ನಿಷೇಧಿತ ಡ್ರಗ್ಸ್‌ಗಳ ಚಟ ಮಾನಸಿಕ ರೋಗಕ್ಕೆ ಕಾರಣ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ನಿಷೇಧಿತ ಡ್ರಗ್ಸ್‌ಗಳ ಚಟ ಮಾನಸಿಕ ರೋಗದ ಲಕ್ಷಣವಾಗಿದ್ದು ಪ್ರತಿ ಕಾಲೇಜ್‌, ಶಾಲೆಗಳಲ್ಲಿ ಕೌನ್ಸಿಲಿಂಗ್ ಸೆಂಟರ್ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಹೇಳಿದರು.

ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹೊಸನಗರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಮಾದಕ ದ್ರವ್ಯ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಾವು ನೀವೆಲ್ಲರೂ ಸೇರಿ ಇಡೀ ದೇಶದಲ್ಲಿಯೇ ಮಾದಕ ವಸ್ತುಗಳ ಜಾಲವನ್ನು ಕಂಡು ಹಿಡಿಯಬೇಕಾಗಿದೆ. ನಿಷೇಧಿತ ಮಾದಕ ದ್ರವ್ಯಗಳ ಪೂರೈಕೆ ಜಾಲವನ್ನು ತಡೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದರೂ ಬೇಡಿಕೆ ಪ್ರಮಾಣ ಗಣನೀಯವಾಗಿ ಏರುತ್ತಿದೆ ಎಂಬ ಗುಮಾನಿ ಹುಟ್ಟಿಕೊಳ್ಳುತ್ತಿದ್ದು ಮಾದಕ ದ್ರವ್ಯ ಜಾಲವನ್ನು ಕಂಡು ಹಿಡಿಯುವ ದೃಷ್ಠಿಯಿಂದ ನಿರಂತರ ಪ್ರಯತ್ನ ನಡೆಯುತ್ತಿದೆ ಈ ಮಾದಕ ದ್ರವ್ಯವನ್ನು ಸಂಪೂರ್ಣ ಸುಟ್ಟು ಹಾಕಬೇಕಾದರೆ ಯುವಕರು ನಮ್ಮೊಂದಿಗೆ ಕೈ ಜೋಡಿಸುವ ಅಗತ್ಯವಿದೆ. ಬನ್ನಿ ನಮ್ಮ ಇಲಾಖೆಯೊಂದಿಗೆ ಕೈ ಜೋಡಿಸಿ ಸಂಪೂರ್ಣ ನಿಷೇಧಿತ ದ್ರವ್ಯ ಭವ್ಯ ಭಾರತವನ್ನು ಮಾಡೋಣ ಎಂದರು.

ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿ :

ಪಿಎಸ್ಐ ಶಿವಾನಂದ್ ಕೆ.ವೈ ಮಾತನಾಡಿ, ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಇಂದಿನ ಯುವಕರು ನಮ್ಮೊಂದಿಗೆ ಕೈ ಜೋಡಿಸುವ ಅಗತ್ಯ ಬಹಳವಿದೆ. ಯಾವ-ಯಾವ ಸ್ಥಳಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ನೀವು ನೀಡಿದರೆ ನಮ್ಮ ಇಲಾಖೆ ನಿಮ್ಮ ಹೆಸರನ್ನು ಗೌಪ್ಯವಾಗಿಟ್ಟು ಡ್ರಗ್ಸ್ ವ್ಯಾಪಾರಿಗಳನ್ನು ಮಟ್ಟ ಹಾಕಲಾಗುವುದು. ನೀವು ನಮಗೆ ಹೇಳುವುದರಿಂದ ಹತ್ತು ಕುಟುಂಬವನ್ನು ಉಳಿಸಿದಂತಾಗುತ್ತವುದರ ಜೊತೆಗೆ ಕ್ರಿಮಿನಲ್ ಕೇಸುಗಳ ಸಂಖ್ಯೆಯು ಮಟ್ಟ ಹಾಕಬಹುದು. ಪ್ರತಿಯೊಬ್ಬರು ಮಾದಕ ದ್ರವ್ಯ ಸೇವನೆ ಮಾಡಿದವರು ಹಾಗೂ ಮಾರಾಟದ ಜಾಲವನ್ನು ಕಂಡು ಹಿಡಿಯುವ ದೃಷ್ಠಿಯಿಂದ ಪ್ರತಿಯೊಬ್ಬರು ನಮ್ಮ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಪತಿ ಹಳಗುಂದ, ಉಪನ್ಯಾಸಕ ಪ್ರದೀಪ್, ಗ್ರಂಥಾಪಾಲಕ ಡಾ|| ಲೋಕೇಶ್, ವಕೀಲರಾದ ಮೋಹನ್ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್, ಪೊಲೀಸ್ ಸಿಬ್ಬಂದಿಗಳಾದ ಗಂಗಪ್ಪ, ಸುನೀಲ್, ಅವಿನಾಶ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

error: Content is protected !!