ಪರಿಷತ್ ಚುನಾವಣೆ,  ಮತ ಚಲಾಯಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ

Written by Malnadtimes.in

Published on:

WhatsApp Group Join Now
Telegram Group Join Now

Ripponpet | ಇಂದು ನಡೆದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ರಿಪ್ಪನ್‌ಪೇಟೆ ಬೂತ್ ಸಂಖ್ಯೆ 44 ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪನವರು ಮೊದಲ ಮತ ಚಲಾಯಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಪದವೀಧರ ಮತ್ತು ಶಿಕ್ಷಕರ ಪ್ರಾಶಸ್ತ್ಯದ ಮತದಾನ ಮತ್ತು ಎರಡನೇ ಮತದಾನಕ್ಕೆ “ಗುರುತು’’ ಮಾಡುವ ವಿಧಾನದಲ್ಲಿ ಮತದಾರರಲ್ಲಿ ಗೊಂದಲವಿದೆ. ಇದಕ್ಕೆ ಸರಿಯಾದ ತರಬೇತಿ ನೀಡಬೇಕಾಗಿತು. ಸರ್ಕಾರ ಮುಂದಿನ ಬಾರಿಯಲ್ಲಿ ಪದವೀಧರರ ಮತ್ತು ಶಿಕ್ಷಕರ ಚುನಾವಣೆಯಲ್ಲಿನ ಮತದಾನಕ್ಕೆ ಮತದಾರರಿಗೆ ತರಬೇತಿ ನೀಡುವ ಪದ್ದತಿಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಬಾರಿಯಲ್ಲಿ ಚುನಾವಣೆಯಲ್ಲಿ ಎನ್.ಡಿ.ಎ,ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯಸರ್ಜಿ ಮತ್ತು ಎಸ್.ಎಲ್.ಭೋಜೆಗೌಡರು ಗೆಲುವು ನಿಶ್ಚಿತವಾಗಿದ್ದು ನಮ್ಮ ಚುನಾವಣಾ ಪ್ರವಾಸದಲ್ಲಿ ಉತ್ತಮ ಸ್ಪಂದನೆ ದೊರಕಿದು ನೋಡಿದರೆ ಮತದಾರರ ಒಲವು ಪಕ್ಷದ ಪರವಾಗಿರುವುದು ನಮಗೆ ಹೆಚ್ಚು ಬಹುಮತ ಬರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿ ಕಾರ್ಯಕರ್ತರು ಹಗಲು ರಾತ್ರಿ ಎಲ್ಲದೇ ಮತದಾರರನ್ನು ತಲುವು ಮೂಲಕ ಸತತ ಪ್ರಯತ್ನ ಫಲವೇ ಪಕ್ಷದ ಗೆಲುವಿಗೆ ಸಹಕಾರಿಯಾಗುವುದೆಂದು ಹೇಳಿ ಕಾರ್ಯಕರ್ತರನ್ನು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್, ತಾಲ್ಲೂಕ್ ಬಿಜೆಪಿ ಮಾಜಿ ಅಧ್ಯಕ್ಷ ಗಣಪತಿ ಬಿಳಗೋಡು, ಬಿಜೆಪಿ ಮುಖಂಡರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ನಾಗಾರ್ಜುನ ಸ್ವಾಮಿ, ಸುಂದರೇಶ್, ಸೋಮಶೇಖರ್, ಹೆಚ್.ಎಂ.ರಾಘವೇಂದ್ರ, ಪರಮೇಶ ಕೆಂಚನಾಲ, ಜಿ.ಡಿ.ಮಲ್ಲಿಕಾರ್ಜುನ, ಮುರುಳಿಧರ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

Leave a Comment

error: Content is protected !!