ಕೃಷಿ ಪರಿಕರಗಳ ವಿಸ್ತರಣಾ ಸೇವೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

By koushikgk

Published on:

Spread the love

Shivamogga:ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ “ಕೃಷಿ ಪರಿಕರಗಳ ವಿಸ್ತರಣಾ ಸೇವೆ” ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಒಂದು ವರ್ಷದ ಅವಧಿಯ ಈ ಡಿಪ್ಲೊಮಾ ಕೋರ್ಸ್ ಎರಡು ಸೆಮಿಸ್ಟರ್‌ಗಳಾಗಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.uahs.edu.in ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ನಿಗದಿತ ದಾಖಲೆಗಳೊಂದಿಗೆ ವಿಶ್ವವಿದ್ಯಾಲಯದ ಶಿವಮೊಗ್ಗ ಕಚೇರಿಗೆ ಸಲ್ಲಿಸಬೇಕು.

ಅರ್ಹತೆ:

  • ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪಾಸ್ ಆಗಿರಬೇಕು
  • ಕನಿಷ್ಠ 20 ವರ್ಷದ ವಯಸ್ಸು ಹೊಂದಿರಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

📅 ಆಗಸ್ಟ್ 14, 2025

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ: ₹200
  • ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ–1: ₹100

ವಿದ್ಯಾರ್ಥಿ ಶುಲ್ಕ:

  • ಕೋರ್ಸ್ ಸಂಪೂರ್ಣ ಶುಲ್ಕ: ₹20,000

ಡಿಮಾಂಡ್ ಡ್ರಾಫ್ಟ್ ವಿವರಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಷ್ಟ್ರೀಯಕೃತ ಬ್ಯಾಂಕ್‌ನಲ್ಲಿ Comptroller, KSNUAHS, Iruvakki, Shivamogga–577412 payable at Shivamogga ಎಂಬ ಹೆಸರಿನಲ್ಲಿ ಡಿಡಿ (DD) ತೆಗೆದು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ವಿಶ್ವವಿದ್ಯಾಲಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಯೋಜಕರು ತಿಳಿಸಿದ್ದಾರೆ.

ಹುಲಿಕಲ್ ಘಾಟ್ ನಲ್ಲಿ ಧರೆಕುಸಿತ – ಸಂಚಾರ ಸಂಪೂರ್ಣ ಸ್ಥಗಿತ!

Leave a comment