ರಿಪ್ಪನ್ಪೇಟೆ : ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಿಢೀರ್ ಗುಡುಗು ಸಹಿತ ಭಾರಿ ಮಳೆ (Heavy Rain) ಸುರಿದು ಇಳೆ ತಂಪು ಮಾಡಿತು. ಇದರಿಂದ ಬಿಸಿಲ ಬೇಗೆಯಿಂದ ಬೆಂದು ಬಸವಳಿದ ಜನ ಮತ್ತು ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸ ಮೂಡಿಸಿತು.
ಹೈನುಗಾರಿಕೆ, ಕೃಷಿ ಬಳಕೆಗೆ ಕೊಳವೆಬಾವಿ ಹಾಗೂ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದ ಜನ ಹರ್ಷಿತರಾದರು.
ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಳೆ, ಕಾಫಿ, ಅಡಿಕೆ ತೋಟಗಳಿಗೆ ಉತ್ತಮ ನೀರು ಒದಗಿಸಿದಂತಾಗಿದೆ. ಇದುವರೆಗೂ ಬಿಸಿಲಝಳದಿಂದ ತೋಟಗಳ ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಹಳ್ಳ-ಕೊಳ್ಳ, ನದಿ, ಕೆರೆಕಟ್ಟೆ, ಕೊಳವೆಬಾವಿಗಳಿಂದ ಮೋಟರ್, ವಿದ್ಯುತ್ ಪಂಪ್ಸೆಟ್ಗಳ ಮೂಲಕ ನೀರು ಹಾಯಿಸಲು ಹೆಣಗಾಡುತ್ತಿದ್ದ ರೈತರು, ಬೆಳೆಗಾರರು ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.