ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ಮನವಿ

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: ಪ್ರಜ್ವಲ್ ರೇವಣ್ಣನವರ ಪ್ರಕರಣ ಮತ್ತು ಪೆನ್‌ಡ್ರೈವ್ ಬಿಡುಗಡೆ ಪ್ರಕರಣವನ್ನು ಸಿಬಿಐ ಅಥವಾ ಸುಪ್ರಿಂಕೋರ್ಟ್ ನ್ಯಾಯಧೀಶರಿಗೆ ವಹಿಸುವಂತೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರನ್ನು ಸಂಪುಟದಿಂದ ವಜಾಮಾಡುವಂತೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮತ್ತು ತಾಲ್ಲೂಕ ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್ ನೇತೃತ್ವದಲ್ಲಿ ರಾಜ್ಯಪಾಲರರಿಗೆ ಉಪತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಮನವಿ ಪತ್ರವನ್ನು ಸಲ್ಲಿಸಿ ಮಾಧ್ಯಮದವರೊಂದಿಗೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮತ್ತು ತಾಲ್ಲೂಕ ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್ ಮಾತನಾಡಿ, ಪ್ರಜ್ವಲ್ ರೇವಣ್ಣನವರ ಪ್ರಕರಣ ಮತ್ತು ಪೆನ್‌ಡ್ರೈವ್ ಬಿಡುಗಡೆ ಪ್ರಕರಣದ ಬಗ್ಗೆ ವ್ಯವಸ್ಥಿತವಾದ ಸಂಚು ನಡೆಸಿದ್ದು, ಇದರ ಬಗ್ಗೆ ತನಿಖೆಗೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾದಳವನ್ನು ರಚಿಸಿದ್ದು, ಈವರೆಗೂ ಮೇಲ್ಕಂಡ ಕೃತ್ಯಕ್ಕೆ ಸಂಬಂಧಪಟ್ಟವರನ್ನು ಬಂಧಿಸಿರುವುದಿಲ್ಲ ಹಾಗೂ ನಿಯಮಾನುಸಾರ ವಿಚಾರಣೆ ನಡೆಸುತ್ತಿಲ್ಲ. ತನಿಖೆಯ ಸಂಪೂರ್ಣ ಪ್ರಕ್ರಿಯೆಯು ರಾಜ್ಯ ಸರಕಾರದ ನಿರ್ದೇಶನದಂತೆ ನಡೆಸಲಾಗುತ್ತಿದೆ. ಇದರಿಂದ ಹಾಸನ ಜಿಲ್ಲೆಯ ಮಹಿಳಾ ಸಂತ್ರಸ್ಥರಿಗೆ ತೀವ್ರ ಅನ್ಯಾಯವಾಗಿದ್ದು, ಇದರ ಹಿಂದೆ ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರ ಕೈವಾಡ ಇರುವುದಾಗಿ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದು, ಇದರ ಪರಿಣಾಮ ದೇಶ-ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಸತ್ಯಾಸತ್ಯತೆ ಹೊರಬರಬೇಕಾದ ಅನಿವಾರ್ಯತೆ ಇರುವುದರಿಂದ ರಾಜ್ಯ ಸರ್ಕಾರ ಪ್ರಸ್ತುತ ರಚಿಸಿರುವ ವಿಶೇಷ ತನಿಖಾದಳವನ್ನು ರದ್ದುಪಡಿಸಿ ಇದರ ಸಂಪೂರ್ಣ ತನಿಖೆಯನ್ನು ಸಿಬಿಐಗೆ ಅಥವಾ ಸುಪ್ರಿಂಕೋರ್ಟ್ ನ್ಯಾಯಾಧೀಶರಿಂದ ತನಿಖೆ ವಹಿಸುವುದು ಅತ್ಯಗತ್ಯವಾಗಿದೆ.

ಪ್ರಜ್ವಲ್ ರೇವಣ್ಣ ತಪ್ಪುಮಾಡಿದ್ದು ಸಾಬೀತಾದಲ್ಲಿ ಜೆಡಿಎಸ್ ಪಕ್ಷದಿಂದ ಯಾವುದೇ ತಕರಾರು ಇರುವುದಿಲ್ಲ. ಆದರೆ ಅಮಾಯಕ ಹೆಣ್ಣು ಮಕ್ಕಳ ತೇಜೋವಧೆ ಮಾಡಿರುವುದು ಅಕ್ಷಮ್ಯ ಅಪರಾಧ. ಈ ದೇಶದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಮುತ್ಸದ್ದಿ ರಾಜಕಾರಣಿಯಾದ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಮುಳುಗಿಸಲು ಷಡ್ಯಂತರ ರೂಪಿಸಿರುವ ಪ್ರಕರಣದ ರೂವಾರಿ ರಾಜ್ಯದ ಉಪಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರರವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸುತ್ತೇವೆ ಹಾಗೂ ಇವರ ಅಡತಿಯಂತೆ ಪೆನ್‌ಡ್ರೈವ್ ಬಿಡುಗಡೆ ಮಾಡಿದವರನ್ನು ಈವರೆಗೂ ಬಂಧಿಸದೆ ಇರುವ ವಿಶೇಷ ತನಿಖಾದಳದ ಅಧಿಕಾರಿಗಳನ್ನು ತಕ್ಷಣ ಅಮಾನತುಪಡಿಸಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಹಾಲಿ ಸುಪ್ರಿಂಕೋರ್ಟ್ ನ್ಯಾಯಾಧೀಶರ ಮುಖಾಂತರ ನಡೆಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಘಟಕವು ರಾಜ್ಯಪಾಲರಿಗೆ ರಿಪ್ಪನ್‌ಪೇಟೆ ನಾಡಕಚೇರಿ ಉಪತಹಶೀಲ್ದಾರ್ ಮುಖಾಂತರ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಈ ಮನವಿಯನ್ನು ರಾಜ್ಯಪಾಲರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡುವಂತೆ ಕೋರಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರು ಜಿ.ಎಸ್.ವರದರಾಜ್, ಕೆರೆಹಳ್ಳಿ ಹೋಬಳಿ ಜೆಡಿಎಸ್‌ ಅಧ್ಯಕ್ಷ ರಾಜು ದೂನ, ಜೆಡಿಎಸ್‌ ಜಿಲ್ಲಾ ಮುಖಂಡರು.ಸಿ.ಈರಣ್ಣ ಕಲ್ಲೂರು, ಹರೀಶ್‌ ಬಾಳೂರು, ವಿಶ್ವನಾಥ್, ರಾಜೇಂದ್ರ, ರಾಮಚಂದ್ರ ಹಾಲುಗುಡ್ಡೆ ಇನ್ನಿತರರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Leave a Comment

error: Content is protected !!