5 ವರ್ಷ ಕಳೆದರೂ ಪೂರ್ಣವಾಗದ ಹೊಟ್ಯಾಳಪುರ ಸಮುದಾಯ ಭವನ ಕಾಮಗಾರಿ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಹೊಟ್ಯಾಳಪುರದಲ್ಲಿ ಹೊಸನಗರ ತಾಲ್ಲೂಕು ಪಂಚಾಯ್ತಿ ಅನುದಾನದಡಿಯಲ್ಲಿ ನಿರ್ಮಿಸಲಾದ ಸಮುದಾಯ ಭವನದ ಕಾಮಗಾರಿ ಆರಂಭಗೊಂಡು ಐದು ವರ್ಷಗಳಾದರೂ ಕೂಡಾ ಅಪೂರ್ಣವಾಗಿಯೇ ಉಳಿದಿದೆ ಎಂದು ಹೊಟ್ಯಾಳಪುರ ಸ್ವಸಹಾಯ ಸಂಘದ ಮಹಿಳೆಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಟ್ಯಾಳಪುರ ಮಜರೆ ಗ್ರಾಮದಲ್ಲಿ ಕಳೆದ ಐದು ವರ್ಷದ ಹಿಂದೆ ಆರಂಭಿಸಲಾದ ಸಮುದಾಯ ನಿರ್ಮಾಣ ಕಾಮಗಾರಿಗೆ 2019-20ನೇ ಸಾಲಿನಲ್ಲಿ ಅರಸಾಳು ಗ್ರಾಮ ಪಂಚಾಯಿತ್ 14ನೇ ಹಣಕಾಸು ಯೋಜನೆಯಡಿಯಲ್ಲಿ 85 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು ನಂತರದಲ್ಲಿ ತಾಲ್ಲೂಕು ಪಂಚಾಯ್ತಿ ವತಿಯಿಂದ ಸದರಿ ಕಾಮಗಾರಿಯ 2515 -00-102-0-62-2019-20 ಸಾಲಿನ ತಾಲ್ಲೂಕು ಪಂಚಾಯಿತ ವಲಯದ ಸಂಯುಕ್ತ ಅನುದಾನ ಯೋಜನೆಯಡಿ 1.00 ಲಕ್ಷ ರೂ. ಗಳಿಗೆ ಅನುಮೋದನೆ ಪಡೆಯಲಾಗಿ ತಾಂತ್ರಿಕ ಮಂಜೂರಾತಿ ನೀಡಲಾಗಿದ್ದರೂ ಕೂಡಾ ಕಾಮಗಾರಿ ಪೂರ್ಣವಾಗದೇ ಬಿಳಿ ಆನೆಯಂತಾಗಿದೆ ಎಂದು ಸಾರ್ವಜನಿಕರು ಮತ್ತು ಸ್ವಸಹಾಯ ಸಂಘದ ಮಹಿಳೆಯರು ಆರೋಪಿಸಿದ್ದಾರೆ.

ತಿಂಗಳ ಮೊದಲ ವಾರದಲ್ಲಿ ಮಹಿಳಾ ಸಮಾಜ ಮತ್ತು ಸ್ವಸಹಾಯ ಸಂಘದವರು ಮಳೆಗಾಲ, ಚಳಿಗಾಲ ಎನ್ನದೇ ಅರ್ಧಕ್ಕೆ ನಿಂತಿರುವ ಸಮುದಾಯ ಭವನದಲ್ಲಿ ಛಾಪೆ ಹಾಕಿಕೊಂಡು ಸಭೆ ಮಾಡುವಂತಾಗಿದೆ. ಈ ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಂತಾಗಿದೆ ಎಂದು ತಿಳಿದಂತಾಗಿದೆ. ಈ ಬಗ್ಗೆ ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಕಛೇರಿಗೆ ಮಾಹಿತಿ ಹಕ್ಕಿನಡಿ ಕೇಳಲಾದ ದಾಖಲೆಗಳಿಂದ ಈ ಸಮುದಾಯ ಭವನಕ್ಕೆ ವಿನಿಯೋಗಿಸಿಲಾದ ಮಾಹಿತಿ ಬಹಿರಂಗಗೊಂಡಿದ್ದು ಇನ್ನಾದರೂ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತ್ ಮತ್ತು ಗ್ರಾಮಾಡಳಿತ ಗಮನಹರಿಸಿ ಐದು ವರ್ಷದಿಂದ ಅಪೂರ್ಣವಾಗಿರುವ ಕಟ್ಟಡ ಕಾಮಗಾರಿಗೆ ಮುಕ್ತಿ ದೊರೆಯುವುದೇ ಕಾದು ನೋಡಬೇಕಾಗಿದೆ.

Leave a Comment

error: Content is protected !!