Ripponpete | ರೈತರು ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಬಳಕೆಯಿಂದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದು ಕ್ಯಾಂಪ್ಕೊ (Campco) ನಿಯಮಿತ ಅಧ್ಯಕ್ಷ ಎ.ಕಿಶೋರ್‌ಕುಮಾರ್ ಕೊಡ್ಗಿ ಕರೆ ನೀಡಿದರು.
ಮಂಗಳೂರಿನ ಕ್ಯಾಂಪ್ಕೊ ಮತ್ತು ಜೆ.ಕೆ. ಟ್ರೇಡರ್ಸ್ ರಿಪ್ಪನ್‌ಪೇಟೆ ಇವರ ಸಹಯೋಗದಲ್ಲಿ ಇಂದು ರಿಪ್ಪನ್‌ಪೇಟೆಯ ಹಿಂದೂ ಮಹಾಸಭಾ ಸಭಾಂಗಣದಲ್ಲಿ ಕ್ಯಾಂಪ್ಕೊ ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳ ಗೊಬ್ಬರ ಬಿಡುಗಡೆ ಸಮಾರಂಭ ಮತ್ತು ಸದಸ್ಯ ಬೆಳೆಗಾರರ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಸಹಕಾರ ಸಂಘದ ಅದ್ಯಕ್ಷ ಪರಮೇಶ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೊ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ಚನ್ನಗಿರಿ ತುಮ್‌ಕೋಸ್ ಅಧ್ಯಕ್ಷ ಆರ್.ಎಂ.ರವಿ, ಶಿಕಾರಿಪುರ ಶಾಮ್‌ಕೋಸ್ ಅಧ್ಯಕ್ಷ ಬಿ.ಚಂದ್ರಪ್ಪ ಹಾಗೂ ಕ್ಯಾಂಪ್ಕೊ ನಿರ್ದೇಶಕ ಹೆಚ್.ಎಂ.ರಾಘವೇಂದ್ರ ಭಾಗವಹಿಸಿದ್ದರು.