ಭಾರಿ ಮಳೆಗೆ ಕುಸಿದ ಧರೆ, ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು | ಕುಸಿದು ಬಿದ್ದ ಮನೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳುಗಡೆ ಸಂತ್ರಸ್ತರೇ ಹೆಚ್ಚು ವಾಸ ಮಾಡುತ್ತಿರುವ ಗ್ರಾಮವಾದ ಬಸವಾಪುರ – ಗುಂಡ್ರೂಮೂಲೆ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ಧರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದ್ದು ಶಾಲಾ, ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳು ಮತ್ತು ಇಲ್ಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಮೊನ್ನೆ ಸುರಿದ ಧಾರಾಕಾರ ಮಳೆಗೆ ಸೀಗೆ ಹಳ್ಳದ ನೀರು ಉಕ್ಕಿ ಹರಿದು ರಸ್ತೆಯ ಪಕ್ಕದಲ್ಲಿ ಧರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾದರೂ ಕೂಡಾ ಈವರೆಗೂ ಸ್ಥಳಕ್ಕೆ ಭೇಟಿ ನೀಡಿದೆ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಶಾಲೆ, ಕಾಲೇಜ್ ವಿದ್ಯಾರ್ಥಿಗಳಲ್ಲಿ ಮತ್ತು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು 30ಕ್ಕೂ ಅಧಿಕ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಗುಂಡ್ರೂಮೂಲೆಯಿಂದ ಬಸವಾಪುರ ಮತ್ತು ರಿಪ್ಪನ್‌ಪೇಟೆ ಹಾರೋಹಿತ್ತಲು, ಅರಸಾಳು ಹೀಗೆ ಇನ್ನಿತರ ಗ್ರಾಮಗಳಿಗೆ ತೆರಳಲು ಇರುವ ಒಂದೇ ರಸ್ತೆ ಇದಾಗಿದ್ದು ಈಗ ರಸ್ತೆ ಅಂಚಿನಲ್ಲಿ ಭಾರಿ ಪ್ರಮಾಣದ ಧರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಮೂರ್ನಾಲ್ಕು ದಿನಗಳಾದರೂ ಕೂಡಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರಿ ಮಳೆಗೆ ಕುಸಿದು ಬಿದ್ದ ಮನೆ

RIPPONPETE | ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಭಾರಿ ಮಳೆಗೆ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದ ಘಟನೆ ನಡೆದಿದೆ.

ಮಳವಳ್ಳಿ ಶೈಲಜಾ ಎಂಬುವರಿಗೆ ಸೇರಿದ ಮನೆ ಭಾರಿ ಗಾಳಿ, ಮಳೆಗೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ. ಸದಸ್ಯರು, ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಿಪ್ಪನ್‌ಪೇಟೆಯಲ್ಲಿ ಸಾಮೂಹಿಕ ಉಪನಯನ

RIPPONPETE | ವಿರಾಟ್ ವಿಶ್ವಕರ್ಮ ಸಮೂಜೋದ್ದಾರಕ ಸಂಘ ಶ್ರೀಧರ ಆಚಾರ್ಯ ಕೆಂಚನಾಲ ಇವರ ನೇತೃತ್ವದಲ್ಲಿ ಇಂದು ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಪೂಜೆ ಹಾಗೂ ಹೋಮದೊಂದಿಗೆ ಸಾಮೂಹಿಕ ಉಪನಯನ ಜರುಗಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ ಆಚಾರ್ಯ, ಉಪಾಧ್ಯಕ್ಷ ರವಿ ಆಚಾರ್, ಕಾರ್ಯದರ್ಶಿ ಸುದೇಶ್ ಆಚಾರ್, ರಾಮಚಂದ್ರ ಆಚಾರ್, ರಾಜೇಂದ್ರ ಆಚಾರ್, ಗ್ಯಾರೆಂಜ್ ಮಂಜುನಾಥ ಆಚಾರ್, ಕೃಷ್ಣ ಆಚಾರ್, ಶಶಿಧರ ಆಚಾರ್, ಪ್ರವೀಣ್ ಆಚಾರ್, ಇನ್ನಿತರರು, ವಿಶ್ವಕರ್ಮ ಸಮಾಜ ಪದಾಧಿಕಾರಿಗಳು ಹಾಜರಿದ್ದರು.

Leave a Comment

error: Content is protected !!