‘ತಾಯಿ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ

Written by Malnadtimes.in

Updated on:

WhatsApp Group Join Now
Telegram Group Join Now

HOSANAGARA | ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಬ್ಬ ನಾಗರಿಕ ಕೂಡ ತನ್ನ ತಾಯಿ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸಿ, ಬೆಳೆಸುವ ಕಾರ್ಯ ಮಾಡಬೇಕು ಎಂದು ಕೋಡೂರು ಗ್ರಾಪಂ ಪಿಡಿಒ ನಾಗರಾಜ್ ಹೇಳಿದರು.

ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲು ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವೇಳೆ ಗ್ರಾಪಂ ಸದಸ್ಯರು ತಮ್ಮ ತಾಯಿಯ ಹೆಸರಿನಲ್ಲಿ ಒಂದೊಂದು ಗಿಡಗಳನ್ನು ನೆಟ್ಟರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಉಮೇಶ್ ಕೆ.ಎಸ್., ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಜಯಪ್ರಕಾಶ, ಯೋಗೇಂದ್ರಪ್ಪ, ಶೇಖರಪ್ಪ, ಮಂಜಪ್ಪ, ಅನ್ನಪೂರ್ಣ, ಶ್ಯಾಮಲಾ, ಸವಿತಾ, ಗ್ರಾಪಂ ಸಿಬ್ಬಂದಿಗಳು, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಗಿಡ ನೆಡಲು ತೋರುವ ಉತ್ಸಾಹ ಪೋಷಣೆಗೂ ಇರಲಿ :

HOSANAGARA | ಅರಣ್ಯ ಬೆಳೆಸುವುದು ಸರ್ಕಾರ, ಇಲಾಖೆಗಳ ಕೆಲಸ ಎಂಬ ತಪ್ಪು ಗ್ರಹಿಕೆಗೆ ಜನರು ಒಳಗಾಗಬಾರದು. ಇದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್ ತಿಳಿಸಿದರು.

ತಾಲೂಕಿನ ಖೈರಗುಂದ (ಮಾಸ್ತಿಕಟ್ಟೆ) ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸನಗರ ತಾಲೂಕು ಖೈರಗುಂದ ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ದೊರೆಯಿತು.

ಅರಣ್ಯ ನಾಶವನ್ನು ತಡೆಯುವುದು ಇಂದು ಬಹಳ ಕಷ್ಟಕರವಾಗಿದೆ ಅದರೂ ಈ ವರ್ಷ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ದೇಶಾದ್ಯಂತ ಅರಣ್ಯೀಕರಣ ಕಾರ‍್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಇದರ ಆಶಯ. ಪಂಚಾಯತ್‌ರಾಜ್ ಇಲಾಖೆಯ ಮಾರ್ಗಸೂಚಿಯಂತೆ ತಾಲೂಕಿನಲ್ಲಿ ಇಂದು ಎಲ್ಲೆಡೆ ಗಿಡ ನೆಡಲು ಕಾರ‍್ಯಕ್ರಮ ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ಪ್ರತಿಯೊಬ್ಬರೂ ಪ್ರತಿವರ್ಷ ಕನಿಷ್ಟ ಒಂದು ಗಿಡವನ್ನಾದರೂ ನೆಟ್ಟು ಪೋಷಿಸುವ ಅಗತ್ಯವಿದೆ ಎಂದರು.

ಈ ವೇಳೆ ಗ್ರಾ.ಪಂ.ಅಧ್ಯಕ್ಷ ಕೆ.ಬಿ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ವೀಣಾ, ಪದ್ಮ,ಪವಿತ್ರ ಜಿ ಸಂಗಮನವರ್, ಜಿ.ಪ್ರಕಾಶ್, ಎ.ಇಸ್ಮಾಯಿಲ್, ಪಿಡಿಓ ಸಂತೋಷ್, ಅರಣ್ಯ ರಕ್ಷಕ ದಿವಾಕರ್ ಮತ್ತಿತರರು ಇದ್ದರು.

ಮಕ್ಕಳಿಗೆ ತಾಯಿ ಎಷ್ಟು ಮುಖ್ಯವೋ ಮನುಷ್ಯರಿಗೆ ಗಿಡ-ಮರಗಳು ಅಷ್ಟೇ ಮುಖ್ಯ :

HOSANAGARA | ಮಕ್ಕಳಿಗೆ ತಾಯಿ ಎಷ್ಟು ಮುಖ್ಯವೂ ಮನುಷ್ಯರಿಗೆ ಗಿಡ-ಮರಗಳು ಅಷ್ಟೆ ಮುಖ್ಯವಾಗಿದೆ ಗಿಡ-ಮರಗಳನ್ನು ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಪ್ರತಿಯೊಬ್ಬರು ವರ್ಷಕ್ಕೆ ಒಂದೊಂದು ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕೆಂದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಎಸ್‌ ಹೇಳಿದರು.

ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಂಡಿದ್ದ ‘ತಾಯಿಯ ಹೆಸರಿನಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸನಗರ ತಾಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಕಛೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಚಾಲನೆ ದೊರೆಯಿತು.

ಪ್ರಕೃತಿ ವಿಕೋಪಗಳಿಗೆ ಅರಣ್ಯ ನಾಶ ಮುಖ್ಯ ಕಾರಣವಾಗಿದೆ. ಈ ವರ್ಷ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ದೇಶಾದ್ಯಂತ ಅರಣ್ಯೀಕರಣ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಇದರ ಆಶಯ. ಎಂದರು.

ಈ ಕಾರ್ಯಕ್ರಮದಲ್ಲಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಕಾರ್ಯದರ್ಶಿ ಯೋಗೇಶ, ಸಿಬ್ಬಂದಿ ಧರ್ಮಪ್ಪ, ಪ್ರಬಾರ ಅಧ್ಯಕ್ಷರಾದ ಸುಧಾ, ಮಾಜಿ ಅಧ್ಯಕ್ಷರಾದ ಓಂಕೇಶ ಗೌಡ, ತೋಟಗಾರಿಕೆ ಇಲಾಖೆಯ ಕರಿಬಸಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!