ಒರಟು ತನದ ಅಪ್ಪನ, ಸೌಮ್ಯ ಸ್ವಭಾವದ ಅಮ್ಮನ ಪ್ರೀತಿಯಲ್ಲಿ ಮಗ ‘ಅರ್ಜುನ’ನ ಕನಸು ನನಸಾಗಲಿಲ್ಲ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಅಪ್ಪಟ ಹಳ್ಳಿಯ ನಾಗರೀಕತೆಯಲ್ಲಿ ಅಪ್ಪ-ಅಮ್ಮ ತಮ್ಮ ಮಕ್ಕಳು ಒಳ್ಳೆಯ ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಸಮಾಜದಲ್ಲಿ ಇಂತಹವರ ಮಗ ಎಂಬ ಹೆಗ್ಗಳಿಕೆಯಲ್ಲಿ ಬೆಳೆದು ಬಂದರೆ ಅದೇ ನಮಗೆ ನೀಡುವ ದೊಡ್ಡ ಗೌರವ ಎಂಬ ನಿಟ್ಟಿನಲ್ಲಿ ಅಪ್ಪ ಮಗನನ್ನು ನೋಡುವ ದೃಷ್ಟಿಯಾದರೆ ಆಮ್ಮ ನನ್ನ ಮಗನಿಗೆ ಅಪ್ಪ ಏಕೆ ಹೀಗೆ ಸಿಡುಕು ಮಾಡುತ್ತಾರೆಂಬ ಜಿಜ್ಞಾಸೆಯಲ್ಲಿ ಮಗನಿಗೆ ಅಕ್ಕರೆ ನೀಡಿ ಪಾಲನೆ-ಪೋಷಣೆ ಮಾಡಿ ಹೆಚ್ಚು ಪ್ರೀತಿ ಮಾಡುವುದು ತಾಯಿಯ ಕರುಣೆಯಲ್ಲಿ ಮಗ ಶಾಲೆ, ಕಾಲೇಜ್ ಮುಗಿಸುವ ಮುನ್ನವೇ ಪ್ರೀತಿ ಪ್ರೇಮಕ್ಕೆ ಬೇಸತ್ತ ಮಗನ ವಿಚಾರ ತಿಳಿದ ಅಪ್ಪ ಬುದ್ದಿಮಾತು ಹೇಳುವ ಮುನ್ನ ಕಪಾಳ ಮೋಕ್ಷ ಮಾಡಿದ ಪರಿಣಾಮ ಮಗ ಮನೆಬಿಟ್ಟು ದೂರ ಸಾಗುತ್ತಾನೆ.

ಆದರೆ ಅಪ್ಪ ಮಗನ ಕೊರಗಿನಲ್ಲಿ ಸಾವನ್ನಪ್ಪಿದರೂ ಮಗ ಮಾತ್ರ ಅಪ್ಪನ ಹೆಣವನ್ನು ನೋಡಲು ಬಾರದೇ ಮನಸ್ಸಿನಲ್ಲಿಯೇ ಕೊರಗುತ್ತಾ ಉದ್ಯೋಗ ಅರಸಿಕೊಂಡು ದೂರದೂರುಗಳಿಗೆ ಹೋಗಿ ಅಲೆಯುತ್ತಾ ಇರುವ ಮಗನ ನೆನಪಿನಲ್ಲಿ ತಾಯಿ ಚಡಪಡಿಸುವ ದೃಶ್ಯ ಕಂಡರೇ ಎಂತಹವರ ಮನಸ್ಸು ಕರಗಿ ನೀರಾಗುವಂತೆ ಮಾಡುವ “ಅರ್ಜುನ ‘’ ಕಿರು ಚಿತ್ರ ಪರದೆಯಲ್ಲಿ ಪ್ರೇಕ್ಷಕರ ಮನಗೆಲ್ಲುವಂತಾಗಿದೆ.

