ವಲಯ ಮಟ್ಟದ ಕ್ರೀಡಾಕೂಟ – ವ್ಯಾಸ ಮಹರ್ಷಿ ಗುರುಕುಲಕ್ಕೆ ಸಮಗ್ರ ಪ್ರಶಸ್ತಿ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ತಾಲ್ಲೂಕಿನ ಮಾರುತಿಪುರದಲ್ಲಿ ಶುಕ್ರವಾರ ನಡೆದ 2024-25ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಮಾರುತಿಪುರ ಹಾಗೂ ಆಲಗೇರಿಮಂಡ್ರಿ ಕ್ಲಸ್ಟರ್ ಗಳ ಕ್ರೀಡಾಕೂಟದಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮಕ್ಕಳು ಕ್ಲಸ್ಟರ್ ಮಟ್ಟದಲ್ಲಿ ಸತತ 4ನೇ ಬಾರಿ ಛಾಂಪಿಯನ್ ಆಗುವ ಮೂಲಕ ಸಮಗ್ರ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡದ್ದಾರೆ.

ವಯಕ್ತಿಕ ವಿಭಾಗದಲ್ಲಿ :

ಚುಕ್ಕಿ ಎಮ್. ಬ್ಯಾಣದ
100 ಮೀಟರ್ ಓಟ ಪ್ರಥಮ.
400 ಮೀಟರ್ ಓಟ ಪ್ರಥಮ.
ಉದ್ದ ಜಿಗಿತ ಪ್ರಥಮ.

ಪ್ರೇಕ್ಷ :
200 ಮೀಟರ್ ಓಟ ಪ್ರಥಮ.
ಎತ್ತರ ಜಿಗಿತ ದ್ವಿತೀಯ.

ರಿಷಿ :
600 ಮೀಟರ್ ಓಟ ಪ್ರಥಮ.
100 ಮೀಟರ್ ಓಟ ತೃತೀಯ.
ಸುದೀಕ್ಷ :
600 ಮೀಟರ್ ಓಟ ಪ್ರಥಮ.
ಪವಿತ್ರ :
600 ಮೀಟರ್ ಓಟ ತೃತೀಯ.
ಅಮೋಘ :
400 ಮೀಟರ್ ಓಟ ದ್ವಿತೀಯ.
ರಿಲೆ : ಚುಕ್ಕಿ ಎಂ. ಬ್ಯಾಣದ ತಂಡ ಪ್ರಥಮ.
ಬಾಲಕಿಯರ ಖೋಖೋ ದ್ವಿತೀಯ.
ಬಾಲಕರ ಖೋಖೋ ಪ್ರಥಮ.

ಬಾಲಕರ ಕಬ್ಬಡಿ ಫೈನಲ್ ಪಂದ್ಯ ಸೋಮವಾರ ನಡೆಯಲಿದ್ದು, ಶ್ರೀ ವ್ಯಾಸ ಮಹರ್ಷಿ ಗುರುಕುಲ ಮಾರುತಿಪುರ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ಎದುರಿಸಲಿದ್ದಾರೆ.

ಒಟ್ಟಾರೆ ಸಮಗ್ರ ನಿರ್ವಹಣೆ ತೋರಿದ ಶ್ರೀ ವ್ಯಾಸ ಮಹರ್ಷಿ ಗುರುಕುಲ ಸತತ ನಾಲ್ಕನೇ ಬಾರಿ ಸಮಗ್ರ ಪ್ರಶಸ್ತಿ ಪಡೆಯಿತು. ವಿಜೇತ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Leave a Comment

error: Content is protected !!