ಪಿಯುಸಿ ಪಠ್ಯಪುಸ್ತಕ ವಿಳಂಬ, ವಿದ್ಯಾರ್ಥಿಗಳ ಪರದಾಟ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಕಾಲೇಜ್‌ಗಳು ಆರಂಭಗೊಂಡು ಪಾಠ ಪ್ರವಚನ ಪ್ರಾರಂಭಿಸಲಾಗಿದ್ದರೂ ಕೂಡಾ ಪಿಯುಸಿ ಪಠ್ಯಪುಸ್ತಕ ಬಾರದೇ ಇದ್ದು ಖಾಸಗಿ ಬುಕ್ ಸ್ಟಾಲ್‌ನಲ್ಲಿ ಪಠ್ಯಪುಸ್ತಕ ಸಿಗದೆ ವಿದ್ಯಾರ್ಥಿ ಪೋಷಕರು ಪರದಾಡುವಂತಾಗಿದೆ ಎಂದು ವಿದ್ಯಾರ್ಥಿ ಪೋಷಕ ಕೆ.ಎಲ್.ಈಶ್ವರ ಆರೋಪಿಸಿದ್ದಾರೆ.

ರಾಜ್ಯಾದಾದ್ಯಂತ 10ನೇ ತರಗತಿಯ ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣಾರಾಗಿದ್ದು ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಎಲ್ಲಾ ಮಕ್ಕಳು ಉತ್ಸಾಹದಲ್ಲಿ ಕಾಲೇಜ್‌ಗಳಿಗೆ ಪ್ರವೇಶ ಪಡೆದಿದ್ದು ಪಠ್ಯ ಪುಸ್ತಕ ಸಮಯಕ್ಕೆ ಸರಿಯಾಗಿ ಸರಬರಾಜು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಖಾಸಗಿ ಬುಕ್‌ಸ್ಟಾಲ್‌ಗಳಿಗೂ ವಿದ್ಯಾರ್ಥಿ ಪೋಷಕರು ಪಠ್ಯಪುಸ್ತಕಕ್ಕಾಗಿ ಅಲೆಯುವಂತಾಗಿದೆ.

ಸರ್ಕಾರ ಇನ್ನಾದರೂ ತಕ್ಷಣ ಪಿಯುಸಿ ಪಠ್ಯಪುಸ್ತಕವನ್ನು ಸರಬರಾಜು ಮಾಡುವ ಮೂಲಕ ವಿದ್ಯಾರ್ಥಿ ಪೋಷಕರಿಗೆ ಅಲೆದಾಟವನ್ನು ತಪ್ಪಿಸಲು ಮುಂದಾಗಬೇಕು ಎಂದು ಶಿವಮೊಗ್ಗ ಡಯಾನ ಬುಕ್‌ಸ್ಟಾಲ್ ಕೆ.ಎಲ್.ಈಶ್ವರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Comment

error: Content is protected !!