ಅತ್ತ ಗಂಡನ ಕಳೆದುಕೊಂಡು ದುಃಖದಲ್ಲಿರುವ ತಾಯಿ.ಸ ಮಗನ ಬರುವ ನಿರೀಕ್ಷೆಯಲ್ಲಿ ಶಬರಿಯಂತಾಗಿ ಮನೆಯ ಮುಂಭಾಗದ ಕಟ್ಟೆಯ ಮೇಲೆ ಕುಳಿತು ಬರುವ ಹೋಗುವವರನ್ನು ಕಂಡು ಮಗ ಮನೆಗೆ ಬಂದ ಎಂಬ ಭ್ರಮೆಯಲ್ಲಿ ಕಾಲಕಳೆಯುವ ತಾಯಿಗೆ ಶಾಲಾ ಮಕ್ಕಳು ಅಜ್ಜಿ ಅರ್ಜುನ ಮನೆಗೆ ಬರುತ್ತಾನಂತೆ ಶೆಟ್ಟರ ಅಂಗಡಿಯವರಿಗೆ ಫೋನ್ ಬಂದಿದೆ ಎಂದು ಹೇಳುತ್ತಿದ್ದಂತೆ ಹೆತ್ತ ತಾಯಿಯ ಕರುಳು ಚಿಗುರಿದಂತಾಗಿ ಮಗನಿಗೆ ಕನಸಿನ ಲೋಕದಲ್ಲಿ ಮಗನ ಅಶೋತ್ತರಗಳನ್ನು ಮಾಡಿದವಳಂತೆ ಕನಸಿನ ಲೋಕಕ್ಕೆ ಜಾರುತ್ತಾಳೆ. ಆದರೆ ಊರಿನ ಹಬ್ಬದ ಬಗ್ಗೆ ಸಾರ್ವಜನಿಕರಿಗೆ ಆಹ್ವಾನ ನೀಡಲು ಬರುವ ದೇವಸ್ಥಾನದ ಪಾರುಪತ್ಯಗಾರ ಜಾತ್ರೆಯ ಆಹ್ವಾನ ಪತ್ರ ನೀಡಲು ಬಂದಾಗ ತಾಯಿ ಮಗ ಅರ್ಜುನ ಮನೆಗೆ ಬಂದಿದ್ದಾನೆಂದು ತಿಳಿಸಿದಾಗ ಯಾವಾಗ ಬಂದ ಎಲ್ಲೋ ನಿನಗೆ ಭ್ರಮೆ ಯಾವ ಮಗನೂ ಬಂದಿಲ್ಲ ಎಂದಾಗ ಅರ್ಜುನ ಮನೆಗೆ ಬರುತ್ತಾನಂತ ನಮ್ಮ ಶಾಲೆಯ ಮಕ್ಕಳು ಶೆಟ್ಟಿ ಅಂಗಡಿಯವರಿಗೆ ಫೋನ್ ಬಂದಿದೆ ಎಂದು ತಿಳಿಸಿದಾಗ ಅವರು ಊರು ಬಿಟ್ಟು ಹದಿನೈದು ದಿನಗಳಾಯಿತು ಎಂದಾಗ ತಾಯಿಯ ದುಃಖದ ಚಿಲುಮೆ ಒಡೆದದಂತಾಗಿ ನಾನು ಕನಸು ಕಾಣುತ್ತಿದ್ದನೆಂದು ಬ್ರಾಸವಾಗಿ ತನ್ನ ಮನೆಯ ಕಟ್ಟೆಯ ಮೇಲೆ ಮಗನ ಬರುವಿಕೆಯನ್ನು ಶಬರಿ ಕಾದುಕುಳಿತ್ತಿದ್ದು ಈ ಕಿರು ಚಿತ್ರದ ಕಥೆಯ ಸಾರಂಶವಾಗಿದೆ.

ಒಟ್ಟಾರೆ ಗ್ರಾಮೀಣ ಪ್ರದೇಶದ ಇಂದಿನ ನೈಜತೆಯನ್ನು ಬಿಂಬಿಸುವ ಮೂಲಕ ಚಿತ್ರಕಥಾ ಹಂದರವನ್ನು ಚಿತ್ರ ಪ್ರೇಮಿಗಳಿಗೆ ಉಣಬಡಿಸುವ ಚಿಕ್ಕ ಪ್ರಯತ್ನ ಯಶಸ್ಸು ಕಾನುವಂತಾಗಲಿ ಎಂದು ಚಿತ್ರ ರಸಿಕರ ಅಶಯವಾಗಿದೆ.

Leave a Comment

error: Content is protected !!