HOSANAGARA | ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ತಾಲ್ಲೂಕಿನಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ನೂರಾರು ಎಕರೆ ಜಮೀನುಗಳು ನೀರು ಪಾಲಾಗಿದೆ. ಅಡಿಕೆ ತೋಟ ಕೊಚ್ಚಿಕೊಂಡು ಹೋಗಿದ್ದು ಅಲ್ಲಲ್ಲಿ ಧರೆ ಕುಸಿದಿದೆ. ಕಾರಕ್ಕಿ ಗ್ರಾಮದಲ್ಲಿ ಚೆಕ್ಡ್ಯಾಂ ಒಡೆದಿದೆ. ಸಾಕಷ್ಟು ಮನೆಗಳು ಕುಸಿದಿದೆ. ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಯಾದ ಬಗ್ಗೆ ವರದಿ ಜಿಲ್ಲಾಧಿಕಾರಿಗಳ ಗಮನಕ್ಕೆ ಹೋಗಿದ್ದು ಇದರ ಪರಿಣಾಮ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ಅನಾಹುತವಾದ ಮೈತಳ್ಳಿ, ಸಾವಂತೂರು, ಹುಲಿಗಾರು, ಲಿಂಬೆಸರ ಇತ್ಯಾದಿ ಸ್ಥಳಗಳಿಗೆ ಭೇಟಿ ಮಾಡುವುದರ ಜೊತೆಗೆ ಸರ್ಕಾರದಿಂದ ನೆರವು ಕೊಡಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಗ್ರಾಮ ಆಡಳಿತಾಧಿಕಾರಿ ನವೀನ್ ಹಾಗೂ ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಭೇಟಿ ನೀಡಿದಾದ ಅಲ್ಲಿನ ಪಿಡಿಒ, ಅಧ್ಯಕ್ಷರು, ಸದಸ್ಯರುಗಳು ಜೊತೆಗಿದ್ದರು.
ಸಿಂಗಪುರದಲ್ಲಿ ಮನೆ ಕುಸಿತ
HOSANAGARA | ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ರಾಮಚಂದ್ರಪುರ ಗ್ರಾಮದ ಸಿಂಗಪುರ ಗ್ರಾಮದ ಭಾರತೀ ಕೋಂ ಅಣ್ಣಪ್ಪನವರ ಮನೆ ಕುಸಿತವಾಗಿದ್ದು ಗ್ರಾಮ ಪಂಚಾಯತಿಯ ಅಧ್ಯಕ್ಷ ಕಪಿಲ, ಫೈನಾನ್ಸ್ ಮಾಲೀಕ ಸುಬ್ರಹ್ಮಣ್ಯಯವರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತ ವಲಯಗಳಿಗೆ ಡಿವೈಎಸ್ಪಿ ಭೇಟಿ, ಪರಿಶೀಲನೆ
HOSANAGARA | ತಾಲ್ಲೂಕಿನಲ್ಲಿ ರಾ.ಹೆ. 66 ರಾಣೆಬೆನ್ನೂರು-ಬೈಂದೂರು ರಸ್ತೆ ಹಾಗೂ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದ್ದು ಆದರೆ ಕಲ್ಲುಹಳ್ಳ ಸೇತುವೆಯ ತಡೆಗೋಡೆ ಭಾರೀ ಮಳೆಗೆ ಕುಸಿತ ಕಂಡ ಘಟನೆಗಳು ನಡೆದಿದ್ದು ಅದೇ ರೀತಿ ಅರಳಿಕೊಪ್ಪ ಸೇತುವೆಯ ತಡೆಗೋಡೆ ನೀರಿಗೆ ಬಿದ್ದಿದ್ದು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನಿಸುತ್ತಿರುವ ಕಾರಣ ತೀರ್ಥಹಳ್ಳಿಯ ಡಿವೈಎಸ್ಪಿ ಗಜಾನನ ಸುತಾರ ಹಾಗೂ ಹೊಸನಗರ ಸಬ್ ಇನ್ಸ್ಪೆಕ್ಟರ್ ಕೆ.ವೈ ಶಿವಾನಂದ್ ಸಿಬ್ಬಂದಿ ಗಂಗಪ್ಪ, ಜಗದೀಶ್ರವರು ಅಪಾಯದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.