ಅಪೌಷ್ಟಿಕತೆ ನಿವಾರಣೆ ಸವಾಲಾಗಿದೆ ; ಸುಮಂಗಲ ದೇವರಾಜ್

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಹುಂಚ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಪೋಷಣ್ ಅಭಿಯಾನ ಪೌಷ್ಠಿಕ ಸಪ್ತಾಹ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಹುಂಚ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಂಗಲ ದೇವರಾಜ್ ಉದ್ಘಾಟಿಸಿ ಮಾತನಾಡಿ, ಹಸಿವು ಅಪೌಷ್ಟಿಕತೆ ನಿವಾರಣೆ ಅನ್ನುವುದು ಜಗತ್ತಿನ ಎರಡು ಜ್ವಲಂತ ಸಮಸ್ಯೆಗಳು. ಇವುಗಳ ನಿವಾರಣೆಗೆ ವಿಶ್ವಸಂಸ್ಥೆ ಸ್ಥಳೀಯ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಅವಿರತ ಶ್ರಮ ವಹಿಸುತ್ತವೆ. ಆದರೂ ಅಪೌಷ್ಟಿಕತೆ ನಿರ್ಮೂಲನೆ ಸವಾಲಾಗಿ ಪರಿಣಮಿಸಿದೆ. ತಾಯಿ ಗರ್ಭದಿಂದಲೇ ಮಗುವನ್ನು ಪೋಷಕಾಂಶ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿಯ ಮೇಲ್ವಿಚಾರಕರಾದ ದಿವ್ಯ, ಪಂಚಾಯತಿ ಸದಸ್ಯರಸ ರಾಘವೇಂದ್ರ ತೋಟದಕಟ್ಟು, ಯಶಸ್ವತಿ ಜೈನ್, ಪಿಡಿಒ ರಮೇಶ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿಯರು, ತಾಯಂದಿರು ಪಾಲ್ಗೊಂಡಿದ್ದರು.

Leave a Comment

error: Content is protected !!