ಲೋಕ ಕಲ್ಯಾಣಾರ್ಥ ಮೂಲೆಗದ್ದೆ ಮಠದಲ್ಲಿ ಇಷ್ಟಲಿಂಗ ಶಿವಪೂಜಾನುಷ್ಠಾನ ಶ್ರಾವಣ ಚಿಂತನೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಲೋಕಕಲ್ಯಾಣಾರ್ಥ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಶ್ರಾವಣ ಚಿಂತನ ಮತ್ತು ಇಷ್ಟಲಿಂಗ ಶಿವಪೂಜಾನುಷ್ಟಾನ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಗಳು ಹೇಳಿದರು.

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಶ್ರಾವಣ ಚಿಂತನ ಮತ್ತು ಇಷ್ಟಲಿಂಗ ಶಿವಪೂಜಾನುಷ್ಟಾನ ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಶ್ರಾವಣದ ಒಂದು ತಿಂಗಳ ಕಾಲ ನಡೆಸಲಾಗುತ್ತಿರುವ ಈ ಪೂಜಾ ಕೈಂಕರ್ಯದಿಂದ ನಾಡಿನೆಲ್ಲೆಡೆ ಶಾಂತಿ ಸೌಹಾರ್ದತೆ ನೆಮ್ಮದಿ ಸಂವೃದ್ದಿ ಮಳೆ ಬೆಳೆಯಾಗಲೆಂಬ ಸಂಕಲ್ಪದಂತೆ ಸುತ್ತಮುತ್ತಲಿನ ಭಕ್ತರು ಲಿಂಗಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದರು.

ದೇಶದ ಅಶಾಂತಿ ಅರಾಜಕತೆ ತುಂಬಿಕೊಂಡಿದ್ದು ಮನುಷ್ಯರಲ್ಲಿ ಮೃಗೀಯ ಭಾವನೆ ಹೆಚ್ಚಾಗಿದ್ದು ಯಾರಲ್ಲೂ ತಾಳ್ಮೆ ಸಹನೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶ್ರಾವಣ ಮಾಸದಲ್ಲಿ ಒಳ್ಳೆಯ ಚಿಂತೆಯೊಂದಿಗೆ ಧಾರ್ಮಿಕ ಆಧ್ಯಾತ್ಮಿಕ ಭಾವನೆಯನ್ನು ಭೋದನೆ ಮಾಡುವ ಪ್ರವಚನಗಳನ್ನು ಕೇಳಿಸುವುದರಿಂದಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸುವಂತೆ ಮಾಡುವುದೇ ಈ ಶ್ರಾವಣ ಮಾಸದ ಕಾರ್ಯಕ್ರಮದ ಉದ್ದೇಶವೆಂದು ಮೂಲೆಗದ್ದೆ ಮಠದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಶ್ರಾವಣ ಮಾಸದ ಇಷ್ಟಲಿಂಗ ಶಿವಪೂಜಾನುಷ್ಟಾನದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Leave a Comment

error: Content is protected !!