ಆಯನೂರು ಮಂಜುನಾಥ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ ; ಬೇಳೂರು ಗೋಪಾಲಕೃಷ್ಣ

Written by Malnadtimes.in

Updated on:

WhatsApp Group Join Now
Telegram Group Join Now

ಹೊಸನಗರ: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಜೂನ್ 3ರಂದು ನಡೆಯಲಿದ್ದು ಕಾಂಗ್ರೆಸ್ ಪಕ್ಷದ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಣ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ಕೆ.ಕೆ ಯವರನ್ನು ಗೆಲ್ಲಿಸಬೇಕೆಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಆರ್ಯ ಈಡಿಗರ ಸಬಾಭವನದಲ್ಲಿ ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ತಾಲ್ಲೂಕು ಪಂಚಾಯತಿ ಜಿಲ್ಲಾ ಪಂಚಾಯತಿಯ ಬೂತ್ ಮಟ್ಟದ ಅಧ್ಯಕ್ಷ ಸದಸ್ಯರುಗಳ ಸಭೆ ಹಾಗೂ ಚುನಾವಣೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಮಾತನಾಡಿದರು.

ವಿಧಾನಸಭೆ-ಲೋಕಸಭೆಯಲ್ಲಿ ಯಾವ ರೀತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶ್ರಮಿಸಿದ್ದೀರೋ ಅದೇ ರೀತಿ ರಾತ್ರಿ ಹಗಲು ಎನ್ನದೇ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಕಾರ್ಯಕರ್ತರು ಮತದಾರರ ಮನೆಗೆ ಭೇಟಿ ನೀಡಿ ರಾಜ್ಯ ಸರ್ಕಾರ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ನೀಡುತ್ತಿರುವುದನ್ನು ಪ್ರಚಾರ ಪಡಿಸಿ ಮತದಾರರ ಮನ ಒಲಿಸುವ ಪ್ರಯತ್ನ ಮಾಡಬೇಕು ಎಂದರು.

ಚುನಾವಣೆ ನಿರಂತರ:
ರಾತ್ರಿ-ಹಗಲು ಹೇಗೋ ಚುನಾವಣೆಯು ಅದೇ ರೀತಿ ಬರುತ್ತಿರುತ್ತದೆ. 1 ವರ್ಷದ ಹಿಂದೆ, ವಿಧಾನಸಭೆ ಚುನಾವಣೆ ಈಗ ಲೋಕಸಭೆ ಚುನಾವಣೆ ಮುಗಿದಿದೆ‌. ಪುನಃ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯತಿ ಚುನಾವಣೆ ಈ ರೀತಿ ಚುನಾವಣೆ ಬಂದು ಹೋಗುತ್ತಿರುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ನಿದ್ದೆ ಮಾಡದೇ ಕೆಲಸ ನಿರ್ವಹಿಸುತ್ತಿರಬೇಕು ಅದರ ಜೊತೆಗೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೇ ಎಲ್ಲ ಚುನಾವಣೆಯಲ್ಲಿಯೂ ಜಯ ಗ್ಯಾರಂಟಿ ಎಂದರು.

ಬಿಗ್ ಫೈಟ್ :
ಇಷ್ಟು ವರ್ಷಗಳ ಕಾಲ ಮತದಾರರಿಗೆ ಲೋಕಸಭೆ ಚುನಾವಣೆ ಮುಗಿದ್ದಿದ್ದೇ ಗೊತ್ತಾಗುತ್ತಿರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ನಾವು ಪ್ರತಿಸ್ವರ್ಧಿ ಬಿ.ವೈ ರಾಘವೇಂದ್ರರವರಿಗೆ ಬಿಗ್ ಫೈಟ್ ನೀಡಿದ್ದೇವೆ. ಸೋಲು-ಗೆಲುವು ಮುಖ್ಯವಲ್ಲ ಹೋರಾಟ ಮುಖ್ಯವಾಗಿದ್ದು ನಾವು ಲೋಕಸಭೆ ಚುನಾವಣೆಯಲ್ಲಿ ನಮ್ಮ ಕೆಲಸ ನೋಡಿ ಮತ ಕೇಳಿದ್ದೇವೆಯೇ ಹೊರತು ಮೋದಿಯವರ ಹೆಸರು ಹೇಳಿಕೊಂಡು ಹಣ ಹಂಚಿ ಚುನಾವಣೆ ಮಾಡಿಲ್ಲ ಎಂದರು.

ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಆಯನೂರು ಮಂಜುನಾಥ್‌ ಮಾತನಾಡಿ, ಕಾರ್ಯಕರ್ತರ ಬಲವಿಲ್ಲದಿದ್ದರೆ ವಿಧಾನಪರಿಷತ್ ಚುನಾವಣೆ ಮಾಡುವುದು ಬಹಳ ಕಷ್ಟ. ಏಕೆಂದರೆ ಇರುವುದು 2800 ಮತದಾರರಿದ್ದು ಅವರ ಮನೆಗೆ ನಾವು ತಲುಪಬೇಕಾದರೇ ಒಂದೇರಡು ದಿನಗಳೇ ಬೇಕಾಗುತ್ತದೆ. ಅದೇ ಆ ಭಾಗದ ಕಾರ್ಯಕರ್ತರು ಸಮೀಪದಲ್ಲಿರುವುದರಿಂದ ಮತದಾರರನ್ನು ಒಲೈಸಲು ಸಹಕಾರಿಯಾಗುತ್ತದೆ ಪ್ರತಿಯೊಬ್ಬ ಕಾರ್ಯಕರ್ತರು ಮತದಾರರನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳನ್ನು ಹೇಳಿ ನನಗೆ ಮತ ಹಾಕುವಂತೆ ಪ್ರರೇಪಣೆ ಮಾಡಬೇಕೆಂದರು.

ಗ್ಯಾರಂಟಿ ಯೋಜನೆ ನಮ್ಮ ಕೈ ಹಿಡಿಯಲಿದೆ :
ಕೇವಲ ಹತ್ತು ತಿಂಗಳ ಅವಧಿಯಲ್ಲಿ ಜಾರಿಗೆ ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 5 ಯೋಜನೆಗಳು ನಮ್ಮ ಕೈಹಿಡಿದಿದೆ ಹಾಗೂ ಮುಂದೆಯೂ ಎಲ್ಲ ಚುನಾವಣೆಯಲ್ಲಿಯೂ ಕೈ ಹಿಡಿಯಲಿದೆ. ಎಂಬ ಭರವಸೆ ಇದೆ ಎಂದು ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ‌.ಜಿ. ಚಂದ್ರಮೌಳಿ ಹೇಳಿದ್ದು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೆ ಕೆಲಸ ಮಾಡಿದ್ದೀರಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಹಾಗೇ ಮುಂದಿರುವ ವಿಧಾನಪರಿಷತ್ ಚುನಾವಣೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಆರ್ ಗುರುರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಬಿ.ಜಿ.ನಾಗರಾಜ್, ಜಯಶೀಲಪ್ಪ ಗೌಡ, ಎರಗಿ ಉಮೇಶ್, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಎಂ.ಎಂ. ಪರಮೇಶ್, ಚಿದಂಬರ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರುಗಳು ಉಪಸ್ಥಿತರಿದ್ದರು.

Leave a Comment

error: Content is protected !!