ನೂತನ ಪಿಂಚಣಿ ಯೋಜನೆಯಿಂದ ನೌಕರರಿಗೆ ನಷ್ಟ ; ಕೆ.ಕೆ.ಮಂಜುನಾಥ್

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ : ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಪಕ್ಷಗಳು ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯಿಂದಾಗಿ ಸರ್ಕಾರಿ ನೌಕರರು ನಿವೃತ್ತಿ ಬಳಿಕ ಭಿಕ್ಷಾಟನೆ ಮಾಡಿ ಜೀವನ ಸಾಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಚುನಾವಣೆಯ ಪದವೀಧರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಹೇಳಿದರು.

ಅವರು ಇಲ್ಲಿನ ಗಾಂಧಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಅರಿವು ಇಲ್ಲದವರೇ ಪ್ರತಿ ಬಾರಿ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಶಿಕ್ಷಕರೇ ಆಯ್ಕೆಯಾಗಲಿದ್ದಾರೆ. ಈ ಮೂಲಕ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಸಮಸ್ಯೆಗಳು, ಆಗಬೇಕಿರುವ ಕಾರ್ಯಗಳ ಧ್ವನಿಯಾಗಿ ತಾವು ಕೆಲಸ ಮಾಡಲು ಅವಕಾಶ ದೊರೆಯಲಿದೆ ಎಂದರು.

ಈ ಹಿಂದೆ ಆಯ್ಕೆಗೊಂಡ ಅಭ್ಯರ್ಥಿಗಳಿಂದ ಮತದಾರರು ಭ್ರಮನಿರಸನಗೊಂಡಿದ್ದರು. ಜನಪರ ಕಾಳಜಿಯೊಂದಿಗೆ ಕೆಲಸ ಮಾಡುವುದು ಬಿಟ್ಟು ಜನರ ಮನರಂಜನೆ ಮಾಡಲು ಹೊರಟಿರುವಂತೆ ಭಾಸವಾಗುತ್ತಿತ್ತು. ಇದನ್ನು ನೋಡಿ ಬೇಸತ್ತಿರುವ ಮತದಾರರ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲು ಈಗ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಜಿಗೆ ಪದವೀಧರರ ಪರ ಕೆಲಸ ಮಾಡಿರುವ ನೆನಪು ಇದೆಯೇ?
ಸರ್ಜಿಯವರು ಡಾಕ್ಟರ್ ಕೆಲಸ ಮಾಡುವುದು ಬಿಟ್ಟು ಚುನಾವಣೆಯಲ್ಲಿ ನಿಂತು ಸಮಾಜ ಸೇವೆ ಮಾಡಲು ಹೋರಾಟಿದ್ದಾರೆ. ಇವರು ಶಿಕ್ಷಕರ ಪರವಾಗಲಿ ಪದವೀಧರರ ಪರವಾಗಿ ಯಾವತ್ತಾದರೂ ಕೆಲಸ ಮಾಡಿರುವ ನೆನಪಿದೆಯೇ? ಎಂದು ಅವರ ಆತ್ಮಕ್ಕೆ ಅವರೇ ಕೇಳಿಕೊಳ್ಳಬೇಕು. ಯಾರ ಒತ್ತಾಯಕ್ಕೂ ವಿಧಾನಪರಿಷತ್ ಚುನಾವಣೆಗೆ ನಿಲ್ಲುವುದಲ್ಲ ಅದೇ ಆಯನೂರು ಮಂಜುನಾಥ್‌ರವರು ನಾಲ್ಕು ದಶಕಗಳ ಕಾಲ ಹೋರಾಟದಿಂದಲೇ ಬಂದವರು ಜನರು ಮತದಾರರು ಅಂತವರನ್ನು ಆಯ್ಕೆ ಮಾಡಿದರೆ ಮುಂದೆ ಮತದಾರರ ಭವಿಷ್ಯ ಉಜ್ವಾಲವಾಗಿರುತ್ತದೆ. ಬಿಜೆಪಿಯವರು ಕೆಲಸದ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಿದರು. ಕಾರ್ಮಿಕರು ಇವರಿಗೆ ಹೇಗೆ ಓಟು ಹಾಕುತ್ತಾರೆ ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರ ಜನಪರ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿಗಳ ಅನುಷ್ಠಾನದಿಂದ ಅನುಕೂಲವಾಗಿದೆ.
ವಿಧಾನಸಭೆಯಲ್ಲಿ ಮುಖ್ಯವಾದ ಬಿಲ್ ಪಾಸ್ ಮಾಡಬೇಕಾದರೆ ಪರಿಷತ್‌ನಲ್ಲಿ ನಮಗೆ ಬೆಂಬಲದ ಮತಗಳು ಬೇಕು. ಆದ್ದರಿಂದ ವಿದಾನ ಪರಿಷತ್‌ಗೆ ಹೆಚ್ಚಿನ ಸದಸ್ಯರನ್ನು ಕಳುಹಿಸುವ ಉದ್ದೇಶದಿಂದ ನನ್ನನ್ನೂ ಹಾಗೂ ಆಯನೂರು ಮಂಜುನಾಥ್ ಗೆಲವು ಮುಖ್ಯವಾಗಿದ್ದು ಮತದಾರರು ನಮಗೆ ಮತ ಹಾಕುತ್ತಾರೆಂಬ ನಂಬಿಕೆಯಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಗೆಲ್ಲಿಸಿ ಕಳುಹಿಸಿ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಸುಮಾ ಸುಬ್ರಮಣ್ಯ, ಶ್ರೀನಿವಾಸ ಕಾಮತ್, ರಾಮಚಂದ್ರ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಅಶ್ವಿನಿಕುಮಾರ್, ಪ್ರವೀಣ್ ಬೃಂದಾವನ, ಜಯನಗರ ಗುರು, ಎಂ.ಪಿ ಸುರೇಶ್, ನೇತ್ರಾ ಸುಬ್ರಾಯಭಟ್, ಮತ್ತಿತರರು ಇದ್ದರು.

Leave a Comment

error: Content is protected !!