BSNL ನೆಟ್‌ವರ್ಕ್ ಸಮಸ್ಯೆ, ಮೇ 27 ರಂದು ಟವರ್ ಏರಿ ಪ್ರತಿಭಟನೆಗೆ ಮುಂದಾದ ವಕೀಲ ಮೋಹನ್ ಶೆಟ್ಟಿ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ : ತಾಲ್ಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಠಕ್ಕೆ ಪರಿಹಾರ ದಶಕಗಳಿಂದ ಮರಿಚಿಕೆಯಾಗಿಯೇ ಉಳಿದಿದೆ ತಾಲೂಕಿನ ಕುಗ್ರಾಮಗಳಾದ ಮತ್ತಿಮನೆ, ಬಸವಾಪುರ, ಬೇಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ್, ಗುಬ್ಬಿಗ, ಗುಡೋಡಿ, ಹಳೆತೋಟ, ಹೊಳಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ್, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದ ಕೊಪ್ಪ, ಉಳ್ತಿಗದ ಗ್ರಾಮೀಣ ಭಾಗದಲ್ಲಿ ಬಿಸ್ಎಸ್‌ಎನ್‌ಎಲ್ ನೆಟ್‌ವರ್ಕ್ ಅತ್ಯಂತ ಕಳಪೆಯಾಗಿದೆ ಈ ಭಾಗದ ಗ್ರಾಹಕರನ್ನು ಹಲವು ದಶಕಗಳಿಂದ ಸಂಸ್ಥೆ ವಂಚಿಸುತ್ತಾ ಬಂದಿದೆ ತಾಲೂಕಿನ ಶೇ.40ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮರ್ಪಕವಾಗಿಲ್ಲ ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ ಈ ಬಗ್ಗೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ, ಈ ಕಾರಣದಿಂದ ಮೇ 27 ಸೋಮವಾರದಂದು ಮತ್ತಿಮನೆ ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟಿಸಲಾಗುವುದು ಇಲಾಖೆ ಪರಿಹಾರ ಸೂಚಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಪ್ರತಿಭಟನೆಯಲ್ಲಿ ಏನಾದರು ಅನಾಹತ ನಡೆದರೆ ಇದಕ್ಕೆ ಬಿಎಸ್ಎನ್ಎಲ್ ಇಲಾಖೆ ಸಂಪೂರ್ಣ ಹೊಣೆ ಹೊರ ಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ನ್ಯಾಯವಾದಿ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಹೊಸನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ್ತಿಮನೆ, ಸಂಪೆಕಟ್ಟೆ, ನಿಟ್ಟೂರು, ನಗರ, ಮಾಸ್ತಿಕಟ್ಟೆ, ಯಡೂರು ಭಾಗದಲ್ಲಿ ಸಾವಿರಾರು ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು 250 ರಿಂದ 499 ರ ತನಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ ಆದರೆ ಇಲಾಖೆ ನೆಟ್‌ವರ್ಕ್ ಸರಿಯಾಗಿ ಇಲ್ಲದೆ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಸಾರ್ವಜನಿಕ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರಿ ಕಛೇರಿಯಲ್ಲಿ ಸರ್ವರ್ ಇಲ್ಲದೆ ಪ್ರತಿ ನಿತ್ಯ ಸಾರ್ವಜನಿಕರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ವಿದ್ಯುತ್ ಕಡಿತ ಸಂದರ್ಭದಲ್ಲಿ ನೀಡುವ ಡೀಸೆಲ್ ಸಹ ಇಲಾಖೆ ಸಿಬ್ಬಂದಿಗಳು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ನಡೆಸಲು ತೀರ್ಮಾನಿರುವುದಾಗಿ ತಿಳಿಸಿದರು.

Leave a Comment

error: Content is protected !!