ಸಾಮಾಜಿಕ ಸೇವೆಯಲ್ಲಿ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಮುಂಚೂಣಿ ; ಹೆಚ್.ಎಲ್. ರವಿ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಸಾಮಾಜಿಕ ಸೇವೆಯಲ್ಲಿ ರೋಟರಿ ಕ್ಲಬ್ ಮುಂದೆ ಇದ್ದು ಸದಸ್ಯರ ನಿಸ್ವಾರ್ಥ ಸೇವೆಯು ಸಮಾಜದ ಏಳಿಗ್ಗೆ ಮೀಸಲಾಗಿಡಬೇಕು ಎಂದು ಶಿವಮೊಗ್ಗ ರೋಟರಿ ಕ್ಲಬ್ ಹೆಚ್.ಎಲ್.ರವಿ ಹೇಳಿ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಮಾಜಮುಖಿ ಸೇವೆಯನ್ನು ಪ್ರಶಂಸಿದರು.

ಇಲ್ಲಿನ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ ಸಮಾಜ ಸೇವೆ ಪ್ರತಿಯೊಬ್ಬರ ಆದ್ಯತೆಯಾಗಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ನಾವುಗಳು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಹಾಗೂ ಸಮಾಜದ ಅಭಿವೃದ್ದಿ ಪ್ರಮಾಣಿಕ ಕಳಕಳಿ ಎಲ್ಲರಲ್ಲಿ ಇದ್ದಾಗ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ಸಮಾಜದಲ್ಲಿ ನ್ಯಾಯ ದೊರೆಯಲು ಸಾಧ್ಯ ಎಂದರು.

ಲೆಫ್ಟಿನೆಂಟ್ ಜೊನಲ್ ರಾಧಾಕೃಷ್ಣ ಜೆ.ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗೆ ಹಿಚ್ಚಿನ ಆಧ್ಯತೆ ನೀಡಿದ್ದು ಈಗಾಗಲೇ ಪ್ರಪಂಚದಾದ್ಯಂತ ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಿ ಅದರಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಶಿಕ್ಷಣ ಕೃಷಿ ಕ್ಷೇತ್ರದಲ್ಲಿ ಸೇವೆಯನ್ನು ಮುಂದುವರಿಸುವುದರ ಸಲುವಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಆ ಯೋಜನೆಗಳ ಅನ್ವಯ ಈ ವರ್ಷ ಪರಿಸರ, ಆರೋಗ್ಯ ಸುರಕ್ಷಾ, ಸಮುದಾಯಗಳ ಆರ್ಥಿಕ ಅಭಿವೃದ್ದಿ, ಶುದ್ದ ನೀರಿನ ಘಟಕ, ಪ್ರಾಥಮಿಕ ಶಿಕ್ಷಣ ಹಾಗೂ ಸಾಕ್ಷರತೆ, ಗರ್ಭೀಣಿಯ ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಸುರಕ್ಷತೆಯ ಕಾರ್ಯಕ್ರಮದ ಬಗ್ಗೆ ಆಧ್ಯತೆಯನ್ನು ನೀಡಲಾಗಿದೆ ಎಂದರು.

ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ದೇವದಾಸ್ ಆಚಾರ್ಯ ವಹಿಸಿದ್ದರು. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮದಲ್ಲಿನ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಹಾಗೂ ಪದವಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸಮರ್ಪಿಸಲಾಯಿತು.

ರೋಟರಿ 3182 ರ ಜಿಲ್ಲಾ ಅಸಿಸ್ಟೆಂಡ್ ಗವರ್ನರ್ ಪ್ರೋ. ಎಚ್.ಎಂ.ಸುರೇಶ್, ನೂತನ ಅಧ್ಯಕ್ಷ ರಾಮಚಂದ್ರ, ರೋಟರಿ ಕ್ಲಬ್ ಭಾಗವಹಿಸಿ ಮಾತನಾಡಿದರು.

ಸಂಧ್ಯಾ ಗಣೇಶ ಎನ್.ಕಾಮತ್ ಪ್ರಾರ್ಥಿಸಿದರು‌ ರೋಟರಿಯನ್ ಎಂ.ಬಿ.ಲಕ್ಷ್ಮಣ ಗೌಡ ಸ್ವಾಗತಿಸಿದರು. ಎಂ.ಬಿ.ಮಂಜುನಾಥ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಬಾಸ್ಟಿನ್ ಮ್ಯಾಥ್ಯೂಸ್ ವಂದಿಸಿದರು.

Leave a Comment

error: Content is protected !!