ದುಬಾರಿ ಹಣ, ಹೆಚ್ಚುವರಿ ಚಿನ್ನ ನೀಡುವುದಾಗಿ ವಂಚನೆ ಜಾಲ | ಸುಳ್ಳು ಸುದ್ದಿಗಳನ್ನು ನಂಬಿ ಮೋಸ ಹೋಗಬೇಡಿ ; ಹೊಸನಗರ ಸಿಪಿಐ

Written by Malnadtimes.in

Published on:

WhatsApp Group Join Now
Telegram Group Join Now

ಹೊಸನಗರ: ಇತ್ತಿಚೇನ ದಿನಗಳಲ್ಲಿ ರಾಜ್ಯ, ಅಂತರ ರಾಜ್ಯಗಳಿಂದ ಹಾಗೂ ಜಿಲ್ಲೆ, ತಾಲ್ಲೂಕುಗಳಲ್ಲಿ ಕೆಲವು ವ್ಯಕ್ತಿಗಳು ನಿಮಗೆ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಸಹಕಾರಿ ಸಂಘಗಳಲ್ಲಿ ಸಾಲ ನೀಡುತ್ತೇವೆ ಬ್ಯಾಂಕ್ ಸಿಬ್ಬಂದಿಗಳಿಗೆ ಸಾಲ ಮಂಜೂರಾತಿ ಮಾಡಿಸುವಾಗ ಹಣ ಕೊಡ ಬೇಕಾಗಿರುವುದರಿಂದ ಸಾಲದ ಕಾಲು ಭಾಗದ ಹಣ ಪಡೆದಿರುವುದು ಹಾಗೂ 5 ಗ್ರಾಂ ಚಿನ್ನಕ್ಕೆ 10 ಗ್ರಾಂ ಚಿನ್ನ ನೀಡುತ್ತೇವೆ ಎಂದು ವಿವಿಧ ರೀತಿಯಲ್ಲಿ ಪ್ರಭಾವ ಬೀರಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಜಾಹೀರಾತು ಪ್ರಕಟಿಸಿ ಅನೇಕರನ್ನು ಮೋಸ ಮಾಡಿರುವುದು ನಮ್ಮ ಪೊಲೀಸ್ ಇಲಾಖೆಯ ಗಮನದಲ್ಲಿದ್ದು ಮೋಸ ಮಾಡಿದವರು ತಕ್ಷಣ ಹೊಸನಗರದ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ದೂರು ದಾಖಲಿಸಬೇಕು ಹಾಗೂ ಮುಂದೆ ಮೋಸ ಹೋಗುವವರಿಗೆ ಜಾಗೃತಿ ಮೂಡಿಸುವುದು ಮೋಸ ಹೋದವರ ಕರ್ತವ್ಯವಾಗಿದೆ. ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಲು ಪ್ರಯತ್ನಿಸುವುದಾಗಿ ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಸಾರ್ವಜನಿಕರಿಗೆ ತಿಳಿಸಿದರು.

ಅವರು ತಮ್ಮ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಜನರಿಗೆ ಮೊಬೈಲ್ ಕರೆಗಳು ಬಂದಿದ್ದು ಕೆಲವರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಇಂತವರು ದೂರು ನೀಡಲು ಹಿಂಜರಿಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುತ್ತದೆ ಮೊಬೈಲ್‌ನಲ್ಲಿ ಬರುವ ಕೆಲವು ಸುದ್ಧಿಗಳು ಫೋನ್ ಕರೆಗಳು ಅಪ್ಪಟ ಸುಳ್ಳು ಸುದ್ಧಿಯಾಗಿರುತ್ತದೆ‌. ನಿಮಗೆ ಮೊಬೈಲ್ ಮೂಲಕ ಯಾರು ಸಾಲ ನೀಡುವುದಿಲ್ಲ. ಅಪರಾಧಿಗಳು ನಿಮಗೆ ಬ್ಲ್ಯಾಕ್ ಮೇಲ್ ತಂತ್ರ ಉಪಯೋಗಿಸಿ ನಮ್ಮ ಅಕೌಂಟಿಗೆ 10 ಸಾವಿರ ರೂ. ಜಮಾ ಮಾಡಿದರೆ ನಿಮಗೆ 1 ಲಕ್ಷ ಸಾಲ ನೀಡುತ್ತೇವೆ ಎಂಬ ಭರವಸೆಗಳನ್ನು ನೀಡಿ ನಂತರ ನೀವು ಹತ್ತು ಸಾವಿರ ಅವರ ಅಕೌಂಟಿಗೆ ಜಮಾ ಮಾಡಿದರೆ ನಿಮ್ಮ ಜುಟ್ಟು ಅವರ ಕೈಯಲ್ಲಿದ್ದು ನಿಮ್ಮ ಅಕೌಂಟಿನಲ್ಲಿರುವ ಅಷ್ಟು ಹಣವನ್ನು ತೆಗೆದುಕೊಳ್ಳುವವರೆಗೆ ಫೋನ್ ಕರೆ ಮಾಡುತ್ತಿರುತ್ತಾರೆ. ನಿಮ್ಮ ಕೈ ಖಾಲಿಯಾದ ನಂತರ ಮೋಸಗಾರರ ಜಾಲದ ಮೊಬೈಲ್ ಸ್ವೀಚ್ ಆಪ್ ಮಾಡಿಕೊಳ್ಳುತ್ತಾರೆ. ಮೊಬೈಲ್ ಫೋನ್ ಕಾಲ್ ನಂಬಿ ಹಣವನ್ನು ಹಾಕುವ ತಂಟೆಗೆ ಹೋಗಬೇಡಿ ಇಂತಹ ಘಟನೆ ನಡೆದಿದ್ದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ನಮ್ಮಲ್ಲಿರುವ ಕ್ರೈಂ ಬ್ರಾಂಚ್ ಪೋಲೀಸರ ಮೂಲಕ ನಿಮ್ಮ ಹಣವನ್ನು ತರಿಸಿಕೊಡವ ಪ್ರಯತ್ನ ಮಾಡಬಹುದು ಎಂದರು.

Leave a Comment

error: Content is protected !!