ಹೊಸನಗರ ಪ.ಪಂ. ಜಾಗದಲ್ಲಿ ತಲೆ ಎತ್ತಿದ ಅಕ್ರಮ ಶೆಡ್ ! ತೆರವಿಗೆ ಆಗ್ರಹ

Written by Malnadtimes.in

Updated on:

WhatsApp Group Join Now
Telegram Group Join Now

Hosanagara | ಇಲ್ಲಿನ ಪಟ್ಟಣ ಪಂಚಾಯತಿ ಸರ್ವೆ ನಂಬರ್ 115ರ ಖಾಲಿ ಜಾಗದಲ್ಲಿ ಅಕ್ರಮ ಶೆಡ್ ನಿರ್ಮಾಣವಾಗಿದ್ದು ತೆರವು ಯಾವಾಗ ಎಂದು ಅಲ್ಲಿನ ನಿವಾಸಿಗಳು ಪಟ್ಟಣ ಪಂಚಾಯತಿಯನ್ನು ಕೇಳುವ ಪ್ರಸಂಗ ನಿರ್ಮಾಣವಾಗಿದೆ.

ಸರ್ವೆ ನಂಬರ್ 115ರ ಜಾಗವೂ ಈ ಹಿಂದೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಟ್ಟಿದ್ದು ಸುಮಾರು ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯತಿಗೆ ಸಮೀಪವಿರುವ ಕಾರಣ ಸರ್ವೆ ನಂಬರ್ 115ರ ಎಲ್ಲ ಜಾಗವನ್ನು ಪಟ್ಟಣ ಪಂಚಾಯತಿಗೆ ವರ್ಗಾಯಿಸಲಾಯಿತು. ಈ ಸರ್ವೆನಂಬರ್ 115ರಲ್ಲಿ ಎಲಿಪ್ಯಾಡ್‌ಗಾಗಿ ಹಾಗೂ ಪೊಲೀಸ್ ವಸತಿ ಗೃಹಕ್ಕಾಗಿ ಜಾಗ ಮಂಜೂರಾತಿ ಪಡೆದು ಪೊಲೀಸ್ ವಸತಿ ಕೊಠಡಿಯು ನಿಮಾರ್ಣವಾಗಿದೆ. ಈ ಜಾಗದ ಸುತ್ತ-ಮುತ್ತ ಪಟ್ಟಣ ಪಂಚಾಯತಿ ವ್ಯಾಪ್ತಿಯ ಖಾತೆದಾರರ ಸ್ವಂತ ಜಾಗಗಳಲ್ಲಿ ವಸತಿ ಮನೆಗಳು, ಹೋಟೆಲ್‌ಗಳು ನಿರ್ಮಾಣವಾಗಿದೆ. ಅವರಷ್ಟಕ್ಕೆ ಅವರು ದಿನನಿತ್ಯದ ವ್ಯವಹಾರ ಮಾಡಿಕೊಂಡು ಹೋಗುತ್ತಿದ್ದಾರೆ.

ತಲೆ ಎತ್ತಿದ ಅಕ್ರಮ ಶೆಡ್ !

ಸರ್ವೆ ನಂಬರ್ 115ರ ಪಟ್ಟಣ ಪಂಚಾಯತಿ ಜಾಗದಲ್ಲಿ ಕೆಲವು ತಿಂಗಳುಗಳಿಂದ ಒಂದು ಅಕ್ರಮ ಸೆಡ್ ನಿರ್ಮಾಣವಾಗಿದೆ. ಈ ಜಾಗವೂ ಸುಮಾರು 30-40 ಲಕ್ಷ ರೂ. ಬೆಲೆ ಬಾಳುವ ಪಟ್ಟಣ ಪಂಚಾಯತಿಯ ಜಾಗವಾಗಿದ್ದು ಈಗ ಶೆಡ್ ನಿರ್ಮಾಣವಾಗಿದ್ದು ಮುಂದಿನ ದಿನದಲ್ಲಿ ಭವ್ಯ ಬಂಗಲೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ತೆರವು ಯಾವಾಗ ?

ಸುಮಾರು ಒಂದು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ನಿರ್ಮಿಸಿಕೊಂಡಿದ್ದ ಪಟ್ಟಣ ಪಂಚಾಯತಿಯ ಜಾಗ ಈಗ ದಿನ ಕಳೆದಂತೆ ಬೆಳೆಯುತ್ತಿದೆ ಅಕ್ರಮವಾಗಿ ಜಾಗ ಒಳಗೆ ಬೀಳುತ್ತಿದೆ. ಈ ಶೆಡ್ ಯಾವಾಗ ತೆರವು ಮಾಡಿತ್ತೀರಿ ಎಂದು ಅಲ್ಲಿನ ನಿವಾಸಿಗಳು ಪಟ್ಟಣ ಪಂಚಾಯತಿಯವರನ್ನು ಕೇಳುತ್ತಿದ್ದು ನಿಮ್ಮಿಂದ ಅಕ್ರಮ ಶೆಡ್ ಖಾಲಿ ಮಾಡಿಸಲಾಗದಿದ್ದರೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾರಿಗುಡ್ಡದ ನಿವಾಸಿಗಳಾದ ನಾವು ತೆರವು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಹೊಸನಗರ ಮಾರಿಗುಡ್ಡದ ಸರ್ವೆ ನಂಬರ್ 115ರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗದಲ್ಲಿ ಅಕ್ರಮ ಶೆಡ್ ನಿರ್ಮಾಣವಾಗಿದೆ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಈ ವಿಷಯವನ್ನು ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ, ತಹಶೀಲ್ದಾರ್‌ರವರ ಗಮನಕ್ಕೆ ತಂದು ಒಂದು ವಾರದಲ್ಲಿ ತೆರವುಗೊಳಿಸಿ ಪಟ್ಟಣ ಪಂಚಾಯತಿ ಜಾಗ ಅಕ್ರಮ ಮಾಡಲು ಅವಕಾಶವಿಲ್ಲ ಎಂಬ ನಾಮಫಲಕ ಹಾಕಲಾಗುವುದು.
– ಮಂಜುನಾಥ್ ಪ.ಪಂ. ಮುಖ್ಯಾಧಿಕಾರಿ

Leave a Comment

error: Content is protected !!