ಹೊಸನಗರ: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊಸನಗರದ ಖಾಸಗಿ ಶಾಲೆಯಾದ ಗುರೂಜಿ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಆರ್ ನಾಯಕ್ 625ಕ್ಕೆ 620 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ಸ್ಥಾನ ಹಾಗೂ ಹೊಸನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಗುರೂಜಿ ಇಂಟರ್ ನ್ಯಾಶನಲ್ ಹೈಸ್ಕೂಲ್ ವಿಭಾಗದ ಎಸ್ಎಸ್ಎಲ್ಸಿಯಲ್ಲಿ ಕಳೆದ ಹತ್ತು ವರ್ಷಗಳಿಂದ 100% ಫಲಿತಾಂಶ ಬರುತ್ತಿದ್ದು ಈ ವರ್ಷವೂ 100% ಫಲಿತಾಂಶ ಬಂದಿದೆ. ಈ ವರ್ಷ ಒಟ್ಟು 12 ಬಾಲಕರು ಹಾಗೂ 16 ಬಾಲಕಿಯರು ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರಿಗೆ ಶಾಲೆಯ ಅಧ್ಯಕ್ಷರಾದ ಸುದೇಶ್ ಕಾಮತ್, ಕಾರ್ಯದರ್ಶಿ ಶಾಂತಮೂರ್ತಿ, ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ನಿರ್ದೆಶಕರು ವಿದ್ಯಾರ್ಥಿಗಳಿಗೆ ಹಾಗೂ ಭೂದಿಸಿದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.