ಶಿಕ್ಷಣದಿಂದ ಉದ್ಯೋಗ ಕನಸಿನ ಮಾತು ; ಡಾ. ಉಮೇಶ್

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಶಿಕ್ಷಣಕ್ಕೂ ಉದ್ಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಶಿಕ್ಷಣದಿಂದ ಉದ್ಯೋಗ ಕನಸಿನ ಮಾತಾಗಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದಿಂದ ಹೆಚ್ಚು ಕ್ರಿಯಾಶೀಲರಾಗಿ ಸುಸಂಸ್ಕೃತ ಸಮಾಜದ ವ್ಯಕ್ತಿಯಾಗಲು ಸಾಧ್ಯ ಶಿಕ್ಷಣ ಜ್ಞಾನವನ್ನು ಕೊಡುತ್ತದೆ. ಅನುಭವದ ಮೂಲಕ ಉದ್ಯೋಗವನ್ನು ಹುಡುಕಿಕೊಳ್ಳಬೇಕು ಎಂದು ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಡಾ.ಉಮೇಶ್ ಕೆ.ಹೇಳಿದರು.

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಆಯೋಜಿಸಲಾದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್. ಯುವರೆಡ್‌ ಕ್ರಾಸ್, ರೆಡ್‌ರಿಬ್ಬನ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ, ಸಾಂಸ್ಕೃತಿಕ ಮತ್ತು ಕ್ರೀಡೆ ಹಾಗೂ ಎನ್.ಎಸ್.ಎಸ್.ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೇವಾ ಕಾರ್ಯದಿಂದ ಕೌಶಲ್ಯಯುವ ಶಿಕ್ಷಣ ದೊರತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಾಗುವುದೆಂದ ಅವರು, ವಿದ್ಯಾರ್ಥಿಗಳಿಗೆ ಸಂಸ್ಕಾರ ಮುದ್ರೆ ಕೊಟ್ಟಾಗ ಸಮಾಜದಲ್ಲಿ ಮಾರಕ ವ್ಯಕ್ತಿಯಾಗದೇ ಸುಸಂಸ್ಕೃತ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವೆಂದರು. ದೇಶವನ್ನು ಕಟ್ಟುವ ಕಲುಷತ ವಾತಾವರಣವನ್ನು ಸೃಷ್ಠಿಸುವ ಶಕ್ತಿ ಯುವಕರಲ್ಲಿದ್ದು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಚಿಂತನಾ ಶಕ್ತಿ ಯುವಜನಾಂಗದಾಗಿದೆ ಎಂದರು.

ದೇಶವನ್ನು ಬದಲಾವಣೆ ಮಾಡಲು ವಿದ್ಯಾರ್ಥಿ ಸಮೂಹ ಜಾಗೃತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.

ಈ ಸಮಾರೋಪ ಸಮಾರಂಭವನ್ನು ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಲಸ್ವಾಮಿಗೌಡರು ಬೆಳಕೋಡು ಉದ್ಘಾಟಿಸಿದರು.
ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಪ್ರಾಚಾರ್ಯ ಡಾ.ಹೆಚ್.ಎನ್.ವಿರೂಪಾಕ್ಷಪ್ಪ ವಹಿಸಿದ್ದರು.

ಗ್ರಾಮ ಪಂಚಾಯಿತ್ ಆಧ್ಯಕ್ಷೆ ಧನಲಕ್ಷ್ಮಿ ಗಂಗಾಧರ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಿಡಿಸಿ ಸಮಿತಿಯ ಗಣಪತಿ ಗವಟೂರು, ಆರ್.ಹೆಚ್.ಶ್ರೀನಿವಾಸ ಆಚಾರ್, ಮಂಜುನಾಥ ಕಾಮತ್, ಉಲ್ಲಾಸ್‌ ತೆಂಕೋಲ, ಫ್ಯಾನ್ಸಿ, ರಮೇಶ್, ರಘೂ, ಅನೀಷಾ, ಪಿಯೂಸ್ ರೋಡ್ರಿಗಸ್, ವಿಜೇಂದ್ರ, ಹಾರಂಬಳ್ಳಿ ಹಾಗೂ ಉಪನ್ಯಾಸಕ ವೃಂದ ಹಾಜರಿದ್ದರು
ಉಪನ್ಯಾಸಕಿ ಶಿಲ್ಪ ಸ್ವಾಗತಿಸಿದರು.

ಉಪನ್ಯಾಸಕ ನರೇಂದ್ರಕುಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರು ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!