ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊಸನಗರ ಸರ್ಕಾರಿ ಹೈಸ್ಕೂಲ್‌ಗೆ ಶೇ.85.18 ಫಲಿತಾಂಶ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹೈಸ್ಕೂಲ್ ವಿಭಾಗದಲ್ಲಿ 85.18% ಫಲಿತಾಂಶ ಬಂದಿದೆ ಎಂದು ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ರೇಣುಕೇಶ್ ಕೆ ತಿಳಿಸಿದ್ದಾರೆ.

ನಮ್ಮ ಸರ್ಕಾರಿ ಹೈಸ್ಕೂಲ್ ವಿಭಾಗದಲ್ಲಿ 81 ವಿದ್ಯಾರ್ಥಿ-ವಿದ್ಯಾರ್ಥಿನಿಯರು 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಬರೆದಿದ್ದು ಅದರಲ್ಲಿ 69 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ‌. 69 ವಿದ್ಯಾಥಿ-ವಿದ್ಯಾರ್ಥಿನಿಯರಲ್ಲಿ 11 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದು, ಪ್ರಥಮ ದರ್ಜೆಯಲ್ಲಿ 36 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 14 ವಿದ್ಯಾರ್ಥಿಗಳು ಹಾಗೂ ತೃತೀಯ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.

ಅಭಿನಂದನೆ:
ಖಾಸಗಿ ಶಾಲೆಗಳಲ್ಲಿ ಬುದ್ದಿವಂತ ಮಕ್ಕಳನ್ನು ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸಿ 100% ಫಲಿತಾಂಶ ಘೋಷಿಸುತ್ತಾರೆ. ಆದರೆ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ನಾವು ರಾತ್ರಿ ಹಗಲು ಎನ್ನದೇ ಪಾಠಗಳನ್ನು ಬೋಧಿಸುವುದರ ಜೊತೆಗೆ ಪ್ರತಿದಿನ ರಾತ್ರಿಯು ಪಾಠ ಮಾಡಿದ್ದರಿಂದ 85.18% ಫಲಿತಾಂಶ ಈ ಕಾಣಲು ಸಾಧ್ಯವಾಗಿದೆ ಎಂದು, ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಿದ್ದಿ ಕಲಿಸುವ ಜವಾಬ್ದಾರಿ ನಮ್ಮ ಸರ್ಕಾರಿ ಶಾಲೆಯ ಶಿಕ್ಷಕರ ಮೇಲಿದ್ದು ಈ ಬಾರಿ 85.18% ಮುಂದಿನ ಸಾಲಿನಲ್ಲಿ 95% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ ತರುವ ಹೊಣೆಗಾರಿಕೆ ನಮ್ಮ ಮೇಲಿದ್ದು ನಮ್ಮ ಎಲ್ಲ ಶಿಕ್ಷಕರು ಶ್ರಮಿಸಲಿದ್ದಾರೆ. 85.18% ಬರಲು ಸಹಕರಿಸಿದ ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯರಿಗೆ ಹಾಗೂ ಶಾಲೆಯ ಎಲ್ಲ ಶಿಕ್ಷಕರಿಗೆ ಮುಖ್ಯ ಶಿಕ್ಷಕ ರೇಣುಕೇಶ್ ಈ ಮೂಲಕ ಅಭಿನಂದಿಸಿದ್ದಾರೆ.

Leave a Comment

error: Content is protected !!