ನವೆಂಬರ್‌ನಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಕೋಣಂದೂರು ಬೃಹನ್ಮಠದಲ್ಲಿ ನಡೆದ ಪೂರ್ವಭಾವಿ ಸಭೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಕೋಣಂದೂರು ಬೃಹನ್ಮಠದಲ್ಲಿ ನಿರ್ಮಿಸಲಾಗಿರುವ ಗುರು ನಿವಾಸ ಶಿಲಾಮಂಟಪ ಕರ್ತೃ ಗದ್ದುಗೆ ಹಾಗೂ ಪಂಚಪೀಠಾಧೀಶ್ವರ ಜಗದ್ಗುರುಗಳು ಇಷ್ಟಲಿಂಗ ಶಿವಪೂಜಾನುಷ್ಟಾನ ಹಾಗೂ ಧರ್ಮಜಾಗೃತಿ ಸಮಾರಂಭವೂ ಬರುವ ನವೆಂಬರ್ ತಿಂಗಳ 6, 7 ಮತ್ತು 8 ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದ್ದು ಈ ಸಮಾರಂಭದ ಪೂರ್ವಭಾವಿ ಸಭೆಯು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು.

ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು ಸುಮಾರು 20 ರಿಂದ 25 ಲಕ್ಷ ರೂ. ವೆಚ್ಚವಾಗಲಿದ್ದು ಮಠದ ಭಕ್ತರ ಸಹಕಾರದೊಂದಿಗೆ ಈ ಎಲ್ಲಾ ಧರ್ಮಕಾರ್ಯಗಳು ನಡೆಯಬೇಕಾಗಿರುವುದರಿಂದಾಗಿ ನಾಲ್ಕೈದು ತಿಂಗಳ ಮೊದಲೇ ಪೂರ್ವಭಾವಿ ಸಭೆಯನ್ನು ಭಕ್ತ ಸಮೂಹದಲ್ಲಿ ಕರೆಯಲಾಗಿದು ಭಕ್ತರ ಸಲಹೆ ಸೂಚನೆಯನ್ವಯ ಕಾರ್ಯಕ್ರಮದ ರೂಪರೇಷವನ್ನು ಸಿದ್ದಪಡಿಸಲಾಗುವುದೆಂದು ಶ್ರೀಗಳು ಸಭೆಯಲ್ಲಿ ಪ್ರಾಸ್ತಾವನೆ ಇಟ್ಟರು.

ನವೆಂಬರ್ 6 ರಂದು ಸಂಜೆ ಶ್ರೀಶೈಲ ಪಂಚಪೀಠದ ಜಗದ್ದುರುಗಳು ಮತ್ತು ಕಾಶಿ ಪೀಠದ ಜಗದ್ಗುರುಗಳು ಹಾಗೂ ಉಜ್ಜಯನಿ ಪೀಠದ ಜಗದ್ಗುರುಗಳು ಕೋಣಂದೂರು ಮಠಕ್ಕೆ ದಯಮಾಡಿಸುವರು. ಅಂದು ರಾತ್ರಿ ನೂತನ ಗುರುನಿವಾಸ ಶಿಲಾಮಂಟಪ ಮತ್ತು ಕರ್ತೃ ಗದ್ದುಗೆಗೆ ಪ್ರವೇಶೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು ನವೆಂಬರ್ 7 ರಂದು ಮುಂಜಾನೆ ಪೂಜೆಯೊಂದಿಗೆ ಉಭಯ ಶ್ರೀ ಜಗದ್ಗುರುಗಳ ಉಭಯ ಜಗದ್ಗುರುಗಳಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದ್ದು, ನವೆಂಬರ್ 8 ರಂದು ಬೆಳಗ್ಗೆ ನೂತನ ಶಿಲಾಮಯ ಕಟ್ಟಡದ ಉದ್ಘಾಟನೆ ಮತ್ತು ಕರ್ತೃಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ ಜರುಗುವುದು. ನಂತರ ಧರ್ಮ ಸಮಾರಂಭದಲ್ಲಿ ಗುರು ವಿರಕ್ತ ಪೀಠಾಧ್ಯಕ್ಷರ ಸಮಾಗಮದಲ್ಲಿ ಧರ್ಮಜಾಗೃತಿ ಕಾರ್ಯಕ್ರಮವು ಶ್ರೀಶೈಲ, ಕಾಶಿ, ಮತ್ತು ಉಜ್ಜಯನಿ ಪಂಚಪೀಠಾಧ್ಯಕ್ಷರು ಮತ್ತು ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಜರುವುದು.

ಈ ಎಲ್ಲ ಧರ್ಮ ಸಮಾರಂಭದಲ್ಲಿ ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದು ಸಕಲ ಭಕ್ತಾಭಿಮಾನಿಗಳು ಪಾಲ್ಗೊಂಡು ತನು, ಮನ, ಧನವನ್ನು ನೀಡುವುದರೊಂದಿಗೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ಚರ್ಚಿಸುವ ಮೂಲಕ ಭಕ್ತರ ಸಲಹೆ ಸೂಚನೆಗಳನ್ನು ಪಡೆಯಲಾಯಿತು.

ಪೂರ್ವಭಾವಿ ಸಭೆಯಲ್ಲಿ ಹಲವು ಭಕ್ತರು ವಾಗ್ದಾನ ಮಾಡುವುದರೊಂದಿಗೆ ಶ್ರೀಗಳು ಮುಂದಿನ ದಿನಗಳಲ್ಲಿ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಮಠದ ಭಕ್ತರ ಮತ್ತು ಸಮಾಜ ಬಾಂಧವರನ್ನು ಸಂಪರ್ಕಿಸಿ ಗ್ರಾಮದಲ್ಲಿ ಈ ಧಾರ್ಮಿಕ ಕಾರ್ಯಕ್ಕೆ ಭಕ್ತರ ಮನೆ ಮನ ತಲುಪಿ ಅವರು ಕೊಡುವ ಕಾಣಿಕೆಯನ್ನು ಸ್ವೀಕರಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುವುದಾಗಿ ಒಕ್ಕೋರಲಿನಿಂದ ನಿರ್ಣಯಿಸಿ ಬೆಂಬಲಿಸಿದರು.

