ಗಾಳಿ, ಮಳೆಗೆ ಉರುಳಿದ ಕೊಟ್ಟಿಗೆ, ಎಮ್ಮೆ ಸಾವು ನಾಲ್ಕೈದು ಎಮ್ಮೆಗಳಿಗೆ ಗಾಯ !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ಕೆರೆಹಳ್ಳಿ ಶಿವಾಜಿರಾವ್ ಬಿನ್ ಪುಣ್ಣೋಜಿರಾವ್ ಎಂಬುವರ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ಎಮ್ಮೆವೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ನಾಲ್ಕೈದು ಎಮ್ಮೆಗಳಿಗೆ ತೀವ್ರವಾದ ಗಾಯಗೊಂಡ ಘಟನೆ ನಡೆದಿದೆ.

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾದ ಎಮ್ಮೆಗಳು ಮಧ್ಯರಾತ್ರಿ ಭಾರಿ ಗಾಳಿ ಮಳೆಯಿಂದಾಗಿ ಕೊಟ್ಟಿಗೆ ಕುಸಿದು ಬಿದ್ದಿದ್ದು ಕೊಟ್ಟಿಗೆಯಲ್ಲಿದ್ದ ಎಮ್ಮೆಗಳು ಕೂಗಾಟ ಕೇಳಿ ಹೊರಗೆ ಓಡಿ ಬಂದು ನೋಡಿದಾಗ 8 ಎಮ್ಮೆಗಳಿದ್ದು ಅವುಗಳನ್ನು ಬಿಚ್ಚಿ ಹೊರ ಓಡಿಸಲು ಪ್ರಯತ್ನಿಸಲಾಯಿತು‌. ನಾಲ್ಕೈದು ಎಮ್ಮೆಗಳಿಗೆ ತೀವ್ರ ಗಾಯವಾಗಿದ್ದು ಒಂದು ಎಮ್ಮೆ ಸಾವನ್ನಪ್ಪಿದೆ ಎಂದು ಶಿವಾಜಿರಾವ್ ತಿಳಿಸಿದ್ದಾರೆ.

Leave a Comment

error: Content is protected !!