Karnataka SSLC Result – 2024 | ಹೊಸನಗರ ತಾಲೂಕಿಗೆ ಕಳೆದ ಬಾರಿಗಿಂತ ಶೇ.2.76 ಫಲಿತಾಂಶದಲ್ಲಿ ಏರಿಕೆ ; ಬಿಇಒ ಹೆಚ್.ಆರ್. ಕೃಷ್ಣಮೂರ್ತಿ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ : 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊಸನಗರ ತಾಲ್ಲೂಕಿಗೆ ಶೇ. 95.06 ಫಲಿತಾಂಶ ಬಂದಿರುತ್ತದೆ. ಕಳೆದ ಸಾಲಿಗಿಂತ ಶೇ.2.76 ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

23 ಶಾಲೆಗಳಿಗೆ ಶೇ.100 ಫಲಿತಾಂಶ:
2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ರೆಗ್ಯೂಲರ್ ವಿದ್ಯಾರ್ಥಿಗಳಲ್ಲಿ (Regular Fresh ) ತಾಲ್ಲೂಕಿನ 39 ಪ್ರೌಢಶಾಲೆಗಳಲ್ಲಿ 23 ಪ್ರೌಢಶಾಲೆಗಳು 100ಕ್ಕೆ 100ರಷ್ಟು ಫಲಿತಾಂಶ ದಾಖಲಿಸಿದ್ದು, 12 ಸರ್ಕಾರಿ ಶಾಲೆಗಳು ಮತ್ತು 01 ಅನುದಾನಿತ ಮತ್ತು 10 ಅನುದಾನ ರಹಿತ ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.

ತಾಲ್ಲೂಕಿನಲ್ಲಿ ಒಟ್ಟು 1497 ಪರೀಕ್ಷೆ ಬರೆದಿದ್ದು, 1423 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 95.06ರಷ್ಟು ದಾಖಲೆಯ ಫಲಿತಾಂಶ ಬಂದಿದೆ ಎಂದರು.

ಶೇ. 100 ಫಲಿತಾಂಶ ಪಡೆದ 12 ಸರ್ಕಾರಿ ಶಾಲೆಗಳು:
ಸರ್ಕಾರಿ ಪ್ರೌಢಶಾಲೆ ಜಯನಗರ, ಕಾರಣಗಿರಿ, ಸಂಪೆಕಟ್ಟೆ, ಹೊಸನಾಡು, ನಗರ, ಕಾನುಗೋಡು, ಮಸಗಲ್ಲಿ, ಚಿಕ್ಕಜೇನಿ, ಕೆಪಿಎಸ್ ಅಮೃತ ಮತ್ತು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ (ಹಿಂದುಳಿದ ವರ್ಗ) ಗೇರುಪುರ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ (ಎಸ್ ಸಿ) ಗೇರುಪುರ ಮತ್ತು ಡಾ. ಬಿ‌.ಆರ್ ಅಂಬೇಡ್ಕರ್ ವಸತಿ ಶಾಲೆ (ಪ.ಜಾತಿ) ಕೆರೆಹಳ್ಳಿ.

ಶೇ. 100 ಫಲಿತಾಂಶ ಪಡೆದ 11 ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು :
ಚೆನ್ನಮ್ಮಾಜಿ ಪ್ರೌಢಶಾಲೆ ಆಲಗೇರಿಮಂಡ್ರಿ, ಮೇರಿಮಾತಾ ಮತ್ತು ಶಾರದಾ ಪ್ರೌಢಶಾಲೆಗಳು ರಿಪ್ಪನ್‌ಪೇಟೆ, ಹೋಲಿರಿಡೀಮರ್, ಗುರೂಜಿ ಇಂಟರ್ ನ್ಯಾಷನಲ್ ಮತ್ತು ಕುವೆಂಪು ಶಾಲೆಗಳು ಹೊಸನಗರ, ಪ್ರಜ್ಞಾ ಭಾರತಿ ನಿಟ್ಟೂರು, ಅಮೃತ ವಿದ್ಯಾಲಯಂ ನಗರ ಮತ್ತು ಶ್ರೀ ರಾಮಕೃಷ್ಣ ಶಾಲೆಗಳು ರಿಪ್ಪನ್‌ಪೇಟೆ, ಬಟ್ಟೆಮಲ್ಲಪ್ಪ ಮತ್ತು ಹೊಸನಗರ.