ಇದೇ ಸಂದರ್ಭದಲ್ಲಿ ಉದ್ಯಮಿ ಕೆ.ಆರ್.ಪ್ರಕಾಶ್ ಕೋಣಂದೂರು ಇವರನ್ನು ಈ ಧರ್ಮಜಾಗೃತಿ ಸಮಾರಂಭದ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತು ಆಯಾ ಗ್ರಾಮಗಳ ತಲಾ ಇಬ್ಬರು ಸದಸ್ಯರನ್ನು ಆಯ್ಕೆ ಮೂಲಕ ಸಂಪರ್ಕಿಸಲು ಸಭೆ ನಿರ್ಣಯಿಸಿತು.

ಈ ಸಭೆಯಲ್ಲಿ ಕೋಣಂದೂರು ಕೆ.ಆರ್.ಪ್ರಕಾಶ, ಬೆಳಕೋಡು ಹಾಲಸ್ವಾಮಿಗೌಡ, ಜೆ.ಎಸ್.ಚಂದ್ರಪ್ಪ, ತಳಗಿಬೈಲು ವೀರಪ್ಪ, ಕಾರ್ಗಲ್ ಮಹೇಶಗೌಡರು, ಕುಂಸಿ, ಚೋರಡಿ, ತಮ್ಮಡಿಹಳ್ಳಿ, ಹಾರನಹಳ್ಳಿ, ಸಾಗರ, ಮುನಿಯೂರು, ಜಳಬೈಲು, ಶೆಟ್ಟಿಬೈಲು, ಕಲ್ಲಳ್ಳಿ, ಸೊನಲೆ, ಜಂಬಳ್ಳಿ, ಶಿವಪುರ, ಕೊಳವಳ್ಳಿ, ಗಿಳಾಲಗುಂಡಿ, ಚನ್ನಕೊಪ್ಪ, ಖೈರಾ, ತಂಗಳವಾಡಿ, ಕೆಂಜಿಗಾಪುರ, ಆವಿನಹಳ್ಳಿ, ಮುತ್ತಲ, ನೆವಟೂರು, ಹಾರಂಬಳ್ಳಿ, ಕಲ್ಮಕ್ಕಿ, ಬೆಳಂದೂರು, ಆಲವಳ್ಳಿ, ರಿಪ್ಪನ್‌ಪೇಟೆ, ಬೆನವಳ್ಳಿ, ಕೋಣಂದೂರು, ಹಾದಿಗಲ್ಲು, ಬೀಡೆ, ಜಳಬೈಲು, ವಸವೆ, ಕೋಮನಾಳ್, ಕಂಸಾಗರ, ಕಲ್ಮನೆ, ಜೋಗಿಹಳ್ಳಿ ಇನ್ನಿತರ ಗ್ರಾಮಗಳ ನೂರಾರು ಭಕ್ತರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೀನು ಮರಿ ಸಾಕಾಣಿಕೆಗೆ ಕೆರೆಗಳ ಹರಾಜು

RIPPONPETE | ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕೆರೆಗಳಲ್ಲಿ ಮೀನು ಮರಿಗಳನ್ನು ಸಾಕಾಣಿಕೆ ಮಾಡಲು ಬಹಿರಂಗ ಹರಾಜ ಪ್ರಕ್ರಿಯೆಯು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ಇಂದು ಜರುಗಿತು.

ಕೆರೆಗಳ ಬಹಿರಂಗ ಹರಾಜಿಗೆ 7 ಜನ ಬಿಡ್‌ದಾರರು ಠೇವಣಿ ಹಣವನ್ನು ಮೂರು ವರ್ಷದ ಅವಧಿಯಲ್ಲಿ ಈ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಿಕೊಳ್ಳುವುದರೊಂದಿಗೆ ಇನ್ನಿತರ ಮೀನು ಮರಿಗಳಿಗೆ ಆಹಾರವನ್ನು ಹಾಕುವುದು ನೀರಿನ ನಿರ್ವಹಣೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ಕಡ್ಡಾಯ ನಿಯಮಗಳನ್ನು ಪಾಲಿಸುವು ಬಗ್ಗೆ ಬಿಡ್‌ದಾರರಿಗೆ ಮಾಹಿತಿ ನೀಡಲಾಯಿತು.

ಕೆಲವು ಬಿಡ್‌ದಾರರು ಮೂರು ವರ್ಷದ ಬದಲು ಐದು ವರ್ಷಕ್ಕೆ ಮಾಡಿ ಎಂದು ಮನವಿ ಮಾಡಿದರೂ ಕೂಡಾ ನಾವು ಈಗಾಗಲೇ ಬಹಿರಂಗ ಪ್ರಚಾರ ಮಾಡಲಾಗಿ ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸೇರಿದಂತೆ ಇನ್ನಿತರ ಸದಸ್ಯರು, ಪಿಡಿಒ ಮಧುಸೂದನ್, ಸಿಬ್ಬಂದಿಗಳಾದ ನಾಗೇಶ್ ಮೊರೆ, ಮಧುಶ್ರೀ, ಭೂದೇವಿ, ರಾಜೇಶ್ ಇನ್ನಿತರರು ಹಾಜರಿದ್ದರು.

Leave a Comment

error: Content is protected !!