ಶ್ರೀ ದುರ್ಗಾಂಬಾ ಬಸ್ ಮಾಲೀಕರಿಗೆ, ನೌಕರರಿಗೆ ಗ್ರಾಮಸ್ಥರ ಶ್ಲಾಘನೆ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ತಾಲ್ಲೂಕಿನಿಂದ ನಗರ, ನಿಟ್ಟೂರು, ಕೊಲ್ಲೂರು ಮಾರ್ಗವಾಗಿ ಸಾಕಷ್ಟು ಬಸ್‌ಗಳ ಓಡಾಟ ನಡೆಸುತ್ತಿದ್ದರೂ ಕೆಲವು ಬಸ್‌ಗಳು ಕೆ.ಬಿ ಸರ್ಕಲ್ ಬಳಿ ಮುಖ ಹಾಕುವುದಿಲ್ಲ ಆಡಗೋಡಿಯಿಂದ ಕೆ.ಬಿ.ಸರ್ಕಲ್ ಜಾಲದ ಕಡೆಗೆ ಹೋಗಲು ಸುಮಾರು 8 ಕಿ.ಮೀ. ಒಳ ಪ್ರವೇಶ ಮಾಡಬೇಕಾಗುತ್ತದೆ. ಅದು ಅಲ್ಲದೇ ಹಸಿರುಮಕ್ಕಿಯಲ್ಲಿ ನೀರಿಲ್ಲದೇ ಈ ಭಾಗಗಳಲ್ಲಿ ಯಾವುದೇ ವಾಹನ ಸಂಚಾರವೂ ಇಲ್ಲವಾಗಿದೆ.

ಕಳೆದ 50 ದಿನಗಳಿಂದ ಹಸಿರುಮಕ್ಕಿಯಲ್ಲಿ ನೀರಿಲ್ಲದ ಕಾರಣ ಕೆ.ಬಿ.ಸರ್ಕಲ್, ಕೂಡಲಕೊಪ್ಪ ಹಾಗೂ ಜಾಲ ಗ್ರಾಮದ ಗ್ರಾಮಸ್ಥರು ಸಾಕಷ್ಟು ವಿದ್ಯಾರ್ಥಿಗಳು, ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಶ್ರೀ ದುರ್ಗಂಬಾ ಬಸ್ ಮಾಲೀಕರು ದಿನಕ್ಕೆ 4 ಬಸ್‌ಗಳನ್ನು ಹೋಗಿ, ಬರುವಂತೆ ಮಾಡಲಾಗಿದ್ದು ಈ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದಾರೆ. ಕೆಲವು ಬಸ್‌ಗಳು ಒಂದೆರಡು ಸಿಟಿನಲ್ಲಿ ಓಡಾಟ ನಡೆಸಿ ಡೀಸೆಲ್‌ಗೂ ಹಣವಾಗದಿದ್ದರೂ ಈ ಭಾಗದ ಸಾರ್ವಜನಿಕರಿಗೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಬಸ್ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದು ಈ ಹಿಂದೆ ಕೊರೋನ ಕಾಲದಲ್ಲಿಯೂ ಯಾವುದೇ ಹಣದ ಆಮೀಷಕ್ಕೆ ಬಲಿಯಾಗದೇ ಬಸ್ ಓಡಿಸುತ್ತಿದ್ದು ಈ ಭಾಗದ ಜನರು ಶ್ರೀ ದುರ್ಗಾಂಬಾ ಬಸ್ ಮಾಲೀಕರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಬಸ್ ಡ್ರೈವರ್, ಕಂಡಕ್ಟರ್ ಹಾಗೂ ತಪಾಸಣೆಗಾರರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!