುಂಜಿ, ಗವಟೂರು, ಮಸರೂರು, ಬೆನವಳ್ಳಿ, ಖೈರದವರಮನೆ, ಸೊನಲೆ, ಜೋಗಿಹಳ್ಳಿ, ಕಲ್ಲುಮನೆ, ಹೈತೂರು ಹೆಗ್ಗಟ್ಟು, ಬೆಳಕೋಡು, ಲಕ್ಕವಳ್ಳಿ, ಕೆರೆಹಿತ್ತಲು, ತಂಗಳವಾಡಿ, ಆನಂದಪುರ, ಅವಿನಳ್ಳಿ, ಬಾಳುಗೋಡು, ಕೋಣಂದೂರು ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಸಾಗರ, ಹೊಸನಗರ ತಾಲ್ಲೂಕಿನ ಭಕ್ತವೃಂದ ಹಾಜರಿದ್ದರು.

Leave a Comment

error: Content is protected !!