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಪ.ಜಾತಿ) ಕೆರೆಹಳ್ಳಿ ಹೊಸನಗರ ತಾಲೂಕು ಶಾಲೆಯ ಫಲಿತಾಂಶ ತಪ್ಪಾಗಿ ತೀರ್ಥಹಳ್ಳಿ ತಾಲ್ಲೂಕಿನ ಫಲಿತಾಂಶದಲ್ಲಿ ಸೇರಿಕೊಂಡಿದೆ ಇದನ್ನು ಸರಿಪಡಿಸಲು ಉಪನಿರ್ದೇಶಕರಿಗೆ ಈಗಾಗಲೇ ಕೋರಲಾಗಿದೆ ಎಂದು ತಿಳಿಸಿದ್ದಾರೆ.

13 ಶಾಲೆಗಳು ಶೇ. 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದು ಮತ್ತು 03 ಶಾಲೆಗಳು ಶೇ. 90ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ ಎಂದು ಬಿಇಒ ತಿಳಿಸಿದ್ದಾರೆ.

ಸರ್ಕಾರಿ ಪ್ರೌಢಶಾಲೆ ಯಡೂರಿನ ಕು.ನಿಹಾಲ್ ಹೆಚ್ ಜಿ ಮತ್ತು ಗುರೂಜಿ ಇಂಟರ್ ನ್ಯಾಷನಲ್ ಪ್ರೌಢಶಾಲೆಯ ಕು.ಸಮೀಕ್ಷಾ ಆರ್ ನಾಯಕ್ 625ಕ್ಕೆ 620 ಮತ್ತು ಕು.ಸುಬ್ರಹ್ಮಣ್ಯ ಶೆಣೈ 625ಕ್ಕೆ 615 ಮತ್ತು ಸರ್ಕಾರಿ ಪ್ರೌಢಶಾಲೆ ಹೊಸನಾಡಿನ ಕು.ನಾಗವೇಣಿ 625ಕ್ಕೆ 615 ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಇದಕ್ಕಾಗಿ ಸಹಕಾರ, ಸಲಹೆ ಮಾರ್ಗದರ್ಶನ ಮಾಡಿದ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ, ಎಸ್ ಎಸ್ ಎಲ್ ಸಿ ಜಿಲ್ಲಾ ನೋಡಲ್ ಅಧಿಕಾರಿಗಳನ್ನು, ಎಲ್ಲಾ ಜಿಲ್ಲಾ ಹಂತದ ಅಧಿಕಾರಿಗಳನ್ನು, ಡಯಟ್ ನ ಹಿರಿಯ ಮತ್ತು ಕಿರಿಯ ಉಪನ್ಯಾಸಕರುಗಳಿಗೆ ಬಿಇಒ ಕೃಷ್ಣಮೂರ್ತಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಉತ್ತಮ ಪಡೆದ ಫಲಿತಾಂಶ ಶಾಲೆಗಳ ಉಪ-ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಹಿರಿಯ ಸಹ-ಶಿಕ್ಷಕರು, ಸಹಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಪ್ರೌಢಶಾಲಾ ಮುಖ್ಯಶಿಕ್ಷಕರ, ಸಹಶಿಕ್ಷಕರ, ವಿಷಯವಾರು ಕ್ಲಬ್‌ಗಳ, ಇತರೆ ಎಲ್ಲಾ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಮತ್ತು ಪೋಷಕರು, ವಿದ್ಯಾರ್ಥಿಗಳಿಗೆ, ಸಮನ್ವಯಾಧಿಕಾರಿ ರಂಗನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ್, ಟಿಪಿಓ ಬಾಲಚಂದ್ರ ರಾವ್ ಮತ್ತು ಎಸ್ ಎಸ್ ಎಲ್ ಸಿ ತಾಲ್ಲೂಕು ನೋಡಲ್ ಅಧಿಕಾರಿ ಪರಮೇಶ್ವರ್ ರವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Comment

error: Content is protected !!